ಗುಣ ಲಕ್ಷಣ ಇರುತ್ತೆ.. ಹೆಲ್ತ್ ಅಪ್ಸೆಟ್ ಆಗಿರುತ್ತೆ. ಆದ್ರೂ ಆರ್ಟಿಪಿಸಿಆರ್ನಲ್ಲಿ ನೆಗೆಟಿವ್ ಬಂದಿರುತ್ತೆ. ಆದ್ರೆ, ಸಿಟಿ ಸ್ಕ್ಯಾನ್ನಲ್ಲಿ ಮಾತ್ರ ರಿಪೋರ್ಟ್ ಉಲ್ಟಾ ಆಗಿರುತ್ತೆ. ಹೀಗಾಗಿ ಜನ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ಮುಂದಾಗ್ತಿದ್ದಾರೆ. ಆದ್ರೆ, ಅತೀ ದೊಡ್ಡ ಜಿಲ್ಲೆಯಲ್ಲೇ ಸಿಟಿ ಸ್ಕ್ಯಾನ್ ಮಾಡಿಸೋದು ಅಷ್ಟು ಸುಲಭದ ಕೆಲಸ ಅಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಕೊರತೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವೇ ಇಲ್ಲದಂತೆ ಆಗಿದೆ. ಕಾರವಾರ, ಹೊನ್ನಾವರ, ಕುಮಟಾ, ಶಿರಸಿಯ ಸರ್ಕಾರಿ ಹಾಗೂ ಖಾಸಗಿ ಹೊರತುಪಡಿಸಿ ಉಳಿದ 8 ತಾಲೂಕುಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯಗಳೇ ಇಲ್ಲ. ಬೃಹತ್ ನಗರವಾಗಿರುವ ಭಟ್ಕಳದಲ್ಲಂತೂ ಕೇಳವ ಹಾಗಿಲ್ಲ.
ಅಂದ್ಹಾಗೆ, ಕೊರೊನಾದಿಂದಾಗಿ ಹಲವರಿಗೆ ನ್ಯುಮೋನಿಯಾ ಸಮಸ್ಯೆಯೂ ಎದುರಾಗುತ್ತಿದೆ. ಇದ್ರಿಂದ ಶ್ವಾಸಕೋಶದಲ್ಲಿ ಕಫದ ಸಂಗ್ರಹ ಪ್ರಮಾಣವೂ ಅಷ್ಟೇ ಹೆಚ್ಚಾಗಿರುತ್ತದೆ. ಇದನ್ನು ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ ಬಹಳಷ್ಟು ಅಗತ್ಯ. ಅಲ್ಲದೆ, ಕೊರೊನಾ ಲಕ್ಷಣಗಳಿದ್ರೂ ಆರ್‌ಟಿಪಿಸಿಆರ್ನಲ್ಲಿ ನೆಗೆಟಿವ್ ಬಂದಿದ್ರೂ, ಸಿಟಿ ಸ್ಕ್ಯಾನ್ ಉಪಯೋಗಿಸಬಹುದು. ಆದ್ರೆ, ಜಿಲ್ಲೆಯಲ್ಲಿ ಲಭ್ಯವಿರುವ ಸಿಟಿ ಸ್ಕ್ಯಾನ್‌ನಲ್ಲಿ ಕೂಡಾ ಹಲವಾರು ಬಾರಿ ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ, ಹೆಚ್ಚಿನ ಕ್ಯೂನಿಂದಾಗಿ ಜನರಿಂದ ಸೌಲಭ್ಯ ದೊರೆಯದಂತಾಗುತ್ತಿದೆ. ಹೊರ ಜಿಲ್ಲೆ ಉಡುಪಿ, ಮಂಗಳೂರು ಅಥವಾ ಹೊರ ರಾಜ್ಯ ಗೋವಾವನ್ನು ಅವಲಂಭಿಸಬೇಕಾದ ಸ್ಥಿತಿಯಿದೆ.
ಇನ್ನು, ಅಧಿಕಾರಿಗಳು ಹೇಳೋದೇ ಬೇರೆ. ಅಂದ್ರೆ, ಸಿಟಿ ಸ್ಕ್ಯಾನ್ ಹೆಚ್ಚಿನ ಅಗತ್ಯದ ವಸ್ತುವಲ್ಲ. ಆರ್‌ಟಿಪಿಸಿಆರ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದು, ಕೊವಿಡ್ ಲಕ್ಷಣಗಳಿದ್ದರೆ ಮಾತ್ರ ಸಿಟಿ ಸ್ಕ್ಯಾನ್ ಮಾಡಿಸ್ಬೇಕು ಅಂತಾ ಅಧಿಕಾರಿಗಳು ಖಡಕ್ ಆಗಿ ಹೇಳ್ತಿದ್ದಾರೆ. ಆದ್ರೆ, ಭಟ್ಕಳದಲ್ಲಿ ಸಿಟಿ ಸ್ಕ್ಯಾನ್ ಬಗ್ಗೆ ಸ್ಥಳೀಯ ಶಾಸಕ ಸುನೀಲ್ ನಾಯ್ಕ್ ಅವರ ಬಳಿ ಕೇಳಿದ್ರೆ, ಸಿಎಂ ಸಿಟಿ ಸ್ಕ್ಯಾನ್ ಅಳವಡಿಕೆಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ ಅಂದ್ರು.
ಒಟ್ನಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯದ ಕೊರತೆ ಇದೆ. ಇದ್ರಿಂದ ಜನ ಹೊರ ಜಿಲ್ಲೆಗಳಿಗೆ ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
Published On - 9:25 am, Thu, 13 May 21