ಬೆಂಗಳೂರು: ಲಾಕ್‌ಡೌನ್‌ನಿಂದ ಮುಂದೂಡಿಕೆಯಾಗಿದ್ದ ಪಿಯು ಇಂಗ್ಲಿಷ್ ಪರೀಕ್ಷೆ ಇಂದು ನಡೆಯಲಿದೆ. ಇದಕ್ಕಾಗಿ ಪಿಯು ಆಡಳಿತ ಮಂಡಳಿ ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ. ಹೀಗಾಗಿ ರಿಜಿಸ್ಟರ್ ನಂಬರ್ ಸೇರಿದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಕಾಲೇಜ್ಗೆ ಸ್ಯಾನಿಟೈಸರ್.. ಟೇಬಲ್ ನಡುವೆ ಡಿಸ್ಟೆಂನ್ಸ್.. ಕೈ ತೊಳ್ಕೊಂಡೇ ಒಳ ಬರಬೇಕು.. ಮಾಸ್ಕ್ ಹಾಕ್ಕೊಂಡೇ ಕೂರಬೇಕು. ಹತ್ತಾರು ರೂಲ್ಸ್ಗಳೊಂದಿಗೆ, ಕಾಲೇಜನ್ನ ಸಜ್ಜುಗೊಳಿಸಲಾಗುತ್ತಿದೆ. ಎರಡೂವರೆ ತಿಂಗಳ ಹಿಂದೆ ನಡೆಯಬೇಕಿದ್ದ ಒಂದು ಪರೀಕ್ಷೆಗಾಗಿ ಅರ್ಥಾತ್, ಬಾಕಿ ಇರೋ ಪಿಯು ಇಂಗ್ಲೀಷ್ ಎಕ್ಸಾಂ ಇಂದು ನಡೆಯಲಿದೆ.
ಪಿಯು ಇಂಗ್ಲಿಷ್ ಎಕ್ಸಾಂಗೆ ಸಿದ್ಧತೆ ಪೂರ್ಣ
ಹೌದು.. ಕಳೆದ ಮಾರ್ಚ್ನಲ್ಲೇ ಪಿಯು ಇಂಗ್ಲೀಷ್ ಎಕ್ಸಾಂ ನಡೀಬೇಕಿತ್ತು. ಆದ್ರೆ, ಕೊರೊನಾ ಕಾಲಿಡ್ತಿದ್ದಂತೆ ಎಕ್ಸಾಂ ಮುಂದೂಡಿಕೆಯಾಗಿತ್ತು. ಇದೀಗ, ಇಂದು ಇಂಗ್ಲೀಷ್ ಎಕ್ಸಾಂಗೆ ಎಲ್ರೂ ತಯಾರಾಗಿದ್ದಾರೆ.
ಇಂಗ್ಲಿಷ್ ಎಕ್ಸಾಂಗೆ ರೆಡಿ!
ಅಂದಹಾಗೆ, ಇಂದು ಸುಮಾರು 5 ಲಕ್ಷದ 95 ಸಾವಿರ ವಿದ್ಯಾರ್ಥಿಗಳು ಎಕ್ಸಾಂ ಬರೆಯಲಿದ್ದಾರೆ. 1,016 ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಂ ನಡೀತಿದೆ. ಆದ್ರೆ, 18,524 ವಿದ್ಯಾರ್ಥಿಗಳ ಸೆಂಟರ್ ಬದಲಾಗಿದೆ. ಒಂದ್ವೇಳೆ, ವಿದ್ಯಾರ್ಥಿಗಳು ಹೊಸ ಕೇಂದ್ರಕ್ಕೆ ತೆರಳಲು ಸಾಧ್ಯವಾಗದಿದ್ರೆ, ಮೂಲ ಕೇಂದ್ರದಲ್ಲೇ ಅವಕಾಶ ನೀಡಲಾಗುತ್ತೆ.
ಇನ್ನು, ಎಕ್ಸಾಂ ಗೈರಾದ ವಿದ್ಯಾರ್ಥಿಯನ್ನ ರೆಗ್ಯುಲರ್ ಅಂತ ಪರಿಗಣಿಸಲಾಗುತ್ತೆ. ಸೋಂಕಿನ ಲಕ್ಷಣವಿದ್ರೆ ಪ್ರತ್ಯೇಕವಾಗಿ ಪರೀಕ್ಷೆಗೆ ಅವಕಾಶ ನೀಡಲಾಗುತ್ತೆ. ಇನ್ನು, ನಿಗದಿತ ಸಮಯಕ್ಕೂ ಮುಂಚಿತವಾಗಿ ವಿದ್ಯಾರ್ಥಿಗಳು ಸೆಂಟರ್ಗೆ ಬರಬೇಕು. ಯಾಕಂದ್ರೆ, ಪರೀಕ್ಷೆ ಆರಂಭಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಇರಲಿದೆ. ಹಾಗೆ, ಎಕ್ಸಾಂ ಸೆಂಟರ್ಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಮಾಡಗಿದೆ.
