ಓದು ತಲೆಗೆ ಹತ್ತುತ್ತಿಲ್ಲ ಅಂತಾ ಬೆಳಗಾವಿಯ SSLC ವಿದ್ಯಾರ್ಥಿ ಆತ್ಮಹತ್ಯೆ
ಬೆಳಗಾವಿ: ಓದು ತಲೆಗೆ ಹತ್ತುತ್ತಿಲ್ಲ ಎಂದು ಮನನೊಂದು SSLC ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾರ್ಕಂಡೇಯ ನಗರದಲ್ಲಿ ನಡೆದಿದೆ. 16 ವರ್ಷದ ಯುವರಾಜ್ ಬಾಗಿಲೇಕರ್ ಮೃತ ದುರ್ದೈವಿ. ಯುವರಾಜ್ ನಿನ್ನೆ ತಡರಾತ್ರಿ ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೂಲತಃ ಬೆಳಗಾವಿ ತಾಲೂಕಿನ ಬೆಳಗುಂದಿ ನಿವಾಸಿಯಾಗಿದ್ದ ಯುವರಾಜ್ ಸ್ಥಳೀಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ಬಾಲಕನ ಪೋಷಕರು ತನಗೆ ಓದು ತಲೆಗೆ ಹತ್ತುತ್ತಿಲ್ಲ ಎಂದು ತಮ್ಮ ಮಗ ಮನನೊಂದು ಆತ್ಮಹತ್ಯೆ […]
ಬೆಳಗಾವಿ: ಓದು ತಲೆಗೆ ಹತ್ತುತ್ತಿಲ್ಲ ಎಂದು ಮನನೊಂದು SSLC ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾರ್ಕಂಡೇಯ ನಗರದಲ್ಲಿ ನಡೆದಿದೆ. 16 ವರ್ಷದ ಯುವರಾಜ್ ಬಾಗಿಲೇಕರ್ ಮೃತ ದುರ್ದೈವಿ.
ಯುವರಾಜ್ ನಿನ್ನೆ ತಡರಾತ್ರಿ ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೂಲತಃ ಬೆಳಗಾವಿ ತಾಲೂಕಿನ ಬೆಳಗುಂದಿ ನಿವಾಸಿಯಾಗಿದ್ದ ಯುವರಾಜ್ ಸ್ಥಳೀಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ಬಾಲಕನ ಪೋಷಕರು ತನಗೆ ಓದು ತಲೆಗೆ ಹತ್ತುತ್ತಿಲ್ಲ ಎಂದು ತಮ್ಮ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದ್ದಾರೆ.
Published On - 6:28 pm, Wed, 17 June 20