AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shopsy App: ಸ್ಥಳೀಯ ಉದ್ಯಮಿಗಳ ನೆರವಿಗಾಗಿ ಫ್ಲಿಪ್​ಕಾರ್ಟ್​ನಿಂದ ಆರಂಭವಾಯಿತು ಹೊಸ ಆ್ಯಪ್​​; ಇದರ ಕೆಲಸ ಏನು ಗೊತ್ತಾ?

ಫ್ಲಿಪ್​ಕಾರ್ಟ್​ನಿಂದ Shopsy ಆ್ಯಪ್ ಅನಾವರಣಗೊಳಿಸಲಾಗಿದೆ. ಭಾರತೀಯ ಉದ್ಯಮ ಸಂಸ್ಥೆಗಳವರು ಆರಂಭ ಹೂಡಿಕೆ ಇಲ್ಲದೆ ಸ್ವಂತವಾಗಿ ಆನ್​ಲೈನ್​ ಉದ್ಯಮ ಮಾಡಬಹುದು.

Shopsy App: ಸ್ಥಳೀಯ ಉದ್ಯಮಿಗಳ ನೆರವಿಗಾಗಿ ಫ್ಲಿಪ್​ಕಾರ್ಟ್​ನಿಂದ ಆರಂಭವಾಯಿತು ಹೊಸ ಆ್ಯಪ್​​; ಇದರ ಕೆಲಸ ಏನು ಗೊತ್ತಾ?
ಫ್ಲಿಪ್​ಕಾರ್ಟ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Srinivas Mata

Updated on:Jul 01, 2021 | 6:24 PM

ಫ್ಲಿಪ್​ಕಾರ್ಟ್​ನಿಂದ ಗುರುವಾರ Shopsy ಆ್ಯಪ್ ಅನಾವರಣಗೊಳಿಸಲಾಗಿದೆ. ಈ ಆ್ಯಪ್​ ಮೂಲಕವಾಗಿ ಭಾರತೀಯ ಉದ್ಯಮ ಸಂಸ್ಥೆಗಳವರು ಆರಂಭ ಹೂಡಿಕೆ ಇಲ್ಲದೆ ಸ್ವಂತವಾಗಿ ಆನ್​ಲೈನ್​ ಉದ್ಯಮ ಮಾಡಬಹುದು. Shopsy ಆ್ಯಪ್ 15 ಕೋಟಿ ಉತ್ಪನ್ನಗಳನ್ನು ಆಫರ್​ ಮಾಡುತ್ತದೆ. ಅದರಲ್ಲಿ ಫ್ಯಾಷನ್, ಬ್ಯೂಟಿ. ಮೊಬೈಲ್​ಗಳು, ಮನೆಗೆ ಬೇಕಾದ ಪರಿಕರಗಳು ಹೀಗೆ ನಾನಾ ಉತ್ಪನ್ನಗಳನ್ನು ವೈಯಕ್ತಿಕ ಉದ್ಯಮಿಗಳಿಗೆ ಒದಗಿಸುತ್ತದೆ. Shopsy ಆ್ಯಪ್ ಮೂಲಕವಾಗಿ 2023ರ ಹೊತ್ತಿಗೆ 2.50 ಕೋಟಿಗೂ ಹೆಚ್ಚು ಆನ್​ಲೈನ್​ ಉದ್ಯಮದಾರರಿಗೆ ವೇದಿಕೆ ಒದಗಿಸುವುದಕ್ಕೆ ಗುರಿ ಹಾಕಿಕೊಂಡಿದೆ. “ಈಗ, ಯಾರು ಬೇಕಾದರೂ ಎಲ್ಲಿಂದಲಾದರೂ ತಮ್ಮ ಸ್ವಂತ ಆನ್​ಲೈನ್ ಉದ್ಯಮ ಆರಂಭಿಸಬಹುದು. ಅದಕ್ಕೆ ಯಾವ ಬಂಡವಾಳವೂ ಬೇಡ. ಇದರ ಜತೆಗೆ ನಾವು ಫ್ಲಿಪ್​ಕಾರ್ಟ್​ನಿಂದ ಭಾರತೀಯ ಉದ್ಯಮಿಗಳಿಗಾಗಿ ಇ-ಕಾಮರ್ಸ್ ಪರಿಣತ ವರ್ಷ ಆರಂಭಿಸುತ್ತಿದ್ದೇವೆ,” ಫ್ಲಿಪ್​ಕಾರ್ಟ್​ ಗ್ರೋಥ್ ಅಂಡ್ ಮಾನಟೈಸೇಷನ್ ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿಕಾರಿಯಾ ಹೇಳಿದ್ದಾರೆ.

