ಮನೆಯೊಳಗಿದ್ದ ಗ್ಯಾಸ್​ ಸಿಲಿಂಡರ್ ತಡರಾತ್ರಿ ವೇಳೆ ಸ್ಫೋಟ; ನಿದ್ರೆಯಲ್ಲಿದ್ದ ದಂಪತಿ ದುರ್ಮರಣ

ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ತಡರಾತ್ರಿ ವೇಳೆ ಏಕಾಏಕಿ ಸ್ಫೋಟಿಸಿದ ಕಾರಣ ಪ್ರಕಾಶ್ ಹಾಗೂ ಸರೋಜಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಿಸಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಮನೆಯೊಳಗಿದ್ದ ಗ್ಯಾಸ್​ ಸಿಲಿಂಡರ್ ತಡರಾತ್ರಿ ವೇಳೆ ಸ್ಫೋಟ; ನಿದ್ರೆಯಲ್ಲಿದ್ದ ದಂಪತಿ ದುರ್ಮರಣ
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು
TV9kannada Web Team

| Edited By: Skanda

Jul 21, 2021 | 11:00 AM

ಚಿತ್ರದುರ್ಗ: ತಡರಾತ್ರಿ ವೇಳೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Cylinder Blast) ದಂಪತಿ ಸಾವಿಗೀಡಾದ ದಾರುಣ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ. ಹೊಳಲ್ಕೆರೆ ಸಮೀಪದ ಕೊಳಾಳ್ ತೇಕಲವಟ್ಟಿ ಎಂಬ ಗ್ರಾಮದ ಮನೆಯೊಂದರಲ್ಲಿ ಅವಘಡ ಸಂಭವಿಸಿದ್ದು, ಪ್ರಕಾಶ್ (54 ವರ್ಷ) ಹಾಗೂ ಸರೋಜಮ್ಮ (45 ವರ್ಷ) ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ತಡರಾತ್ರಿ ವೇಳೆ ಏಕಾಏಕಿ ಸ್ಫೋಟಿಸಿದ ಕಾರಣ ಪ್ರಕಾಶ್ ಹಾಗೂ ಸರೋಜಮ್ಮ ಇಬ್ಬರೂ ಮೃತಪಟ್ಟಿದ್ದಾರೆ (Death). ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಿಸಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

CYLINDER EXPLOSION

ಸಿಲಿಂಡರ್​ ಸ್ಪೋಟದಿಂದ ಮನೆಯ ಹೊರಭಾಗಕ್ಕೂ ಹಾನಿ

ಸಿಲಿಂಡರ್​ ಸ್ಫೋಟದಿಂದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮನೆಯೊಂದು ಕುಸಿದು ಬಿದ್ದು, ನಾಲ್ವರು ಸಾವಿಗೀಡಾದ ದುರಂತ ಘಟನೆ ನಡೆದಿತ್ತು. ಮುನ್ನಿ ದೇವಿ (45), ನರೇಶ್​ (22), ಓಂ ಪ್ರಕಾಶ್ (20) ಮತ್ತು ಸುಮನ್​ (18) ಎಂಬ ನಾಲ್ವರು ಮೃತಪಟ್ಟಿದ್ದರು. ಇವರಲ್ಲಿ ಮೂವರು ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದರು ಎಂದು ಪೊಲೀಸರು ಹೇಳಿದ್ದರು.

ಗ್ಯಾಸ್​ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರ ಬೆಂಗಳೂರು: ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರಗೊಂಡ ದುರ್ಘಟನೆಯೊಂದು ಬೆಂಗಳೂರಿನ ರಿಚ್​ಮಂಡ್​ ಸರ್ಕಲ್ ಬಳಿ ಇತ್ತೀಚೆಗಷ್ಟೇ ನಡೆದಿತ್ತು.. ಲ್ಯಾಂಗ್​ಫೋರ್ಡ್​ ಹೌಸ್​ ಅಪಾರ್ಟ್​ಮೆಂಟ್​ನಲ್ಲಿ ಹುಟ್ಟುಹಬ್ಬ ಆಚರಣೆಗೆ ಬಲೂನ್ ಪೂರೈಕೆಗೆ ಬಂದಿದ್ದ ಯುವಕ ದುರ್ಘಟನೆಯಲ್ಲಿ ಮೃತಪಟ್ಟಿದ್ದ. ಅಪಾರ್ಟ್​ಮೆಂಟ್ ಹೊರಗೆ ಬಲೂನ್​ಗೆ ಗ್ಯಾಸ್​ ಫಿಲ್ಲಿಂಗ್ ಮಾಡುತ್ತಿದ್ದಾಗ ಏಕಾಏಕಿ ಗ್ಯಾಸ್​ ಸ್ಫೋಟಗೊಂಡು ಅನಾಹುತ ಸಂಭವಿಸಿತ್ತು. ಮೃತಪಟ್ಟ ಯುವಕ ತಮಿಳುನಾಡು ಮೂಲದವನು ಎಂಬ ಮಾಹಿತಿ ದೊರೆತಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಮಾಹಿತಿ ಲಭ್ಯವಾಗಿತ್ತು.

ಬಲೂನ್ ಗ್ಯಾಸ್ ಸಹಿತ ಬೈಕ್​ನಲ್ಲಿ ತನ್ನ ಜತೆಗಾರನೊಂದಿಗೆ ವ್ಯಕ್ತಿ ಬಂದಿದ್ದ . ಅಪಾರ್ಟ್‌ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ನಡೆಸುತ್ತಿದ್ದ. ಜತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ. ಈ ವೇಳೆ ಒಬ್ಬನೇ ಬಲೂನ್ ಫಿಲ್ ಮಾಡುವ ವೇಳೆ ದುರ್ಘಟನೆ ನಡೆದಿದೆ. ಮನೆಯ ಹೊರಗಡೆ ಬಲೂನ್ ಗ್ಯಾಸ್ ಸಿಡಿದು ಯುವಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್ 

LPG Cylinder: ಸ್ಮಾರ್ಟ್​ ಆಗಲಿದೆ ಎಲ್​ಪಿಜಿ ಸಿಲಿಂಡರ್; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada