ದಾವಣಗೆರೆ: ನಗರದಲ್ಲಿ ಲಕ್ಷಾಂತರ ರೂಪಾಯಿಗೆ 2 ತಲೆ ಹಾವು ಮಾರಲು ಯತ್ನಿಸಿದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಆರೋಪಿಗಳ ಬಂಧನವಾಗಿದೆ.
ಚಿತ್ರದುರ್ಗದ ಗಣೇಶ್(28), ಚನ್ನಗಿರಿಯ ಅಭಿಲಾಷ್(21), ಶಿವಮೊಗ್ಗದ ನಾಗರಾಜ್(34), ಬಳ್ಳಾರಿಯ ಮುತ್ತಪ್ಪ(27) ಹಾಗೂ ಗಾಣದಕಟ್ಟೆಯ ನಿವಾಸಿ ಪ್ರಜ್ವಲ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಎರಡು ತಲೆಯ 3 ಹಾವುಗಳನ್ನು ಜಪ್ತಿ ಮಾಡಲಾಗಿದೆ.
ಕಿರಾತಕರು ಲಕ್ಷಾಂತರ ರೂಪಾಯಿಗೆ 2 ತಲೆ ಹಾವು ಮಾರಲು ಕಾಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಂದ ಐವರ ಬಂಧನವಾಗಿದೆ. ನಗರದ CEN ಠಾಣೆಯ ಪೊಲೀಸರಿಂದ ಬಂಧನವಾಗಿದೆ.
ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಗೋಲ್ಡ್ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!
Published On - 8:37 pm, Sun, 10 January 21