ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ

|

Updated on: Nov 20, 2019 | 4:02 PM

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ. ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ […]

ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ
Follow us on

ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ.

ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೆ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ. ಮೂಡಬಿದರೆ, ವಾಮಂಜೂರು, ಬಾರಾಡಿ ಮತ್ತು ಕೂಳೂರಿನಲ್ಲಿ ನಡೆದ ಕಂಬಳದಲ್ಲಿ ನಿಯಮಬಾಹಿರವಾಗಿ ವರ್ತಿಸಲಾಗಿದೆ ಅಂತ ಆರೋಪಿಸಿ ಕಂಬಳಕ್ಕೆ ತಡೆ ತರಲು ಪೇಟಾ ಮುಂದಾಗಿದೆ. ಇದು ಕಂಬಳ ಪ್ರೇಮಿಗಳ ನೋವಿಗೆ ಕಾರಣವಾಗಿದೆ.

ಕಂಬಳ ನಡೆಸಲು ಅನೇಕ ನಿಯಮಾವಳಿಗಳಿವೆ. ಕೋಣಗಳಿಗೆ ಹೊಡೆಯಬಾರ್ದು, ಮೂಗುದಾರ ಹಾಕಬಾರ್ದು, 100 ಮೀಟರ್​ಗಿಂತ ಹೆಚ್ಚು ಓಡಿಸಬಾರ್ದು, ಹೆಚ್ಚಿನ ಉಷ್ಣಾಂಶವಿದ್ರೆ ಕಂಬಳ ನಡೆಸಬಾರ್ದು ಅನ್ನೋ ಹತ್ತು ಹಲವು ಕಂಡೀಷನ್​ಗಳಿವೆ. ಆದ್ರೆ ಮಾಹಿತಿ ಕೊರತೆಯಿಂದ ಕೋಣಗಳ ಮಾಲೀಕರು ಸಣ್ಣಪುಟ್ಟ ತಪ್ಪು ಮಾಡಿದ್ದಾರೆ. ಇದರ ವಿಡಿಯೋ ಮಾಡಿರೋ ಪೇಟಾ ಸಂಘಟನೆಯವರು ಕಂಬಳಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಇದ್ರಿಂದ ನವೆಂಬರ್ ಅಂತ್ಯಕ್ಕೆ ಆರಂಭವಾಗಬೇಕಿದ್ದ ಕಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಂಬಳ ಒಂದು ಆರಾಧನಾ ಕಲೆ. ದೈವಗಳ ಆರಾಧನೆ ಭಾಗವಾಗಿ ಕೋಣಗಳನ್ನ ಓಡಿಸುವುದು ಪದ್ದತಿ. ಕ್ರಮೇಣ ಇದಕ್ಕೆ ಸ್ಪರ್ಧೆಯ ಸ್ವರೂಪ ಬಂದಿದ್ದು, ಕಂಬಳದ ಕಾಲಮಾನ ಮತ್ತು ನಂಬಿಕೆಗಳನ್ನ ಕೋರ್ಟ್ ಮುಂದೆ ನಿರೂಪಿಸುವ ಬಹುದೊಡ್ಡ ಸವಾಲು ಎದುರಾಗಿದೆ.

Published On - 3:51 pm, Wed, 20 November 19