Finance changes: ಜುಲೈ 1ರಿಂದ ಆಗಲಿರುವ ಈ ನಾಲ್ಕು ಬದಲಾವಣೆಗೆ ನೀವು ಸಿದ್ಧವಾಗಿದ್ದೀರಾ, ಈ ಬಗ್ಗೆ ಗೊತ್ತಿದೆಯಾ?

ಜುಲೈ 1ರಿಂದ ಅನ್ವಯ ಆಗುವಂತೆ ಈ ನಾಲ್ಕು ಆರ್ಥಿಕ ವಿಷಯಗಳಲ್ಲಿ ಬದಲಾವಣೆ ಆಗಲಿವೆ. ಯಾವುವು ಆ ಬದಲಾವಣೆಗಳು ಮತ್ತು ಅದರ ಪರಿಣಾಮ ನಿಮ್ಮ ಮೇಲೆ ಹೇಗಿರಲಿದೆ ಎಂಬುದನ್ನು ತಿಳಿಯಿರಿ.

Finance changes: ಜುಲೈ 1ರಿಂದ ಆಗಲಿರುವ ಈ ನಾಲ್ಕು ಬದಲಾವಣೆಗೆ ನೀವು ಸಿದ್ಧವಾಗಿದ್ದೀರಾ, ಈ ಬಗ್ಗೆ ಗೊತ್ತಿದೆಯಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 01, 2021 | 10:23 AM

ಈ ದಿನದಿಂದ (ಜುಲೈ 1, 2021) ಹಲವು ಬದಲಾವಣೆಗಳಿಗೆ ನೀವು ತಯಾರಗಬೇಕಿದೆ. ಈ ಪೈಕಿ ಯಾವ್ಯಾವ ಬದಲಾವಣೆ ನಿಮಗೆ ವೈಯಕ್ತಿಕವಾಗಿ ಪರಿಣಾಮ ಬೀರಲಿದೆ ಎಂಬುದನ್ನು ನೋಡಿಕೊಳ್ಳಿ. ಡ್ರೈವಿಂಗ್ ಲೈಸೆನ್ಸ್​ನಿಂದ ತೆರಿಗೆ ವಿಚಾರದ ತನಕ ಆಗಲಿರುವ ಈ ನಾಲ್ಕು ಬದಲಾವಣೆ ನಿಮ್ಮ ಗಮನದಲ್ಲಿರಲಿ. ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್​ಬಿಐ) ಸೇವಾ ಶುಲ್ಕದಲ್ಲಿ ಬದಲಾವಣೆ ಆಗಲಿದೆ. ಎಲ್​ಪಿಜಿ ದರದಲ್ಲಿ ಪರಿಷ್ಕರಣೆ ನಿರೀಕ್ಷಿಸಬಹುದು. ಈಗ ಒಂದೊಂದಾಗಿ ಬದಲಾವಣೆಗಳನ್ನು ಗಮನಿಸುವುದಾದರೆ ಅವು ಹೀಗಿವೆ:

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಗಳಿಗೆ ಅನ್ವಯ ಆಗುವಂತೆ ಸೇವಾ ಶುಲ್ಕಗಳನ್ನು ಪರಿಷ್ಕರಣೆ: ಈ ಶುಲ್ಕಗಳು ಬೇಸಿಕ್ ಸೇವಿಂಗ್ಸ್​ ಬ್ಯಾಂಕ್​ ಡೆಪಾಸಿಟ್​ (ಬಿಎಸ್​ಬಿಡಿ)ಗಳಿಗೆ ಅನ್ವಯ ಆಗಲಿದೆ. ಎಟಿಎಂ ವಿಥ್​ಡ್ರಾವಲ್, ಚೆಕ್​ಬುಕ್, ಹಣ ವರ್ಗಾವಣೆ ಮತ್ತು ಇತರ ವಹಿವಾಟುಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳಾಗಲಿವೆ. ಶಾಖೆಗಳಲ್ಲಿ ಮತ್ತು ಎಟಿಎಂ ಎರಡೂ ಸೇರಿಕೊಂಡು ಒಂದು ತಿಂಗಳಿಗೆ ನಾಲ್ಕು ವಹಿವಾಟು ಮಾತ್ರ ಉಚಿತ ಇದೆ. ಆ ಮಿತಿಯ ನಂತರದಲ್ಲಿ ಗ್ರಾಹಕರು ಪ್ರತಿ ವಹಿವಾಟಿಗೆ ಶುಲ್ಕವಾಗಿ ರೂ. 15+ ಜಿಎಸ್​ಟಿ ನೀಡಬೇಕಾಗುತ್ತದೆ. ಈ ಖಾತೆಗಳಿಗೆ ಕನಿಷ್ಠ ಇಷ್ಟೇ ಮೊತ್ತವನ್ನು ನಿರ್ವಹಣೆ ಮಾಡಬೇಕು ಎಂಬ ನಿಯಮ ಏನಿಲ್ಲ. ಆದ್ದರಿಂದ ಇದರ ಮಿನಿಮಮ್ ಬ್ಯಾಲೆನ್ಸ್ ಶೂನ್ಯ. ಈ ಖಾತೆದಾರರಿಗೆ ರುಪೇ ಎಟಿಎಂ ಕಮ್ ಡೆಬಿಟ್ ಕಾರ್ಡ್ ದೊರೆಯುತ್ತದೆ.

