ಬೆಂಗಳೂರು: ದಿನೇ ದಿನೇ ಪೆಟ್ರೋಲ್ ದರ ಏರಿಕೆಯತ್ತ ಸಾಗುತ್ತಿದೆ. ನಗರದಲ್ಲಿ ಪೆಟ್ರೋಲ್ ದರ ಗರಿಷ್ಠ ಮಟ್ಟ ತಲುಪಿದೆ. ಈ ಬೆನ್ನಲ್ಲೇ ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಯಶವಂತಪುರದ ತ್ರಿವೇಣಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ನಲ್ಲಿ ಪೆಟ್ರೋಲ್ ಕದಿಯಲು ಕಳ್ಳರು ಮುಂದಾಗಿದ್ದಾರೆ. ಮಾರ್ಚ್ 6ರಂದು ಬೆಳಗಿನ ಜಾವ 5 ಗಂಟೆಯ ಸಮಯದಲ್ಲಿ ಇಬ್ಬರು ಕಳ್ಳರು ಪೆಟ್ರೋಲ್ ಕಳ್ಳತನಕ್ಕೆ ಮುಂದಾಗಿದ್ದಾರೆ. ಖಾಲಿ ರಸ್ತೆಯಲ್ಲಿ ಕೆಲ ಹೊತ್ತು ರೌಂಡ್ ಹೊಡೆದು ಹೊಂಚು ಹಾಕಿ ಕೃತ್ಯ ನಡೆಸಿದ್ದಾರೆ.
ಬೈಕ್ನಲ್ಲಿ ಬಂದ ಇಬ್ಬರು ರಸ್ತೆಯಲ್ಲಿ ಕೆಲ ಸಮಯ ಅಡ್ಡಾಡಿ ಸುತ್ತ ಮುತ್ತಲೂ ಗಮನಿಸಿದ್ದಾರೆ. ರಸ್ತೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊಂಚು ಹಾಕಿದ್ದಾರೆ. ಪೆಟ್ರೋಲ್ ಟ್ಯಾಂಕ್ಗೆ ಖಾಲಿ ಬಾಟಲ್ ಅಳವಡಿಸಿ ಕೆಲ ಕಾಲ ಅಡಗಿ ನಿಂತಿದ್ದಾರೆ. ಸ್ವಲ್ಪ ಸಮಯದ ನಂತರ ವಾಪಸ್ ಬಂದು ಬಾಟಲ್ ತೆಗೆದುಕೊಂಡು ಎಸ್ಕೇಪ್ ಆಗಿರುವ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬೈಕ್ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳ, ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕರಿಂದ ಥಳಿತ
ಇದನ್ನೂ ಓದಿ : ಬೈಕ್ ನಿಲ್ಲಿಸಿ ಶಾಪಿಂಗ್ಗೆ ಹೋಗಿ ಬರುವಷ್ಟರಲ್ಲಿ ಬೈಕ್ ಮಾಯ