ಔಷಧಿಯಲ್ಲಿ ಹಂದಿ ಕೊಬ್ಬು ಬಳಸಲು ಅವಕಾಶವಿದೆ.. ಮುಸ್ಲಿಮರು ಲಸಿಕೆ ಸ್ವೀಕರಿಸಿ: ಅಬ್ದುಲ್ ಅಜೀಮ್

ಕೊರೊನಾ ಲಸಿಕೆಯಲ್ಲಿ ಹಂದಿ ಕೊಬ್ಬು ಬಳಸಲಾಗುತ್ತದೆ ಎಂಬ ಕಾರಣಕ್ಕೆ ಭಯಪಡುವುದು ಬೇಡ. ಇಸ್ಲಾಂ ಧರ್ಮದಲ್ಲಿ ಔಷಧಿ ರೂಪದಲ್ಲಿ ಹಂದಿ ಉತ್ಪನ್ನ ಸ್ವೀಕರಿಸಲು ಅವಕಾಶವಿದೆ. ಧೈರ್ಯದಿಂದ ಲಸಿಕೆ ಸ್ವೀಕರಿಸಿ ಎಂದು ಅಬ್ದುಲ್ ಅಜೀಮ್ ಹೇಳಿದ್ದಾರೆ.

ಔಷಧಿಯಲ್ಲಿ ಹಂದಿ ಕೊಬ್ಬು ಬಳಸಲು ಅವಕಾಶವಿದೆ.. ಮುಸ್ಲಿಮರು ಲಸಿಕೆ ಸ್ವೀಕರಿಸಿ: ಅಬ್ದುಲ್ ಅಜೀಮ್
ಪ್ರಾತಿನಿಧಿಕ ಚಿತ್ರ
Edited By:

Updated on: Jan 05, 2021 | 8:29 PM

ಕೊಡಗು: ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಹಂದಿ ಕೊಬ್ಬು ಬಳಸಲಾಗುತ್ತದೆ ಎಂಬ ಕಾರಣಕ್ಕೆ ಮುಸಲ್ಮಾನರು ಭಯಪಡಬೇಕಾದ ಅವಶ್ಯಕತೆ ಇಲ್ಲ. ರೋಗ ಗುಣಪಡಿಸುವ ಔಷಧಿಯಾಗಿ ಹಂದಿ ಉತ್ಪನ್ನ ಬಳಸಲು ಅವಕಾಶ ಇದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿಕೆ ನೀಡಿದ್ದಾರೆ.

ಲಸಿಕೆಯಲ್ಲಿ ಹಂದಿಯ ಕೊಬ್ಬು ಬಳಸಿದ್ದರೂ ಅದನ್ನು ಸ್ವೀಕರಿಸಬಹುದು. ಈ ವಿಚಾರದಲ್ಲಿ ವಿನಾಕಾರಣ ಗೊಂದಲ‌ ಸೃಷ್ಟಿಸುವುದು ಬೇಡ. ಸೌದಿಯಲ್ಲಿ ಅಲ್ಲಿನ ದೊರೆಯೇ ಮೊದಲ ಲಸಿಕೆ ಸ್ವೀಕರಿಸಿದ್ದಾರೆ. ಈ ಹಿಂದೆಯೂ ಹಂದಿ ಕೊಬ್ಬಿನಿಂದ ತಯಾರಿಸಿದ ಔಷಧಿ ಬಳಕೆ ಮಾಡಲಾಗಿದೆ. ಹೀಗಾಗಿ ಜನ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಮುಸಲ್ಮಾನರು ಯಾವುದೇ ಭಯವಿಲ್ಲದೆ ಲಸಿಕೆ ಸ್ವೀಕರಿಸಬಹುದು. ನನಗೂ ಧರ್ಮದ ಬಗ್ಗೆ ತಿಳುವಳಿಕೆ ಇದೆ. ಆದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ವ್ಯಾಕ್ಸಿನ್ ಬಗ್ಗೆ ಇರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನಮ್ಮ ಪ್ರಧಾನಿ ಜನರ ಹಿತ ಬಯಸಿದ್ದಾರೆ. ಅವರ ಮೇಲೆ‌ ಎಲ್ಲರು ವಿಶ್ವಾಸ ಇಡಬೇಕು ಎಂದು ಅಬ್ದುಲ್ ಅಜೀಮ್‌ ತಿಳಿಸಿದ್ದಾರೆ.

ಕೊರೊನಾ ಲಸಿಕೆಯೊಂದಿಗೆ ತಳುಕು ಹಾಕಿಕೊಂಡ ಧಾರ್ಮಿಕ ಭಾವನೆ; ಬಳಕೆಗೆ ಇಸ್ಲಾಂ- ಹಿಂದೂ ಮುಖಂಡರ ವಿರೋಧ