ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ: ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!

Edited By:

Updated on: Jan 27, 2026 | 11:55 AM

ಜನನಾನಂತರ ಒಂಭತ್ತು ತಿಂಗಳಲ್ಲಿ ದೇಹದ ಸ್ವಾಧೀನ ಕಳೆದುಕೊಂಡರೂ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ 25 ವರ್ಷದ ಯುವಕ ಅದ್ಭುತ ಸಾಧನೆ ಮಾಡಿ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಕೇವಲ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಎಡಿಟಿಂಗ್ ಹಾಗೂ ಆನ್‌ಲೈನ್ ಉದ್ಯಮ ನಡೆಸುತ್ತಿದ್ದಾರೆ. ಸ್ವಯಂ ದುಡಿಮೆಯಿಂದ ಜೀವನ ನಡೆಸುತ್ತಿರುವ ಇವರು, ಅನೇಕರಿಗೆ ಸ್ಪೂರ್ತಿದಾಯಕವಾಗಿದ್ದಾರೆ.

ಮಂಗಳೂರು, ಜನವರಿ 27: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಬೀರ್ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಅಬ್ಬಾಸ್ ಮತ್ತು ಅಮೀನಾ ದಂಪತಿಯ ಪುತ್ರರಾದ ಕಬೀರ್, ಒಂಭತ್ತು ತಿಂಗಳ ವಯಸ್ಸಿನಲ್ಲಿ ಜ್ವರದಿಂದ ದೇಹದ ಸ್ವಾಧೀನ ಕಳೆದುಕೊಂಡರು. ಪ್ರಸ್ತುತ 25 ವರ್ಷ ವಯಸ್ಸಿನ ಕಬೀರ್, ಕುತ್ತಿಗೆ ಮೇಲ್ಭಾಗದಲ್ಲಿ ಮತ್ತು ಹೆಬ್ಬೆರಳಿನಲ್ಲಿ ಮಾತ್ರ ಚಲನೆಯನ್ನು ಹೊಂದಿದ್ದಾರೆ. ಕೇವಲ ತಮ್ಮ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಕಲಿತ ಇವರು, ಆನ್‌ಲೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಆನ್‌ಲೈನ್ ಶಾಪ್, ಟ್ರಾವೆಲ್ಸ್, ಫೋಟೋಶೂಟ್, ಈವೆಂಟ್ ಡೆಕೋರ್, ವೆಡ್ಡಿಂಗ್ ಪ್ಲಾನರ್ ಮತ್ತು ಕ್ರಾಫ್ಟ್ ಐಟಂಗಳಂತಹ ಬಹು ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯೂಟ್ಯೂಬ್ ನೋಡಿ ಕಲಿತ ಇವರು, ಆಸಕ್ತಿ ಇದ್ದರೆ ಯಾವುದನ್ನೂ ಕಲಿಯಬಹುದು ಎಂದು ಹೇಳುತ್ತಾರೆ. ಸ್ವಯಂ ದುಡಿಮೆಯಿಂದ ಹೊಸ ಕಾರು ಖರೀದಿಸಿರುವ ಇವರು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಶಾಪ್ ತೆರೆಯುವ ಗುರಿಯನ್ನೂ ಹೊಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More