ರಾಜ್ಯದಲ್ಲಿ ನ್ಯೂ ಇಯರ್​ ಸೆಲೆಬ್ರೆಷನ್​ಗೆ ಬ್ರೇಕ್.. ಗೋವಾದತ್ತ ಮುಖಮಾಡಿದ ಪಾರ್ಟಿ ಪ್ರಿಯರು!

| Updated By: ಸಾಧು ಶ್ರೀನಾಥ್​

Updated on: Dec 31, 2020 | 2:19 PM

ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಾವಿರಾರು ಜನರು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದಾರೆ. ಸಂಭ್ರಮಾಚರಣೆಗೆ ಕಾರು, ಬಸ್​ಗಳಲ್ಲಿ ಗೋವಾದ ಹಾದಿ ಹಿಡಿದಿದ್ದಾರೆ.

ರಾಜ್ಯದಲ್ಲಿ ನ್ಯೂ ಇಯರ್​ ಸೆಲೆಬ್ರೆಷನ್​ಗೆ ಬ್ರೇಕ್.. ಗೋವಾದತ್ತ ಮುಖಮಾಡಿದ ಪಾರ್ಟಿ ಪ್ರಿಯರು!
ಗೋವಾ ಸಿಎಂ ಪ್ರಮೋದ್ ಸಾವಂತ್
Follow us on

ಬೆಳಗಾವಿ: ಮಹಾಮಾರಿ ಕೊರೊನಾ ಹಾಗೂ ರೂಪಾಂತರ ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಮುಂಜಾಗೃತ ಕ್ರಮವಾಗಿ ಅನೇಕ ಕಡೆ ನಿರ್ಬಂಧನೆಗಳನ್ನು ಹೇರಲಾಗಿದೆ. ಹೀಗಾಗಿ ರಾಜ್ಯದ ಜನರು ಗೋವಾದತ್ತ ಮುಖ ಮಾಡಿದ್ದಾರೆ.

ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಾವಿರಾರು ಜನರು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದಾರೆ. ಸಂಭ್ರಮಾಚರಣೆಗೆ ಕಾರು, ಬಸ್​ಗಳಲ್ಲಿ ಗೋವಾದ ಹಾದಿ ಹಿಡಿದಿದ್ದಾರೆ. ಹೀಗಾಗಿ ಈ ಬಾರಿ ಸಹ ಗೋವಾದಲ್ಲಿ ಹೊಸ ವರ್ಷಕ್ಕೆ 40 ರಿಂದ45 ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ ತಿಳಿಸಿದ್ದಾರೆ. ಹಾಗೂ ಕೊರೊನಾ ನಿಯಮಾವಳಿಗಳನ್ನ ಪ್ರವಾಸಿಗರು ಪಾಲಿಸುವಂತೆ ಸೂಚಿಸಿದ್ದಾರೆ. ಕರ್ನಾಟಕದಿಂದ ಗೋವಾಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಕೊರೊನಾ ರೂಪಾಂತರ ಅಲೆಯ ಪ್ರಭಾವ ರಾಜ್ಯದಲ್ಲಿ ಮೆಲ್ಲನೆ ಕಾಣಿಸಿಕೊಳ್ಳುತ್ತಿದ್ದು ಜನರು ಈಗಿನಿಂದಲೇ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ 2020ರ ಘಟನೆ ಮರು ಕಳಿಸಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸ ವರ್ಷಾಚರಣೆಗೆ ಜಾರಿಗೊಳಿಸಿದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