Samsung Galaxy F22: ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6ಕ್ಕೆ ಅನಾವರಣ; ದರ ಮತ್ತಿತರ ವಿವರ ಇಲ್ಲಿದೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​22 ಭಾರತದಲ್ಲಿ ಜುಲೈ 6ಕ್ಕೆ ಅನಾವರಣಗೊಳ್ಳಲಿದೆ. ಈ ಮೊಬೈಲ್ಫೋನ್​ನ ಬಗ್ಗೆ ವಿವರಗಳು ಈ ಲೇಖನದಲ್ಲಿ ಇವೆ.

Samsung Galaxy F22: ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6ಕ್ಕೆ ಅನಾವರಣ; ದರ ಮತ್ತಿತರ ವಿವರ ಇಲ್ಲಿದೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​22 ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 05, 2021 | 10:24 AM

ಸ್ಯಾಮ್ಸಂಗ್​ನ ಹೊಸ ಗ್ಯಾಲಕ್ಸಿ ಎಫ್- ಸರಣಿಯ ಸ್ಮಾರ್ಟ್​ಫೋನ್​ಗಳು ಸಾಲಾಗಿ ಬಿಡುಗಡೆ ಆಗುತ್ತಿವೆ. ಭಾರತದಲ್ಲಿ ಗ್ಯಾಲಕ್ಸಿ F22 ಬಿಡುಗಡೆ ಬಗ್ಗೆ ಕಂಪೆನಿಯು ಖಾತ್ರಿಪಡಿಸಿದೆ. ಈ ವರ್ಷ ಎಫ್ ಸರಣಿ ಅಡಿಯಲ್ಲಿ ಸ್ಯಾಮ್ಸಂಗ್ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಫೋನ್ ಇದು. ಈ ಮುನ್ನ ಗ್ಯಾಲಕ್ಸಿ ಎಫ್​62, ಎಫ್​12 ಮತ್ತಿ ಎಫ್​02ಎಸ್ ಬಿಡುಗಡೆ ಮಾಡಲಾಗಿತ್ತು. ಅಂದಹಾಗೆ ಎಫ್​22 ಫೋನ್ ಬಿಡುಗಡೆ ಆದ ಮೇಲೆ ಫ್ಲಿಪ್​ಕಾರ್ಟ್​ ಮೂಲಕ ಮಾರಾಟ ಆಗುತ್ತದೆ. ಹೊಸ ಸ್ಮಾರ್ಟ್​ಫೋನ್ ಜುಲೈ 6ಕ್ಕೆ ಭಾರತಕ್ಕೆ ನಿಡುಗಡೆ ಆಗಲಿದೆ ಎಂದು ಸ್ಯಾಮ್ಸಂಗ್ ಖಾತ್ರಿಪಡಿಸಿದೆ. ಈ ಫೋನ್​ನ ಪ್ರಮುಖ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಲಿದೆ. ಈ ಫೋನ್​ ಅನ್ನು 15,000 ರೂಪಾಯಿಯೊಳಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಸ್ಯಾಮ್ಸಂಗ್ ಎಫ್​22 ಬಗ್ಗೆ ಇನ್ನಷ್ಟು ವೈಶಿಷ್ಟ್ಯ ಮತ್ತು ಇತರ ಮಾಹಿತಿಗಳು ಇಲ್ಲಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್​22 ಭಾರತದಲ್ಲಿ ಬಿಡುಗಡೆ ಆಗುವ ದಿನಾಂಕವನ್ನು ಖಾತ್ರಿಪಡಿಸಲಾಗಿದೆ. ಈ ಫೋನ್ ಜುಲೈ 6ನೇ ತಾರೀಕಿನಂದು ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ಇದರ ಜತೆಗೆ ಫೋನ್​ನ ವೈಶಿಷ್ಟ್ಯದ ಬಗ್ಗೆ ತಿಳಿಸಲಾಗಿದೆ. ಫ್ಲಿಪ್​ಕಾರ್ಟ್​ನಲ್ಲಿ ಇರುವಂತೆ, ಈ ಫೋನ್​ನಲ್ಲಿ 6000 mAh ಬ್ಯಾಟರಿ ಬರುತ್ತದೆ. ಸದ್ಯಕ್ಕೆ ಫಾಸ್ಟ್ ಚಾರ್ಜಿಂಗ್ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆದರೆ ಕನಿಷ್ಠ 15W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನಿರೀಕ್ಷಿಸಬಹುದು. ಫ್ಲಿಪ್​ಕಾರ್ಟ್​ನಲ್ಲೇ ತಿಳಿಸಿರುವಂತೆ, F22 ಜತೆಗೆ 6.4 ಇಂಚಿನ AMOLED ಡಿಸ್​ಪ್ಲೇ ಬರುತ್ತದೆ. 90Hz ರಿಫ್ರೆಷ್ ದರ ಸಪೋರ್ಟ್ ಮಾಡುತ್ತದೆ. ಸಣ್ಣದಾದ ವಾಟರ್- ಡ್ರಾಪ್ ನಾಚ್ ಮತ್ತು ಸ್ವಲ್ಪ ದಪ್ಪವಾದ ಬೆಜೆಲ್ ಇದೆ. ಅದರ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ. 48 ಮೆಗಾಪಿಕ್ಸೆಲ್​ನ ಪ್ರಾಥಮಿಕ ಕ್ಯಾಮೆರಾ ಸೆನ್ಸರ್​ನೊಂದಿಗೆ ಬರುತ್ತದೆ. ಉಳಿದ ಮೂರು ಲೆನ್ಸ್​ಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇತರ ಮೂರು ಕ್ಯಾಮೆರಾಗಳಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಮತ್ತು ಎರಡು 2 ಮೆಗಾಪಿಕ್ಸೆಲ್ ಸೆನ್ಸರ್ ಡೆಪ್ತ್ ಮತ್ತು ಮ್ಯಾಕ್ರೋಗೆ ಇರಲಿದೆ.

