ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನಿಮ್ಮ ಸಂಸ್ಥೆಯನ್ನು ನೋಂದಣಿ ಮಾಡುವ ಯೋಜನೆ ಇದೆಯಾ? ಇಲ್ಲಿವೆ ಹಂತಗಳು

ಎಂಎಸ್​ಎಂಇ ಸಚಿವಾಲಯದ ಉದ್ಯಮ್ ಪೋರ್ಟಲ್​ನಲ್ಲಿ ಎಂಎಸ್​ಎಂಇಗಳ ನೋಂದಣಿ ಹೇಗೆ ಎಂಬ ಬಗ್ಗೆ ಇಲ್ಲಿದೆ ಹಂತಹಂತವಾದ ವಿವರಣೆ.

ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನಿಮ್ಮ ಸಂಸ್ಥೆಯನ್ನು ನೋಂದಣಿ ಮಾಡುವ ಯೋಜನೆ ಇದೆಯಾ? ಇಲ್ಲಿವೆ ಹಂತಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 01, 2021 | 11:13 PM

ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ (ಎಂಎಸ್​ಎಇ) ಸಚಿವಾಲಯದ ಉದ್ಯಮ್ ಪೋರ್ಟಲ್​ನಿಂದ​ ಉದ್ಯಮಿಗಳಿಗೆ ತಮ್ಮ ಸಂಸ್ಥೆಯ ನೋಂದಣಿಗೆ ಸ್ವಘೋಷಿತ ಮತ್ತು ವೆಚ್ಚ-ರಹಿತವಾದ ಪ್ಲಾಟ್​ಫಾರ್ಮ್ ಒದಗಿಸುತ್ತದೆ. ಉದ್ಯಮ ಪೋರ್ಟಲ್ ಈಗ ಆದಾಯ ತೆರಿಗೆ ಹಾಗೂ ಜಿಎಸ್​ಟಿಐಎನ್​ ವ್ಯವಸ್ಥೆ ಜತೆಗೆ ಒಗ್ಗೂಡಿದೆ ಮತ್ತು ಪ್ಯಾನ್ ಮತ್ತು ಜಿಎಸ್​ಟಿಗೆ ಜೋಡಣೆಯಾದ ಹೂಡಿಕೆ ಮಾಹಿತಿಯನ್ನು ತಾನೇತಾನಾಗಿ ಹೊರತರುತ್ತದೆ. ಉದ್ಯಮಿಗಳಿಗೆ ನೋಂದಣಿ ಮಾಡುವುದಕ್ಕೆ ಆಧಾರ್​ ಸಂಖ್ಯೆ ಇದ್ದರೆ ಸಾಕು ಮತ್ತು ಎಂಎಸ್​ಎಂಇಗಳಿಗೆ ಶಾಶ್ವತ ನೋಂದಣಿ ಸಂಖ್ಯೆಯೊಂದಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಆ ಪ್ರಮಾಣಪತ್ರದಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದರ ಮೂಲಕವಾಗಿ ಪೋರ್ಟಲ್ ಮೂಲಕ ಸಂಸ್ಥೆಯ ಮಾಹಿತಿ ಪಡೆಯಬಹುದು. ಎಂಎಸ್​ಎಂಇ ಉದ್ಯಮ್ ಪೋರ್ಟಲ್ ನೋಂದಣಿ ಬಹಳ ಸರಳ ಹಾಗೂ ಒಂದು ಸಲದ ಪ್ರಕ್ರಿಯೆ. ಇದನ್ನು ಉದ್ಯಮ್ ಪೋರ್ಟಲ್ ಮೂಲಕ ಮತ್ತು ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯಲ್ಲಿ ಮಾಡಬಹುದು.

ಸಣ್ಣ ಉದ್ಯಮಗಳು ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನೋಂದಣಿ ಹೇಗೆ? ಹಂತ 1: ಎಂಎಸ್​ಎಂಇ ವೆಬ್​ಸೈಟ್​ udyamregistration.gov.inಗೆ ಭೇಟಿ ನೀಡಬೇಕು. ವೆಬ್​ಸೈಟ್​ನ ಎಡಭಾಗದ ತುದಿಯಲ್ಲಿ ರಾಷ್ಟ್ರೀಯ ಚಿಹ್ನೆ ಪರಿಶೀಲಿಸಬೇಕು ಮತ್ತು MSME ಸಚಿವಾಲಯ ಎಂದು ಅದರ ಹಿಂಭಾಗದಲ್ಲಿ ಇರಬೇಕು.

ಹಂತ 2: ನೋಂದಣಿ ಅರ್ಜಿ ಪಡೆದುಕೊಳ್ಳಿ, ಹೋಮ್​ಪೇಜ್​ನಲ್ಲಿ New Registration ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಈಗ ಸಂಬಂಧಪಟ್ಟ ಆಧಾರ್​ ಸಂಖ್ಯೆ ಮತ್ತು ಉದ್ಯಮಿಯ ಹೆಸರನ್ನು ನಮೂದಿಸಬೇಕು.

ಹಂತ 3: Validate and Generate OTP ಮೇಲೆ ಕ್ಲಿಕ್ ಮಾಡಬೇಕು ಮತ್ತು ಪ್ಯಾನ್ ದೃಢೀಕರಣದ ಹಂತಕ್ಕೆ ಬೇಕಾದ ಮಾಹಿತಿಯನ್ನು ನಮೂದಿಸಿ.

