ಮೈಸೂರು: ಇಂದು ಮೈಸೂರು,ಕೊಡಗು ಸಂಸದ ಪ್ರತಾಪ್ ಸಿಂಹ ಜನ್ಮದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಪತ್ರ ಬರೆದು ಪ್ರತಾಪ್ ಸಿಂಹ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಪ್ರತಾಪ್ ಸಿಂಹ ದೀರ್ಘಕಾಲ ಆರೋಗ್ಯಯುತವಾಗಿ ಜೀವಿಸುವಂತಾಗಲಿ ಹಾಗೂ ಜೀವನದ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ದೊರೆಯುವಂತಾಗಲಿ. ಮುಂಬರುವ ವರ್ಷಗಳಲ್ಲಿ ತಮ್ಮ ಉತ್ತಮ ಮತ್ತು ಸುಸ್ಥಿತಿಯು ಮುಂದುವರಿಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದ ಪ್ರತಾಪ್ ಸಿಂಹಗೆ ಹಾರೈಸಿದ್ದಾರೆ. ಜತೆಗೆ ಪತ್ರದಲ್ಲಿ ತಮ್ಮ ಸಹಿಯನ್ನೂ ನಮೂದಿಸಿದ್ದಾರೆ.
ಪತ್ರದ ಪ್ರತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Thank you so much beloved PM @narendramodi ji. You made my day Sir. Thanq. pic.twitter.com/umPwpg2kmN
— Pratap Simha (@mepratap) June 21, 2021
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಏಕೆ ಸರಬರಾಜಾಗಿಲ್ಲವೆಂಬುದು ತಿಳಿದಿದೆ: ಸಂಸದ ಪ್ರತಾಪ್ ಸಿಂಹ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣದಲ್ಲಿ ಚಾಮರಾಜನಗರಕ್ಕೆ ಏಕೆ ಆಕ್ಸಿಜನ್ ಹೋಗಿಲ್ಲವೆಂದು ಗೊತ್ತಿದೆ. ಆದರೆ ಆ ಸತ್ಯವನ್ನು ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಇತ್ತೀಚಿಗೆ ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ನಮ್ಮ ಪಕ್ಷವೇ ಆಡಳಿತ ನಡೆಸುತ್ತಿದೆ. ಎಲ್ಲಾ ಅಧಿಕಾರಿಗಳು ನಮ್ಮ ಅಧೀನದಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸತ್ಯಗಳನ್ನು ಹೇಳಲು ಆಗಲ್ಲ. ಸದ್ಯ ಅದ್ಯಾವುದೋ ತೇಪೆ ಹಚ್ಚುವ ವರದಿಯನ್ನು ಕೊಟ್ಟಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ, ಅದರ ಸತ್ಯಾಂಶ ಗೊತ್ತಾಗಲಿದೆ. ಸಚಿವ ಸುರೇಶ್ ಕುಮಾರ್ ನಮ್ಮ ಡಿಸಿ ಬಗ್ಗೆ ಆರೋಪಿಸಿದ್ದರು. ಮೈಸೂರನ್ನು ಕಟ ಕಟೆಯಲ್ಲಿ ನಿಲ್ಲಸಬಾರದು ಎಂಬ ಕಾರಣಕ್ಕೆ ಮತ್ತು ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಜಗಳವಾಗುತ್ತೆಂದು ಆ ಸಂದರ್ಭದಲ್ಲಿ ನಾನು ಸಮರ್ಥಿಸಿಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ
(PM Narendra Modi wishes Mysuru Kodagu MP Pratap Simha on his birthady in Kannada)
Published On - 6:07 pm, Mon, 21 June 21