“ಉದ್ಯಮಿಗಳು ಈಗ ಫ್ಲಿಪ್​ಕಾರ್ಟ್​ನ ಕ್ಯಾಟಲಾಗ್​ ಬಳಸಿಕೊಳ್ಳಲಿದ್ದಾರೆ. ವಿಶ್ವಾಸಾರ್ಹತೆ ಹಾಗೂ ವೇಗಕ್ಕಾಗಿ ಡೆಲಿವರಿ ನೆಟ್​ವರ್ಕ್​ಗಳು ಮತ್ತು ಮೂಲಸೌಕರ್ಯ ಮಾಡಲಾಗಿದೆ. ಈ ಅನುಕೂಲವು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚು ಮಾಡುವುದಕ್ಕೆ ಸಹಾಯ ಆಗುತ್ತದೆ. ಇದರ ಬದಲಿಗೆ ಅವರ ಉದ್ಯಮ ಬೆಳೆಯಲು ಸಹಾಯ ಆಗುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಳಕೆದಾರರು ಸರಳವಾಗಿ Shopsy ಆ್ಯಪ್​ನಲ್ಲಿ ತಮ್ಮ ಫೋನ್​ ನಂಬರ್ ನೋಂದಣಿ ಮಾಡಿಕೊಂಡರೆ ಸಾಕು. ತಮ್ಮ ಆನ್​ಲೈನ್ ಉದ್ಯಮ ಪಯಣ ಆರಂಭಿಸಬಹುದು.

ಹೆಸರಾಂತ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್​ ಆ್ಯಪ್​ಗಳ ಮೂಲಕವಾಗಿ ಖರೀದಿಗೆ ಆಸಕ್ತಿ ಇರುವ ಗ್ರಾಹಕರ ಜತೆಗೆ ಬಳಕೆದಾರರು ಕ್ಯಾಟಲಾಗ್​ ಹಂಚಿಕೊಳ್ಳಬಹುದು. ಅವರ ಬದಲಿಗೆ ಆರ್ಡರ್ ಮಾಡಿ, ಆ ವಹಿವಾಟಿನ ಮೇಲೆ ಕಮಿಷನ್ ಸಂಪಾದಿಸಬಹುದು. ಆರ್ಡರ್ ಮಾಡಿದ ಉತ್ಪನ್ನ ಯಾವುದು ಎಂಬುದರ ಆಧಾರದಲ್ಲಿ ಕಮಿಷನ್ ಪರ್ಸೆಂಟೇಜ್ ನಿರ್ಧಾರ ಆಗುತ್ತದೆ ಎಂದು ಫ್ಲಿಪ್​ಕಾರ್ಟ್​ ಹೇಳಿದೆ. ​”ಯಾರಿಗೆ ಉತ್ತಮ ನೆಟ್​ವರ್ಕ್​ ಇದ್ದು, ಜನರು ಅವರನ್ನು ನಂಬುತ್ತಾರೋ ಅಂತವರು ಉದ್ಯಮಮ ಶುರು ಮಾಡಬಹುದು. ಹೂಡಿಕೆ, ದಾಸ್ತಾನು ಅಥವಾ ಸರಕು ಸಾಗಣೆಯ ನಿರ್ವಹಣೆ ಇಂಥ ಯಾವ ಸಮಸ್ಯೆಯೂ ಇಲ್ಲ,” ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ: Samsung Galaxy F22: ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6ಕ್ಕೆ ಅನಾವರಣ; ಬೆಲೆ, ದರ ಮತ್ತಿತರ ವಿವರ ಇಲ್ಲಿದೆ

(Flipkart launched Shopsy app for Indian entrepreneurs online business)

Published On - 6:23 pm, Thu, 1 July 21

ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