ಸ್ಯಾಮ್ಸಂಗ್​ನಿಂದ ಅಧಿಕೃತವಾಗಿ ಪರ್ಫಾಮೆನ್ಸ್ ಯೂನಿಟ್ ಮಾಹಿತಿ ಬಹಿರಂಗಪಡಿಸಬೇಕಿದೆ. ಈ ಫೋನ್​ ಗೂಗಲ್ ಪ್ಲೇ ಕನ್ಸೋಲ್ ವೆಬ್​ಸೈಟ್​ನಲ್ಲಿ ಕಂಡುಬಂದಿದೆ. ಗೂಗಲ್ ಪ್ಲೇ ಕನ್ಸೋಲ್ ಲಿಸ್ಟಿಂಗ್​ನಂತೆ, ಫೋನ್​ನಲ್ಲಿ ಮೀಡಿಯಾ ಟೆಕ್ ಹೀಲಿಯೋ G80 SoC ಜತೆಗೆ 4GB RAMನೊಂದಿಗೆ ಬರುತ್ತದೆ. ಆಂಡ್ರಾಯಿಡ್ 11ನೊಂದಿಗೆ ನಡೆಯಲಿದ್ದು ಮತ್ತು OneUI 3.0 ಜತೆ ಬರುತ್ತದೆ. ಈ ಫೋನ್​ನಲ್ಲಿ ಎಚ್​ಡಿ+ ಡಿಸ್​ಪ್ಲೇನೊಂದಿಗೆ ಬರಲಿದ್ದು, ಈ ಫೋನ್ 15,000 ರೂಪಾಯಿ ಒಳಗೆ ಭಾರತದಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:Samsung One UI Watch: ಗೂಗಲ್ ಆಧಾರಿತವಾದ ಸ್ಮಾರ್ಟ್​ವಾಚ್​ ಸಾಫ್ಟ್​ವೇರ್ ಒನ್ UI ಸ್ಯಾಮ್ಸಂಗ್​ನಿಂದ ಘೋಷಣೆ

ಇದನ್ನೂ ಓದಿ: Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ

(Samsung Galaxy F22 mobile phone launch date in India revealed. Features, specification and other details here)

Published On - 4:38 pm, Thu, 1 July 21