LPG Cylinder: ಸ್ಮಾರ್ಟ್​ ಆಗಲಿದೆ ಎಲ್​ಪಿಜಿ ಸಿಲಿಂಡರ್; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಿಂದ "ಇಂಡೇನ್ ಕಾಂಪೋಸಿಟ್ ಸಿಲಿಂಡರ್ಸ್" ಎಂಬ ಹೊಸ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸಸ್ (LPG) ಸಿಲಿಂಡರ್ಸ್​ನ ಹೊಸ ಬ್ರ್ಯಾಂಡ್ ಜಾರಿಗೊಳಿಸಲಾಗಿದೆ.

LPG Cylinder: ಸ್ಮಾರ್ಟ್​ ಆಗಲಿದೆ ಎಲ್​ಪಿಜಿ ಸಿಲಿಂಡರ್; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 17, 2021 | 1:46 PM

ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಿಂದ (IOCL) ಹೊಸ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸಸ್ (LPG) ಸಿಲಿಂಡರ್ಸ್​ನ ಹೊಸ ಬ್ರ್ಯಾಂಡ್ ಜಾರಿಗೊಳಿಸಲಾಗಿದೆ. ಈ ಹೊಸ ಬ್ರ್ಯಾಂಡ್​ನ ಎಲ್​ಪಿಜಿ ಸಿಲಿಂಡರ್​ ಅನ್ನು “ಇಂಡೇನ್ ಕಾಂಪೋಸಿಟ್ ಸಿಲಿಂಡರ್ಸ್” ಎಂದು ಕರೆಯಲಾಗಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಯಿಂದ ಹಗುರವಾದ ಉತ್ಪನ್ನಗಳ ಪ್ರಯತ್ನವಾಗಿ ಇದನ್ನು ಮಾಡಲಾಗುತ್ತಿದೆ. ಈ ಮೂಲಕ ಗ್ರಾಹಕರು ಮುಂದಿನ ರೀಫಿಲ್ ಸುಲಭವಾಗಿ ಮಾಡಿಸಬಹುದು. ಈ ತನಕ ಸಿಲಿಂಡರ್​ ತೂಕ ಭಾರೀ ಗಾತ್ರದಲ್ಲಿ ಇರುತ್ತಿತ್ತು. ಸಾಂಪ್ರದಾಯಿಕವಾಗಿ ಭಾರೀ ಸ್ಟೀಲ್ ಹೊಂದಿರುತ್ತಿತ್ತು. ಇದನ್ನೇ ಹಲವು ವರ್ಷಗಳಿಂದ ಬಳಸುತ್ತಾ ಬರಲಾಗುತ್ತಿತ್ತು.

ಏನಿದು ಎಲ್​ಪಿಜಿ ಕಾಂಪೋಸಿಟ್ ಸಿಲಿಂಡರ್? ಇದು ಮೂಲತಃ ಮೂರು ಪದರಿನ ಸಿಲಿಂಡರ್. ಅತ್ಯಂತ ಒಳಭಾಗದ ಪದರದಲ್ಲಿ ಹೈ ಡೈನ್ಸಿಟಿ ಪಾಲಿಎಥಿಲೀನ್ (HDPE) ಲೈನಿಂಗ್ ಮೊದಲಿಗೆ ಹೊಂದಿರುತ್ತದೆ. ಎರಡನೇ ಪದರದಲ್ಲಿ ಕಾಂಪೋಸಿಟ್ ಪದರವಾಗಿದ್ದು, ಪಾಲಿಮರ್​ನಿಂದ ಸುತ್ತಿದ ಫೈಬರ್​ ಗ್ಲಾಸ್ ಇರುತ್ತದೆ. ಇನ್ನು ಕೊನೆಯದಾಗಿ ಎಚ್​ಡಿಪಿಇ ಹೊರಗಿನ ಜಾಕೆಟ್ ಹೊಂದಿರುತ್ತದೆ.