ಹಂತ 4:ಈಗ ಉದ್ಯಮ್ ನೋಂದಣಿ ಬಾಕ್ಸ್ ಕಾಣಿಸಿಕೊಳ್ಳಲಿದೆ ಮತ್ತು ಎಲ್ಲ ಮಾಹಿತಿಯನ್ನು ಭರ್ತಿ ಮಾಡುವಂತೆ ಕೇಳಿಕೊಳ್ಳಲಾಗುತ್ತದೆ.

ಹಂತ 5: ಒಂದು ಸಲ ನೋಂದಣಿ ಸಂಪೂರ್ಣವಾದಲ್ಲಿ, ಥ್ಯಾಂಕ್​ ಯೂ ಎಂಬ ಸಂದೇಶದೊಂದಿಗೆ ನೋಂದಣಿ ಸಂಖ್ಯೆಯು UDYAM ಎಂಬುದರ ಆರಂಭದೊಂದಿಗೆ ಬರುತ್ತದೆ.

ಒಂದು ವೇಳೆ ಉದ್ಯಮವು ಎರಡು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಲ್ಲಿ ಒಂದು ಉದ್ಯಮ ನೋಂದಣಿ ಸಾಕು. ಅದನ್ನೇ ನೋಂದಣಿಯಲ್ಲಿ ನಿರ್ದಿಷ್ಟವಾಗಿ ತಿಳಿಸಬೇಕು. ಸೆಕ್ಷನ್ 27 ಸಿಜಿಎಸ್​ಟಿ ಕಾಯ್ದೆ ಪ್ರಕಾರ, ಉದ್ದೇಶಪೂರ್ವಕವಾಗಿ ಸ್ವಘೋಷಿತ ಮಾಹಿತಿ ಹಾಗೂ ಅಂಕಿ- ಅಂಶಗಳನ್ನು ಘೋಷಣೆ ಮಾಡಿದಾಗ ದಂಡ ಕಟ್ಟಬೇಕಾಗುತ್ತದೆ.

ಏನಿದು ಉದ್ಯಮ್ ಪೋರ್ಟಲ್? ಉದ್ಯಮ್​ ಪೋರ್ಟಲ್ ಎಂಬುದು ಶೂನ್ಯ- ವೆಚ್ಚದ ಎಂಎಸ್​ಎಂಇ ನೋಂದಣಿ ವೆಬ್​ಸೈಟ್​ ಅನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿತು. ಜೂನ್ 2, 2021ರ ಹೊತ್ತಿಗೆ 31.56 ಲಕ್ಷ ಸಂಸ್ಥೆಗಳಿವೆ. ದೇಶದಲ್ಲಿರುವ ಎಂಎಸ್​ಎಂಇಗಳ ಸರಾಸರಿ ಮತ್ತು ಮಾಹಿತಿ ಸಂಗ್ರಹಿಸುವುದಕ್ಕೆ ಉದ್ಯಮ್​ ಪೋರ್ಟಲ್​ನಿಂದ ಸರ್ಕಾರಕ್ಕೆ ಸಹಾಯ ಮಾಡಲಾಗುತ್ತದೆ. ಈ ಪೋರ್ಟಲ್​ನಿಂದ ಎಂಎಸ್​ಎಂಇಗಳ ಉತ್ಪಾದನಾ ಗಾತ್ರ, ಭೌಗೋಳಿಕ ಮಾಹಿತಿ, ಹೂಡಿಕೆ ಹಾಗೂ ವಹಿವಾಟಿನ ಮಾಹಿತಿಯನ್ನು ಸಹ ಈ ಪೋರ್ಟಲ್ ಒದಗಿಸುತ್ತದೆ. ಇದು ಉದ್ಯೋಗ್ ಆಧಾರ್ ಮೆಮೊರಂಡಮ್ (UAM)ಗೆ ಬದಲಿಯಾಗುತ್ತದೆ.

ಎಂಎಸ್​ಎಂಇ ಅಂದರೇನು? – ಯಾವ ಸಂಸ್ಥೆಯ ಹೂಡಿಕೆ 1 ಕೋಟಿ ರೂ. ದಾಟುವುದಿಲ್ಲವೋ ಮತ್ತು ವಹಿವಾಟು 5 ಕೋಟಿ ರೂ. ದಾಟಲ್ಲವೋ ಅದು ಕಿರು ಸಂಸ್ಥೆಗಳು – ಯಾವಾಗ 10 ಕೋಟಿ ರೂ. ಹೂಡಿಕೆ ದಾಟುವುದಿಲ್ಲವೋ ಮತ್ತು ವಹಿವಾಟು 50 ಕೋಟಿ ಇರುತ್ತದೋ ಅಂಥವು ಸಣ್ಣ ಸಂಸ್ಥೆಗಳು -ಮಧ್ಯಮ ಸಂಸ್ಥೆಗಳು ಹೂಡಿಕೆಯು ರೂ. 50 ಕೋಟಿ ದಾಟಲ್ಲ ಮತ್ತು ವಹಿವಾಟು 250 ಕೋಟಿ ರೂ.ಗಿಂತ ಕಡಿಮೆ. ​

ಇದನ್ನೂ ಓದಿ: Shopsy App: ಸ್ಥಳೀಯ ಉದ್ಯಮಿಗಳ ನೆರವಿಗಾಗಿ ಫ್ಲಿಪ್​ಕಾರ್ಟ್​ನಿಂದ ಆರಂಭವಾಯಿತು ಹೊಸ ಆ್ಯಪ್​​; ಇದರ ಕೆಲಸ ಏನು ಗೊತ್ತಾ?

(How to register enterprise in MSME ministry Udyam portal? Here is the step by step details)

Published On - 10:55 pm, Thu, 1 July 21