LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ

ಅಂತಾರಾಷ್ಟ್ರೀಯ ಮಾನದಂಡದ ದರ ಮತ್ತು ಯುಎಸ್​ ಡಾಲರ ಹಾಗೂ ರೂಪಾಯಿ ವಿನಿಮಯ ದರ ಆಧರಿಸಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ.

LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jul 01, 2021 | 12:50 PM

ಎಲ್​ಪಿಜಿ (ಲಿಕ್ವಿಡ್​ ಪೆಟ್ರೋಲಿಯಂ ಗ್ಯಾಸ್​) ಗ್ಯಾಸ್​ ಸಿಲಿಂಡರ್​ ಬೆಲೆಯನ್ನು ಇಂದು ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚಿಸಿದ್ದು, ಅದರ ಅನ್ವಯ ಗೃಹ ಬಳಕೆ ಸಿಲಿಂಡರ್​ ಬೆಲೆ (ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ) 25 ರೂ.ಹೆಚ್ಚಾಗಿದೆ. ಅಂದರೆ ದೆಹಲಿಯಲ್ಲಿ ಇಂದಿನಿಂದ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್​ ಬೆಲೆ 834.50 ರೂ.ಆಗಿದೆ. ಹಾಗೇ, ರಾಷ್ಟ್ರರಾಜಧಾನಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಬಳಕೆ ಗ್ಯಾಸ್​ ಸಿಲಿಂಡರ್ ಬೆಲೆ 76 ರೂ. ಹೆಚ್ಚಾಗಿದ್ದು, ಇಂದಿನಿಂದ 1,550 ರೂ.ಆಗಿದೆ.

ಈ ಹಿಂದೆ 14.2 ಕೆಜಿ ಸಿಲಿಂಡರ್​​ ಬೆಲೆ ದೆಹಲಿ ಮತ್ತು ಮುಂಬೈಗಳಲ್ಲಿ  809 ರೂ.ಇತ್ತು. ಅದೀಗ  834.5 ರೂ. ಗೆ ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾನದಂಡದ ದರ ಮತ್ತು ಯುಎಸ್​ ಡಾಲರ ಹಾಗೂ ರೂಪಾಯಿ ವಿನಿಮಯ ದರ ಆಧರಿಸಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಅದರಂತೆ ಇಂದು ಹೆಚ್ಚಾಗಿದ್ದು, ಅದರ ಅನ್ವಯ ಪ್ರಮುಖ ನಗರಗಳಲ್ಲಿ 14 ಕೆಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್​ ದರ ಹೀಗಿದೆ.. ದೆಹಲಿ- 834.50 ರೂ. ಕೋಲ್ಕತ್ತ-861 ರೂ. ಮುಂಬೈ-834.50 ರೂ. ಚೆನ್ನೈ -850.50 ರೂ.

ಇನ್ನು 19 ಕೆಜಿ ಎಲ್​ಪಿಜಿ ಸಿಲಿಂಡರ್​ ಗ್ಯಾಸ್​ ಬೆಲೆ 76 ರೂಪಾಯಿ ಹೆಚ್ಚಾಗಿದ್ದು, ಮಹಾನಗರಗಳಲ್ಲೀಗ ಸಾವಿರ ರೂಪಾಯಿ ದಾಟಿದೆ. ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್​ ಬೆಲೆ 1473.50 ರೂ., ಕೋಲ್ಕತ್ತ, ಮುಂಬೈ, ಚೆನ್ನೈಗಳಲ್ಲಿ  ಕ್ರಮವಾಗಿ 1,544.50 ರೂ. 1,1422 ರೂ. ಮತ್ತು 1,603 ರೂ.ಆಗಿದೆ.

ಇದನ್ನೂ ಓದಿ: ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕೆ ಅನುಮತಿ ನಿರಾಕರಿಸಿದ ಡಿಸಿಜಿಐ; ಸಿಂಗಲ್​ ಡೋಸ್​ ವ್ಯಾಕ್ಸಿನ್​ ಬಳಕೆ ಸದ್ಯಕ್ಕಿಲ್ಲ

LPG Cylinder Price Increased By Oil Marketing Companies

Published On - 12:39 pm, Thu, 1 July 21