ಎಲ್​ಪಿಜಿ ಕಾಂಪೊಸಿಟ್ ಸಿಲಿಂಡರ್ ಅನುಕೂಲಗಳು ಈ ಹಿಂದಿನ ಸ್ಟೀಲ್ ಸಿಲಿಂಡರ್​ಗೆ ಹೋಲಿಸಿದರೆ ಈಗಿನದು ಅರ್ಧದಷ್ಟು ಹಗುರವಾಗಿರುತ್ತದೆ ಎಂದು ಐಒಸಿಎಲ್ ವೆಬ್​ಸೈಟ್ ತಿಳಿಸಿದೆ. ಟ್ರಾನ್ಸುಲೆಸೆಂಟ್ ಬಾಡಿಯೊಂದಿಗೆ ಬರುತ್ತದೆ. ಗ್ರಾಹಕರು ಕಣ್ಣೆದುರೇ ನೋಡಿ ಪರೀಕ್ಷಿಸಬಹುದು ಮತ್ತು ತಾವು ಎಷ್ಟು ಅನಿಲ ಬಳಸುತ್ತಾರೆ ಹಾಗೂ ಎಷ್ಟು ಹಗುರವಾಗಿದೆ ಎಂಬುದರ ಆಧಾರದಲ್ಲಿ ತಿಳಿಯಬಹುದು. ಮುಂದಿನ ರೀಫಿಲ್ ಯಾವಾಗ ಮಾಡಿಸಿಕೊಳ್ಳಬೇಕು ಎಂದು ಯೋಜನೆ ಮಾಡಿಕೊಳ್ಳುವುದಕ್ಕೆ ಗ್ರಾಹಕರಿಗೆ ಅನುಕೂಲ ಆಗುವಂತೆ ಇದನ್ನು ರೂಪಿಸಲಾಗಿದೆ. ಎಚ್​ಡಿಪಿಇ ಮೇಕ್ ಅಪ್​ನಿಂದ ಹಹಲವು ಅನುಕೂಲ ಆಗುತ್ತದೆ. ಈ ಹಿಂದೆ ಸ್ಟೀಲ್ ಸಿಲಿಂಡರ್​ಗಳು ತುಕ್ಕು ಹಿಡಿಯುತ್ತಿದ್ದವು. ಆದರೆ ಹೊಸದು ಬಂದ ಮೇಲೆ ಹಾಗೆ ಆಗುವುದಿಲ್ಲ. ಆಧುನಿಕ ಅಡುಗೆ ಕೋಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಸಿಲಿಂಡರ್​ ರೂಪಿಸಲಾಗಿದ್ದು, ಅಂದವಾಗಿಯೂ ಕಾಣಿಸುತ್ತದೆ.

ಎಲ್​ಪಿಜಿ ಕಾಂಪೊಸಿಟ್ ಸಿಲಿಂಡರ್ ಯಾವಾಗಿಂದ ಸಿಗುತ್ತದೆ? ಸದ್ಯಕ್ಕೆ ಈ ಸಿಲಿಂಡರ್ ದೆಹಲಿ, ಗುರ್​ಗಾಂವ್, ಹೈದರಾಬಾದ್, ಫರೀದಾಬಾದ್, ಲುಧಿಯಾನದಂಥ ಆಯ್ದ ಸ್ಥಳಗಳಲ್ಲಿ ಮಾತ್ರ ಲಭ್ಯ ಇದೆ. ಐಒಸಿಎಲ್ ಘೋಷಣೆ ಮಾಡಿರುವಂತೆ, ಶೀಘ್ರದಲ್ಲೇ ಇಡೀ ದೇಶದಾದ್ಯಂತ ಸಿಗುತ್ತದೆ. ಈಗ ಎಲ್ಲೆಲ್ಲಿ ಸಿಲಿಂಡರ್​ ಸಿಗುತ್ತಿದೆಯೋ ಅಲ್ಲಿ 5 ಕೇಜಿ ಮತ್ತು 10 ಕೇಜಿ -ಈ ಎರಡು ತೂಕದಲ್ಲಿ ಲಭ್ಯ ಇದೆ.

