AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP ‘ಬೃಹತ್‌’ ಭ್ರಷ್ಟಾಚಾರಕ್ಕೆ ಬೇಸತ್ತು ಕಾರಿನಲ್ಲಿ ಕಾಂಟ್ರಾಕ್ಟರ್‌ ಆತ್ಮಹತ್ಯೆಗೆ ಯತ್ನ?

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರವೂ ಬೃಹತ್‌ ಪ್ರಮಾಣದಲ್ಲಿಯೇ ಇರುತ್ತದೆ ಅನ್ನೋದು ಜನಸಾಮಾನ್ಯ ಮಾತು. ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿಗೆ ಸಂಬಂಧಿಸಿದಂತೆ ನಡೆದಿರುವ ಆತ್ಮಹತ್ಯೆ ಪ್ರಕರಣವೊಂದು ಜನರ ಗಮನ ಸೆಳೆದಿದೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಮತ್ತೊಂದು ಪ್ರಕರಣ ಇದಾಗಿದೆ. ಕಾಂಟ್ರಾಕ್ಟರ್‌ ಪತ್ನಿಯಿಂದ ಬಿಬಿಎಂಪಿ ಮಹಿಳಾ ಸಿಬ್ಬಂದಿ ವಿರುದ್ಧ ದೂರು ಹೌದು, ಬಿಬಿಎಂಪಿ ಕಾಂಟ್ರಾಕ್ಟರ್‌ 36 ವರ್ಷದ ಗಿರೀಶ್‌ ನಿದ್ರೆ ಮಾತ್ರೆ ಸೇವಿಸಿ ತನ್ನ ಕಾರ್‌ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ಆತನ ಪತ್ನಿ ಬಸವನಗುಡಿಯ ಮಹಿಳಾ […]

BBMP 'ಬೃಹತ್‌' ಭ್ರಷ್ಟಾಚಾರಕ್ಕೆ ಬೇಸತ್ತು ಕಾರಿನಲ್ಲಿ ಕಾಂಟ್ರಾಕ್ಟರ್‌ ಆತ್ಮಹತ್ಯೆಗೆ ಯತ್ನ?
Guru
Guru| Edited By: ಆಯೇಷಾ ಬಾನು|

Updated on:Jun 18, 2020 | 2:39 PM

Share

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರವೂ ಬೃಹತ್‌ ಪ್ರಮಾಣದಲ್ಲಿಯೇ ಇರುತ್ತದೆ ಅನ್ನೋದು ಜನಸಾಮಾನ್ಯ ಮಾತು. ಇದಕ್ಕೆ ಪುಷ್ಟಿ ನೀಡುವಂತೆ ಬಿಬಿಎಂಪಿಗೆ ಸಂಬಂಧಿಸಿದಂತೆ ನಡೆದಿರುವ ಆತ್ಮಹತ್ಯೆ ಪ್ರಕರಣವೊಂದು ಜನರ ಗಮನ ಸೆಳೆದಿದೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಮತ್ತೊಂದು ಪ್ರಕರಣ ಇದಾಗಿದೆ.

ಕಾಂಟ್ರಾಕ್ಟರ್‌ ಪತ್ನಿಯಿಂದ ಬಿಬಿಎಂಪಿ ಮಹಿಳಾ ಸಿಬ್ಬಂದಿ ವಿರುದ್ಧ ದೂರು ಹೌದು, ಬಿಬಿಎಂಪಿ ಕಾಂಟ್ರಾಕ್ಟರ್‌ 36 ವರ್ಷದ ಗಿರೀಶ್‌ ನಿದ್ರೆ ಮಾತ್ರೆ ಸೇವಿಸಿ ತನ್ನ ಕಾರ್‌ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ಆತನ ಪತ್ನಿ ಬಸವನಗುಡಿಯ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ದೂರಿನಲ್ಲಿ ತನ್ನ ಪತಿಯ ಆತ್ಮಹತ್ಯೆ ಯತ್ನಕ್ಕೆ ಬಿಬಿಎಂಪಿಯ ಆಕೌಂಟ್ಸ್‌ ವಿಭಾಗದ ಮಹಿಳಾ ಸೂಪರಿಂಟೆಂಡೆಂಟ್‌ ಉಷಾ ಅವರೇ ಕಾರಣ ಅಂತಾ ದೂರಿದ್ದಾರೆ.

ಜಯನಗರ ಪಾರ್ಕ್‌ ನಿರ್ವಹಣೆ ಆತ್ಮಹತ್ಯೆ ಯತ್ನಕ್ಕೆ ಕಾರಣ? ಆತ್ಮಹತ್ಯೆಗೆ ಕಾರಣ ಜಯನಗರದ ಪಾರ್ಕ್‌ ನಿರ್ವಹಣೆಯ ಗುತ್ತಿಗೆ ವಿವಾದ ಎನ್ನಲಾಗ್ತಿದೆ. ಗಿರೀಶ್‌ ಈ ಪಾರ್ಕ್‌ ನಿರ್ವಹಣೆಯ ಗುತ್ತಿಗೆ ಕೇಳಿದ್ದ. ಆದ್ರೆ ಉಷಾ ಇದಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಗಿರೀಶ್‌ ತನ್ನ ಇನ್ನೋವಾ ಕಾರ್‌ನ ಡ್ಯಾಕ್ಯುಮೆಂಟ್ಸ್‌ನ್ನ ಗ್ಯಾರೆಂಟಿಯಾಗಿ ಉಷಾ ಹತ್ತಿರ ಇಟ್ಟಿದ್ದರು ಎನ್ನಲಾಗ್ತಿದೆ.

ಆದ್ರೂ ಉಷಾ ಮತ್ತು ಅವರ ಸೋದರ ಸಂಬಂಧಿ ದೀಪಕ್‌ ಅನ್ನೋರು ದುಡ್ಡಿಗಾಗಿ ಗಿರೀಶ್‌ಗೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಈಗ ಕಾಂಟ್ರಾಕ್ಟರ್‌ ಗಿರೀಶ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗಿರೀಶ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಪೊಲೀಸ‌ರು ತನಿಖೆ ಆರಂಭಿಸಿದ್ದಾರೆ.

Published On - 4:59 pm, Wed, 17 June 20

Follow Us
Guru
Guru
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್