AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್​ಐ ಕಾರ್ಯಕರ್ತರಿಗೆ ಮಿತ್ತೂರಿನಲ್ಲಿ ಶಸ್ತ್ರಾಸ್ತ್ರ ತರಬೇತಿ; ಎನ್​ಐಎ ವಿಶೇಷ ನ್ಯಾಯಾಲಯದಿಂದ ಪಿಎಫ್​ಐ ಪ್ರಕರಣ ವರ್ಗಾವಣೆ

ಕಮ್ಯನಿಟಿ ಹಾಲ್​ನಲ್ಲಿ ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಅವುಗಳ ಬಳಕೆ ಹೇಗೆ ಎಂಬುದನ್ನು ವಿವರಿಸಲಾಗಿತ್ತು.

ಪಿಎಫ್​ಐ ಕಾರ್ಯಕರ್ತರಿಗೆ ಮಿತ್ತೂರಿನಲ್ಲಿ ಶಸ್ತ್ರಾಸ್ತ್ರ ತರಬೇತಿ; ಎನ್​ಐಎ ವಿಶೇಷ ನ್ಯಾಯಾಲಯದಿಂದ ಪಿಎಫ್​ಐ ಪ್ರಕರಣ ವರ್ಗಾವಣೆ
ಪಿಎಫ್ಐ (ಸಂಗ್ರಹ ಚಿತ್ರ)
TV9 Web
| Edited By: |

Updated on: Oct 03, 2022 | 3:14 PM

Share

ಮಂಗಳೂರು / ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಸಂಘಟನೆಯ ಆಯ್ದ ಕೆಲ ಕಾರ್ಯಕರ್ತರಿಗೆ ಬಂಟ್ವಾಳ ತಾಲ್ಲೂಕಿನ ಮಿತ್ತೂರಿನಲ್ಲಿ ಬಂದೂಕು ಮತ್ತು ಪಿಸ್ತೂಲ್​ಗಳ ಬಗ್ಗೆ ‘ಓರಲ್ ಟ್ರೇನಿಂಗ್’ ನೀಡಲಾಗಿತ್ತು ಎನ್ನುವ ಸಂಗತಿ ಇದೀಗ ಬಹಿರಂಗಗೊಂಡಿದೆ. ಮಿತ್ತೂರಿನ ಫ್ರೀಡಂ ಕಮ್ಯನಿಟಿ ಹಾಲ್​ನಲ್ಲಿ ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಅವುಗಳ ಬಳಕೆ ಹೇಗೆ ಎಂಬುದನ್ನು ವಿವರಿಸಲಾಗಿತ್ತು. ಅಲ್ಲಿ ಬಂದೂಕು ಬಳಕೆಯ ತರಬೇತಿ ಕೊಡುತ್ತಿರಲಿಲ್ಲ. ಮಿತ್ತೂರಿನಲ್ಲಿ ಓರಲ್ ಕ್ಲಾಸ್ ಪಡೆದ ಅಭ್ಯರ್ಥಿಗಳಿಗೆ ಕೇರಳದ ನಿಗೂಢ ಸ್ಥಳದಲ್ಲಿ ಬಂದೂಕು ಬಳಕೆಯ ತರಬೇತಿ ನೀಡಲಾಗಿತ್ತು ಎಂದು ‘ಟಿವಿ9’ಗೆ ಎನ್​ಐಎ ಉನ್ನತ ಮೂಲಗಳು ಹೇಳಿವೆ.

