Petrol Price Today: ರಾಜ್ಯದಲ್ಲಿ ಇತಿಹಾಸ ಬರೆದ ಪೆಟ್ರೋಲ್​, ಡೀಸೆಲ್ ದರ.. ಕೊರೊನಾ ಹೊಡೆತದ ನಡುವೆಯೇ ಜನರಿಗೆ ಗಾಯದ ಮೇಲೆ ಬರೆ

| Updated By: shruti hegde

Updated on: Jun 06, 2021 | 9:21 AM

Petrol Diesel Rate Today: ಕೊರೊನಾ ಮಹಾಮಾರಿಯ ನಡೆವೆ ಇಂಧನ ಬೆಲೆ ಏರಿಕೆಯು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಿದೆ. ಸರಿ ಸುಮಾರು ಒಂದು ತಿಂಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ ಆಗುತ್ತಲೇ ಇದೆ.

Petrol Price Today: ರಾಜ್ಯದಲ್ಲಿ ಇತಿಹಾಸ ಬರೆದ ಪೆಟ್ರೋಲ್​, ಡೀಸೆಲ್ ದರ.. ಕೊರೊನಾ ಹೊಡೆತದ ನಡುವೆಯೇ ಜನರಿಗೆ ಗಾಯದ ಮೇಲೆ ಬರೆ
ಪಿಟಿಐ ಚಿತ್ರ
Follow us on

ಬೆಂಗಳೂರು: ಮೊದಲೇ ಕೊರೊನಾ ಮಾಹಾಮಾರಿಯಿಂದಾಗಿ ಜನರು ನಲುಗಿ ಹೋಗಿದ್ದಾರೆ. ಇದರ ಮಧ್ಯೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೆರಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇಂದು (ಭಾನುವಾರ, ಜೂನ್ 6) ಪೆಟ್ರೋಲ್​, ಡೀಸೆಲ್​ ದರ ಏರಿಕೆ ಆಗಿದೆ. ನಿನ್ನೆ ಶನಿವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಒಂದು ದಿನ ವಿರಾಮದ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್​ ದರ ಏರಿಕೆಯಾಗಿದೆ. ಪ್ರತಿ ಲೀಟರ್​ ಪೆಟ್ರೊಲ್​ ದರದಲ್ಲಿ 26-27 ಪೈಸೆ ಹಾಗೂ ಲೀಟರ್ ಡೀಸೆಲ್​ ದರದಲ್ಲಿ 29-31 ಪೈಸೆ ಹೆಚ್ಚಳವಾಗಿದೆ.

ಕೊರೊನಾ ಮಹಾಮಾರಿಯ ನಡೆವೆ ಇಂಧನ ಬೆಲೆ ಏರಿಕೆಯು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಿದೆ. ಸರಿ ಸುಮಾರು ಒಂದು ತಿಂಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ ಆಗುತ್ತಲೇ ಇದೆ.

ಕಳೆದ ಮೇ ತಿಂಗಳಿನಲ್ಲಿ ಇಂಧನ ದರವನ್ನು ಒಟ್ಟು 16 ಬಾರಿ ಹೆಚ್ಚಳವಾಗಿತ್ತು. ಮೇ ತಿಂಗಳ 4 ನೇ ತಾರೀಕಿನಿಂದ ಏರಿಕೆ ಕಾಣುತ್ತಿರುವ ಪೆಟ್ರೋಲ್​ ಮತ್ತು ಡೀಸೆಲ್​ ದರ ಇಲ್ಲಿಯವರೆಗೂ ಏರುತ್ತಲೇ ಇದೆ. ಜೂನ್ ತಿಂಗಳ ಮೊದಲನೇಯ ದಿನ ಇಂಧನ ದರ ಏರಿಕೆ ಕಂಡ ಬಳಿಕ ಕಳೆದ ಶುಕ್ರವಾರ ದರ ಏರಿಕೆ ಮಾಡಲಾಯಿತು. ನಂತರ ಇಂದು ಇಂಧನ ದರ ಏರಿಕೆ ಕಂಡಿದೆ. ಜೂನ್​ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 3 ಬಾರಿ ಇಂಧನ ದರ ಏರಿದೆ.

ಕೊರೊನಾದಿಂದ ದಿನನಿತ್ಯದ ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರಿಗೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಂಕಷ್ಟ ತಂದೊಡ್ಡಿದೆ. ಲಾಕ್​ಡೌನ್​ನಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರು. ಇದರ ನಡುವೆ ಸದ್ದಿಲ್ಲದಂತೆ ಪೆಟ್ರೋಲ್ ರೇಟ್ ನೂರರ ಗಡಿಗೆ ಬಂದು ನಿಂತಿದೆ. ಬೆಂಗಳೂರಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ ಲೀಟರ್​ಗೆ 100 ರೂಪಾಯಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಲ್ಲಿ ಲೀಟರ್​ ಪೆಟ್ರೋಲ್ ದರ 97.92 ರೂಪಾಯಿ ಇದೆ. ಒಂದು ತಿಂಗಳಿನಲ್ಲಿ ಒಟ್ಟು 8 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ ಲೀಟರ್​ ಡೀಸೆಲ್​ ದರ 90.81 ರೂಪಾಯಿಗೆ ಏರಿಕೆಯಾಗಿದ್ದು ಒಂದು ತಿಂಗಳಲ್ಲಿ 10 ರೂಪಾಯಿ ಹೆಚ್ಚಳವಾಗಿದೆ. ಲಾಕ್​ಡೌನ್ ಅವಧಿಗೂ ಮುಂಚೆ ಕಡಿಮೆ ಇದ್ದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಒಂದು ತಿಂಗಳಲ್ಲಿ ಶತಕದತ್ತ ಸಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳ ಪೆಟ್ರೋಲ್ ಡೀಸೆಲ್ ದರ ಮಾಹಿತಿ
ಜಿಲ್ಲೆ                          ಪೆಟ್ರೋಲ್      ಡೀಸೆಲ್ ದರ

ರಾಮನಗರ               ₹98.31                ₹91.17
ಮಡಿಕೇರಿ                   ₹98.90               ₹91.57
ಬೆಳಗಾವಿ                     ₹ 97.73              ₹90.67
ಮಂಡ್ಯ                      ₹ 97.69               ₹90.60
ಕಲಬುರಗಿ                  ₹ 97.74               ₹90.68
ಹುಬ್ಬಳ್ಳಿ-ಧಾರವಾಡ    ₹99.84            ₹89.24
ಚಿತ್ರದುರ್ಗ                    ₹ 99.53              ₹92.16

ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಶತಕ ಬಾರಿಸುವ ನಿರೀಕ್ಷೆಯಿದೆ. ಹೀಗೆ ಪೆಟ್ರೋಲ್ ದರದಲ್ಲಿ ಹೆಚ್ಚಳವಾದರೆ ಇನ್ನೆರಡು ದಿನಗಳಲ್ಲಿ ಲೀಟರ್​ಗೆ ನೂರು ರೂಪಾಯಿ ಗಡಿ ದಾಟುವ ಕುರಿತಾಗಿ ಯಾವುದೇ ಸಂದೇಹವಿಲ್ಲ. ನಿರಂತರ ಏರಿಕೆಯತ್ತ ಸಾಗುತ್ತಿರುವ ಪೆಟ್ರೋಲ್​, ಡೀಸೆಲ್​ ದರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html