Income Tax Returns: ದೇಶದಾದ್ಯಂತ ಇರುವ ಯಾವುದೇ ಪೋಸ್ಟ್​ ಆಫೀಸ್​ನಲ್ಲಿ ಐಟಿಆರ್ ಫೈಲಿಂಗ್​ಗೆ ಅವಕಾಶ

ಆದಾಯ ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ಅನ್ನು ತಮಗೆ ಹತ್ತಿರದ ಪೋಸ್ಟ್​ ಆಫೀಸ್​ನ ಕಾಮನ್ ಸರ್ವೀಸ್ ಸೆಂಟರ್​ನಲ್ಲಿ (CSC) ಮಾಡಬಹುದು. ಈ ಬೆಳವಣಿಗೆಯಿಂದ ದೊಡ್ಡ ಅನುಕೂಲ ಆಗಿದೆ ಎಂದು ಇಂಡಿಯಾ ಪೋಸ್ಟ್ ಘೋಷಣೆ ಮಾಡಿದೆ.

Income Tax Returns: ದೇಶದಾದ್ಯಂತ ಇರುವ ಯಾವುದೇ ಪೋಸ್ಟ್​ ಆಫೀಸ್​ನಲ್ಲಿ ಐಟಿಆರ್ ಫೈಲಿಂಗ್​ಗೆ ಅವಕಾಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 17, 2021 | 6:15 PM

ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ಅನ್ನು ತಮಗೆ ಹತ್ತಿರದ ಪೋಸ್ಟ್​ ಆಫೀಸ್​ನ ಕಾಮನ್ ಸರ್ವೀಸ್ ಸೆಂಟರ್​ನಲ್ಲಿ (CSC) ಮಾಡಬಹುದು. ಈ ಬೆಳವಣಿಗೆಯಿಂದ ದೊಡ್ಡ ಅನುಕೂಲ ಆಗಿದೆ ಎಂದು ಇಂಡಿಯಾ ಪೋಸ್ಟ್ ಘೋಷಣೆ ಮಾಡಿದೆ. ಜುಲೈ 14ನೇ ತಾರೀಕಿನಂದು ಅದರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಿಂದಲೂ ಈ ಬಗ್ಗೆ ಘೋಷಣೆ ಮಾಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್​ಗಾಗಿ ದೂರ ಪ್ರಯಾಣ ಮಾಡಬೇಕಾಗಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಸಿಎಸ್​ಸಿ ಕೌಂಟರ್​ನಲ್ಲಿ ಆದಾಯ ತೆರಿಗೆ ರಿಟರ್ನ್ಸ್​ ಸೇವೆಯನ್ನು ಸುಲಭವಾಗಿ ಪಡೆಯಬಹುದು ಎಂದು ಹೇಳಲಾಗಿದೆ.

ಪೋಸ್ಟ್​ ಆಫೀಸ್​ನ ಕಾಮನ್​ ಸರ್ವೀಸ್ ಸೆಂಟರ್​ ಕೌಂಟರ್​ಗಳು ದೇಶದಾದ್ಯಂತ ಇವೆ. ಅಲ್ಲಿ ಪೋಸ್ಟಲ್, ಬ್ಯಾಂಕಿಂಗ್, ಇನ್ಷೂರೆನ್ಸ್ ಸೇವೆಗಳನ್ನು ಜನರಿಗೆ ಒಂದೇ ಕಡೆಯಲ್ಲಿ ಒದಗಿಸಲಾಗುತ್ತಿದೆ. ಈ ಸಿಎಸ್​ಸಿ ಕೌಂಟರ್​ಗಳಲ್ಲಿ ಸರ್ಕಾರದ ಸೇವೆಗಳು ಮತ್ತು ಮಾಹಿತಿಗಳು ಹಲವಾರು ಸಿಗುತ್ತವೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಇತರ ಹಲವು ಡಿಜಿಟಲ್ ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತದೆ. ಆದಾಯ ತೆರಿಗೆ ವೆಬ್​ಸೈಟ್​ ಆದ https://www.incometax.gov.in./ ಹೊರತುಪಡಿಸಿ ತೆರಿಗೆ ಪಾವತಿದಾರರು ಪೋಸ್ಟ್​ ಆಫೀಸ್​ನ ಕಾಮನ್ ಸರ್ವೀಸ್ ಸೆಂಟರ್​ಗಳನ್ನು ಬಳಸಿಕೊಳ್ಳಬಹುದು.

ಹಲವರಿಗೆ ಆನ್​ಲೈನ್ ಮೂಲಕ ಫೈಲಿಂಗ್ ಮಾಡುವುದು ಸಲೀಸು ಎನಿಸುತ್ತದೆ. ಆದರೆ ಕೆಲವು ತಾಂತ್ರಿಕವಾಗಿ ತಿಳಿವಳಿಕೆ ಇದ್ದರೂ ಪೋಸ್ಟ್ ಆಫೀಸ್ ಸಿಎಸ್​ಸಿ ಬಳಸಿಕೊಂಡು ಐಟಿಆರ್ ಫೈಲಿಂಗ್ ಮಾಡುತ್ತಾರೆ. ಹೊಸ ಆದಾಯ ತೆರಿಗೆ ಪೋರ್ಟಲ್ ಆದ https://www.incometax.gov.in./ ಅನ್ನು ಜೂನ್ 7ನೇ ತಾರೀಕಿನಂದು ಆರಂಭಸಲಾಯಿತು. ಆದರೆ ಅದರಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಬಗ್ಗೆ ವರದಿ ಆಯಿತು. ಆ ನಂತರ ಜೂನ್ 22ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೆಬ್​ಸೈಟ್ ಅಭಿವೃದ್ಧಿ ಪಡಿಸಿದ್ದ ಇನ್ಫೋಸಿಸ್ ಅಧಿಕಾರಿಗಳ ಸಭೆಯನ್ನು ಕರೆದು, ಸಮಸ್ಯೆಯನ್ನು ಸರಿಪಡಿಸುವಂತೆ ಕೇಳಿದ್ದರು.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ಬಾರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಿಗುವ 6 ಅನುಕೂಲಗಳಿವು

(Income tax return (ITR) can filed in any nearest post office. Here is the details)

Published On - 6:14 pm, Sat, 17 July 21