ಸತ್ಯಮಂಗಲ ಅರಣ್ಯದ ಸಂಬಂಧ

ಬಂಧಿತ ಪಿಎಫ್​ಐ ಕಾರ್ಯಕರ್ತರ ವಿಚಾರಣೆ ಪ್ರಗತಿಯಲ್ಲಿದ್ದು, ಈ ವೇಳೆ ಹೊಸದೊಂದು ಸಂಗತಿ ಬೆಳಕಿಗೆ ಬಂದಿದೆ. ಕೇರಳ‌, ಮಂಗಳೂರು ಮತ್ತು ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪೊಲೀಸರಿಗೆ ಸಿಕ್ಕ ಒಂದು ಫೋಟೊ ತನಿಖೆಯಲ್ಲಿ ಹಲವು ತಿರುವುಗಳಿಗೆ ಕಾರಣವಾಗಿದೆ. ಬಂಧಿತರ ಮೊಬೈಲ್​ನಲ್ಲಿದ್ದ ಫೋಟೊದಲ್ಲಿದ್ದ ಸ್ಥಳದ ಬಗ್ಗೆ ಪೊಲೀಸರು ಹೆಚ್ಚು ಗಮನ ಕೊಟ್ಟಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳು ಬಾಯ್ಬಿಟ್ಟ ನಂತರ ರಾತ್ರೋರಾತ್ರಿ ಮಹಜರಿಗೆ‌ ಕರೆದೊಯ್ದರು. ಈ ಫೋಟೊದಲ್ಲಿ ಪಿಎಫ್​ಐನ 20 ಮಂದಿ ಕ್ರಿಕೆಟ್ ಆಡಿದ್ದ ವಿವರಗಳಿದ್ದವು. ಆರಂಭದಲ್ಲಿ ಮಂಗಳೂರಿನ ಜಾಗ ಎಂದು ಹೇಳಲಾಗಿತ್ತು, ನಂತರ ಸತ್ಯಮಂಗಲ ಅರಣ್ಯ ಎಂಬುದು ತಿಳಿದುಬಂತು. ಸತ್ಯಮಂಗಲ ಅರಣ್ಯದಲ್ಲಿ ‘ಕೇಡರ್’ ಎಂಬ ಹೆಸರಿನಲ್ಲಿ ಯುವಕರಿಗೆ ವಿಶೇಷ ತರಬೇತಿ ನಡೆಯುತ್ತಿತ್ತು.

ತೀವ್ರಗೊಂಡ ವಿಚಾರಣೆ

ರಿಟ್ರೀವ್ ರಿಪೋರ್ಟ್ ಮುಂದಿಟ್ಟು ವಿಚಾರಣೆ ಮಾಡಿದರೂ ಆರೋಪಿಗಳು ಬಾಯಿಬಿಡುತ್ತಿಲ್ಲ. ಹೇಳಿಕೆಗೆ ಸಹಿಯನ್ನೂ ಹಾಕುತ್ತಿಲ್ಲ. ಇನ್​ಸ್ಪೆಕ್ಟರ್ ದರ್ಜೆಯ ಒಬ್ಬ ಅಧಿಕಾರಿಗೆ ಇಬ್ಬರು ಆರೋಪಿಗಳ ವಿಚಾರಣೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ. ಕೆ.ಜೆ.ಹಳ್ಳಿ, ಬೈಯಪ್ಪನಹಳ್ಳಿ, ಗೋವಿಂದಪುರ, ಪುಲಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಜೆ.ಬಿ.ನಗರ, ರಾಮಮೂರ್ತಿ ನಗರ, ಅಮೃತಹಳ್ಳಿ, ಆಡುಗೋಡಿ ಠಾಣೆಯ ಇನ್​ಸ್ಪೆಕ್ಟರ್​ಗಳಿಗೆ ತನಿಖೆಯ ಹೊಣೆ ಒಪ್ಪಿಸಲಾಗಿದೆ.

ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ

ಬೆಂಗಳೂರಿನಲ್ಲಿ 15 ಪಿಎಫ್​ಐ ಮುಖಂಡರ ವಿಚಾರಣೆಯನ್ನು ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧಿತ ಪಿಎಫ್ಐ ಕಾರ್ಯಕರ್ತರ ವಿರುದ್ಧ ಯುಪಿಪಿಎ ಕಾಯ್ದೆಯ (UNLAWFUL ACTIVITIES (PREVENTION) ACT – UAPA) ಅನ್ವಯ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಲು ಸಮ್ಮತಿಸಿತು. ಅಕ್ಟೋಬರ್ 6ಕ್ಕೆ ಎನ್​ಐಎ ನ್ಯಾಯಾಲಯದಲ್ಲಿಯೇ ವಿಚಾರಣೆಗೆ ಆರೋಪಿಗಳನ್ನು ಹಾಜರುಪಡಿಸಬೇಕು ಎಂದು ಎಸಿಎಂಎಂ ನ್ಯಾಯಾಲಯವು ಆದೇಶ ಮಾಡಿದೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?