ಕೊಠಡಿಯಲ್ಲಿ 12ರಿಂದ 24 ಸ್ಟೂಡೆಂಟ್ಸ್ಗೆ ಅವಕಾಶ
ಇನ್ನು, ಮೈಸೂರಿನ 50 ಕೇಂದ್ರದಲ್ಲಿ ಎಕ್ಸಾಂ ನಡೆಯಲಿದ್ದು ಜಿಲ್ಲಾಡಳಿತ ಇದಕ್ಕೆ ಸಜ್ಜಾಗಿದೆ. ಜಮ್ಮು ಕಾಶ್ಮೀರದ ಓರ್ವ ವಿದ್ಯಾರ್ಥಿ ಬಿಟ್ಟು ಉಳಿದವ್ರೆಲ್ಲ ಪರೀಕ್ಷೆ ಎದುರಿಸಲಿದ್ದು, ಕೊಠಡಿಗಳಿಗೆ ಸ್ಯಾನಿಟೇಸರ್ ಮಾಡಲಾಗಿದೆ. ಹಾಗೆ, ಕೊಡಗಿನಲ್ಲಿ ಪರೀಕ್ಷೆಗೆ ತಯಾರಿ ಮುಕ್ತಾಯವಾಗಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಇ-ಪಾಸ್ ಮೂಲಕ ಅವಕಾಶ ಕಲ್ಪಿಸಿಕೊಡಲಾಗಿದೆ. ಮಂಡ್ಯದಲ್ಲೂ ಎಕ್ಸಾಂಗೆ ತಯಾರಿ ನಡೆದಿದ್ದು, ಕಾಲೇಜು ಕಟ್ಟಡಗಳನ್ನ ಸ್ವಚ್ಛಗೊಳಿಸಿದ್ದಾರೆ.
ವಿಜಯಪುರದಲ್ಲಿ 41 ಕೇಂದ್ರಗಳನ್ನ ಪರೀಕ್ಷೆಗೆ ಸಿದ್ಧಪಡಿಸಲಾಗಿದೆ. ಒಂದು ರೂಂನಲ್ಲಿ 12ರಿಂದ 24 ವಿದ್ಯಾರ್ಥಿಗಳಿಗೆ ಅವಕಾಶ ನೀಡ್ತಿದ್ದು, ಜಿಗ್ ಜಾಗ್ ಮಾದರಿಯಲ್ಲಿ ಸಂಖ್ಯೆ ನಮೂದಿಸಲಾಗ್ತಿದೆ. ಗದಗದಲ್ಲಿ 50 ಎಕ್ಸಾಂ ಕೇಂದ್ರಗಳನ್ನ ತೆರೆದಿದ್ದು, ಬೆಳಗಾವಿಯ 79 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಹಾರಾಷ್ಟ್ರದಿಂದ ಬರುವ 71 ವಿದ್ಯಾರ್ಥಿಗಳಿಗೆ ಅಂತರರಾಜ್ಯ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಚಿತ್ರದುರ್ಗದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಕ್ಸಾಂ ಬರೀತಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. ಹುಬ್ಬಳ್ಳಿಯಲ್ಲೂ ಇಂದಿನ ಎಕ್ಸಾಂಗೆ ಶಿಕ್ಷಣಾಧಿಕಾರಿಗಳು ರೆಡಿಯಾಗಿದ್ದಾರೆ.
ಒಟ್ನಲ್ಲಿ, ಕೊರೊನಾ ನಡುವೆಯೇ ಶಿಕ್ಷಕರು, ವಿದ್ಯಾರ್ಥಿಗಳು ಪಿಯು ಎಕ್ಸಾಂಗೆ ಸಜ್ಜಾಗಿದ್ದಾರೆ. ಆದ್ರೆ, ಮಕ್ಕಳು ಭಯ ಪಡೋ ಬದಲು, ಎಚ್ಚರಿಕೆಯಿಂದ ಎಕ್ಸಾಂ ಬರಬೇಕು. ಸೋ, ಎಕ್ಸಾಂ ಬರೀತಿರೋ ಸ್ಟೂಡೆಂಟ್ಸ್ಗೆ ನಮ್ ಕಡೆಯಿಂದಲೂ ಆಲ್ ದಿ ಬೆಸ್ಟ್.
Published On - 6:37 am, Thu, 18 June 20