AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಸೂಕ್ಷ್ಮವಾಗಿ ವರ್ತಿಸಿರುವುದು ಖುಷಿಯ ವಿಚಾರ: ತೇಜಸ್ವಿ ಸೂರ್ಯ

ಕೊರೊನಾ ಲಸಿಕೆಯನ್ನು ಬಿಜೆಪಿಯ ಲಸಿಕೆ ಅನ್ನೋದು ಬೇಜವಾಬ್ದಾರಿ ವರ್ತನೆ. ಜನರಿಗೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ. ಖುಷಿಯ ವಿಚಾರವೆಂದರೆ ಇಲ್ಲಿಯವರೆಗೂ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದವರು ವ್ಯಾಕ್ಸಿನ್ ಬಗ್ಗೆ ಅಸಂಬದ್ಧ ಮಾತನಾಡಿಲ್ಲ. ಎಲ್ಲಾ ರಾಜಕೀಯ ಪಕ್ಷದವರೂ ಇದೇ ರೀತಿ ಸ್ಪಂದಿಸಬೇಕು.

ಕೊರೊನಾ ಲಸಿಕೆ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಸೂಕ್ಷ್ಮವಾಗಿ ವರ್ತಿಸಿರುವುದು ಖುಷಿಯ ವಿಚಾರ: ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
Skanda
| Edited By: |

Updated on: Jan 05, 2021 | 8:39 PM

Share

ಬೆಂಗಳೂರು: ಕೊರೊನಾ ಲಸಿಕೆ ಸಂಗ್ರಹ ಮತ್ತು ಹಂಚಿಕೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 1.68 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ವಿತರಿಸಲಾಗುವುದು. 2ನೇ ಹಂತದಲ್ಲಿ 2 ಲಕ್ಷ ಜನರಿಗೆ ಹಾಗೂ 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಲಸಿಕೆ ಕುರಿತಾದ ಯಾವುದೇ ಸುಳ್ಳು ಸುದ್ದಿಗೆ ಜನ ಕಿವಿಗೊಡಬಾರದು. ಕೊರೊನಾ ಲಸಿಕೆಯ ಕುರಿತು ಎಲ್ಲಾ ಹಂತದ ಪ್ರಯೋಗಗಳನ್ನು ಮಾಡಲಾಗಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಲಸಿಕೆ ವಿತರಿಸುವ ವಿಚಾರವಾಗಿ ಸಭೆ ನಡೆಸಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಈ ಮೂರು ಸ್ತರಗಳಲ್ಲಿ ಸೂಕ್ತ ಹೊಂದಾಣಿಕೆ ಇದೆ. ವ್ಯಾಕ್ಸಿನ್ ಕೊಡಲು ಬೇಕಾಗಿರುವ ವ್ಯಾಕ್ಸಿನೇಟರ್​ಗಳಿಗೆ ಸಂಪೂರ್ಣ ತರಬೇತಿಯನ್ನೂ ನೀಡಲಾಗುತ್ತದೆ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಲಸಿಕೆಯನ್ನು ಬಿಜೆಪಿಯ ಲಸಿಕೆ ಅನ್ನೋದು ಬೇಜವಾಬ್ದಾರಿ ವರ್ತನೆ. ಜನರಿಗೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ. ಖುಷಿಯ ವಿಚಾರವೆಂದರೆ ಇಲ್ಲಿಯವರೆಗೂ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದವರು ವ್ಯಾಕ್ಸಿನ್ ಬಗ್ಗೆ ಅಸಂಬದ್ಧ ಮಾತನಾಡಿಲ್ಲ. ಎಲ್ಲಾ ರಾಜಕೀಯ ಪಕ್ಷದವರೂ ಇದೇ ರೀತಿ ಸ್ಪಂದಿಸಬೇಕು. ಜನರಿಗೆ ಸುಳ್ಳು ಮಾಹಿತಿ ನೀಡದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿವಾದಿತ ‘ಕೊವ್ಯಾಕ್ಸಿನ್​’ ಲಸಿಕೆ ಸ್ವೀಕರಿಸಿದ ಪತ್ರಕರ್ತೆ.. ನೀವೂ ಲಸಿಕೆ ಸ್ವೀಕರಿಸಿ ಎಂದು ಜನಸಾಮಾನ್ಯರಿಗೆ ಕರೆ