2. ಎಲ್​ಪಿಜಿ ದರಗಳ ಪರಿಷ್ಕರಣೆ: ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯಲ್ಲಿ ಜುಲೈ 1ರಿಂದ ಅನ್ವಯ ಆಗುವಂತೆ ಪರಿಷ್ಕರಣೆ ಆಗಬಹುದು. ಮಾರುಕಟ್ಟೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಕೂಡ ಎಲ್​ಪಿಜಿ ದರಗಳ ಪರಿಷ್ಕರಣೆ ಮಾಡುತ್ತವೆ.

3. ಮನೆಗೇ ಡ್ರೈವಿಂಗ್​ ಲೈಸೆನ್ಸ್: ಹೊಸ ನಿಯಮಾವಳಿಯ ಅನುಸಾರವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್​ಟಿಒ) ಭೇಟಿ ನೀಡಿಯೇ ತಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂತೇನೂ ಇಲ್ಲ. ನಿರ್ದಿಷ್ಟ ಡ್ರೈವಿಂಗ್​ ಸ್ಕೂಲ್​ಗಳಲ್ಲಿ ಕೋರ್ಸ್ ಸಂಪೂರ್ಣಗೊಳಿಸಿದ್ದಲ್ಲಿ, ಅಗತ್ಯ ಮಾನದಂಡಗಳನ್ನು ಪೂರ್ತಿಗೊಳಿಸಿದರೆ ಶಾಶ್ವತ ಡಿ.ಎಲ್. ಸಿಗುತ್ತದೆ.

4. ತೆರಿಗೆ ನಿಯಮಮಾವಳಿ ವಿವಾದ್​ ಸೇ ವಿಶ್ವಾಸ್: ಜೂನ್​ 30ಕ್ಕೆ ಕೊನೆ ಎಂದಿದ್ದ ವಿವಾದ ಸೇ ವಿಶ್ವಾಸ್ ಯೋಜನೆಯನ್ನು ಎರಡು ತಿಂಗಳು, ಅಂದರೆ ಆಗಸ್ಟ್ 31ರ ತನಕ ವಿಸ್ತರಿಸಲಾಗಿದೆ. ಯಾವುದೇ ಬಡ್ಡಿ ವಿಧಿಸುವುದಿಲ್ಲ. ಸಿಬಿಬಿಟಿಯ ಪ್ರಕಾರ, ನೇರ ತೆರಿಗೆಯ ವಿವಾದ್ ಸೇ ವಿಶ್ವಾಸ್ ಕಾಯ್ದೆ, 2020ರ ಅಡಿಯಲ್ಲಿ ಬಾಕಿ ಮೊತ್ತ ಪಾವತಿಗೆ ಆಗಸ್ಟ್​ 31ರ ತನಕ ಗಡುವು ವಿಸ್ತರಣೆ ಆಗಿದೆ. ಬಾಕಿ ಉಳಿದಿರುವ ಪ್ರಕರಣಗಳು ಶೇ 100 ವ್ಯಾಜ್ಯದ ತೆರಿಗೆ ಮತ್ತು ಶೇ 25 ವ್ಯಾಜ್ಯದ ದಂಡ ಪಾವತಿಸಿ ಬಗೆಹರಿಸಿಕೊಳ್ಳಬಹುದು.

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

(Here are the 4 finance changes expect from July 1st 2021)

Published On - 10:22 am, Thu, 1 July 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