ಗ್ರಾಹಕರು ಈಗಿನ ಸ್ಟೀಲ್ ಎಲ್​ಪಿಜಿ ಸಿಲಿಂಡರ್​ ಅನ್ನು ಕಾಂಪೊಸಿಟ್ ಜತೆಗೆ ಬದಲಿಸಿಕೊಳ್ಳಬಹುದು. ಭದ್ರತಾ ಠೇವಣಿಯಲ್ಲಿನ ವ್ಯತ್ಯಾಸದ ಮೊತ್ತವನ್ನು ಪಾವತಿಸಿದರೆ ಆಯಿತು. 10 ಕೇಜಿ ತೂಕದ ನಾನ್ ಸಬ್ಸಿಡೈಸ್ಡ್ ವಿಭಾಗದ ಸಿಲಿಂಡರ್​ಗಳಿಗೆ ಠೇವಣಿ ರೂ. 3350 ಇದ್ದರೆ, 5 ಕೇಜಿ ತೂಕಕ್ಕೆ 2150 ರೂಪಾಯಿ ಇದೆ.

ಎಲ್​ಪಿಜಿ ಕಾಂಪೊಸಿಟ್ ಸಿಲಿಂಡರ್​ಗಳ ದರ ಮತ್ತು ಬುಕ್ ಮಾಡುವುದು ಹೇಗೆ? ಎಫ್​ಟಿಎಲ್​ ವಿಭಾಗದಲ್ಲಿ ಒಂದೇ ಬಗೆಯ ಕಾಂಪೊಸಿಟ್​ ಸಿಲಿಂಡರ್ ದೊರೆಯುತ್ತದೆ. ಸದ್ಯಕ್ಕೆ 5 ಕೇಜಿಯ ಕಾಂಪೊಸಿಟ್ ಸಿಲಿಂಡರ್ ಎಫ್​ಟಿಎಲ್ ಕಾಂಪೊಸಿಟ್ ಸಿಲಿಂಡರ್ ಆಗಿ ರೂ. 2537 ಹಾಗೂ ಜಿಎಸ್​ಟಿ ಸೇರ್ಪಡೆ ಆಗುತ್ತದೆ. ಆಯಾ ಕಾಲಕ್ಕೆ ಮತ್ತು ಸ್ಥಳಕ್ಕೆ ರೀಫಿಲ್ ವೆಚ್ಚವು ಬದಲಾಗುತ್ತದೆ. 10 ಕೇಜಿ ಹಾಗೂ 5 ಕೇಜಿಯ ಎರಡೂ ವೇರಿಯಂಟ್ ಮನೆಗೆ ಡೆಲಿವರಿ ಮಾಡುವ ಅವಕಾಶ ಇದೆ.

ಈ ತಿಂಗಳು ಎಲ್​ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಆಗಿದೆ. 14.2 ಕೇಜಿ ತೂಕದ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಳವಾಗಿದೆ. 19 ಕೇಜಿಗೆ 75 ರೂಪಾಯಿ ಆಗಿದೆ. ಈ ಹೊಸ ದರವು ಜುಲೈ 1ರಂದು ಜಾರಿಗೆ ಬಂದಿದೆ. ದೇಶೀ ಎಲ್​ಪಿಜಿ ಸಿಲಿಂಡರ್ 14.2 ಕೇಜಿ ತೂಕಕ್ಕೆ ದೆಹಲಿ, ಮುಂಬೈನಲ್ಲಿ 809 ರೂಪಾಯಿ ಆಗುತ್ತದೆ. ಚೆನ್ನೈನಲ್ಲಿ ರೂ. 825, ಕೋಲ್ಕತ್ತಾದಲ್ಲಿ ರೂ. 835.50 ಇದೆ. ದೆಹಲಿಯಲ್ಲಿ 19 ಕೇಜಿ ತೂಕದ ಸಿಲಿಂಡರ್ಸ್​ಗೆ ರೂ. 1473.50, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ರೂ. 1544.50, ರೂ. 1422.50, ರೂ. 1603 ಇದೆ. ​

ಇದನ್ನೂ ಓದಿ: LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ

(Indane Composite LPG cylinder introduced by IOCL. Here is the complete details of smart- light weight cylinder)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್