ಅವಧಿ ಮುಗಿದ ರೆಮ್ಡಿಸಿವಿರ್ ಮಾರಾಟ, ಸಿಬ್ಬಂದಿಯನ್ನು ವಶಕ್ಕೆ ಪಡೆದ ಜಿಗಣಿ ಪೊಲೀಸ್

|

Updated on: Apr 26, 2021 | 8:44 AM

ಕೊರೊನಾ ಸಮಯದಲ್ಲಿ ಹಣ ಮಾಡಲು ಮುಂದಾಗಿರುವ ಧನದಾಹಿ ತಂಡ ಆಸ್ಪತ್ರೆಯಲ್ಲೇ ಇಂತಹ ಕಳ್ಳಾಟ ನಡೆಸಿದೆ. ಜಿಗಣಿ ಪೊಲೀಸರು ಆಸ್ಪತ್ರೆ ಮೇಲೆ ದಾಳಿ ನಡೆಸಿ 2 ಇಂಜೆಕ್ಷನ್ ವಶಪಡಿಸಿಕೊಂಡಿದ್ದಾರೆ.

ಅವಧಿ ಮುಗಿದ ರೆಮ್ಡಿಸಿವಿರ್ ಮಾರಾಟ, ಸಿಬ್ಬಂದಿಯನ್ನು ವಶಕ್ಕೆ ಪಡೆದ ಜಿಗಣಿ ಪೊಲೀಸ್
ರೆಮ್‌ಡಿಸಿವಿರ್
Follow us on

ಆನೇಕಲ್: ಕೊರೊನಾ ಆರ್ಭಟದ ನಡುವೆ ಅಕ್ರಮ ರೆಮ್ಡಿಸಿವಿರ್ ಸಾಗಾಟ, ಮಾರಾಟ ಹೆಚ್ಚಾಗುತ್ತಿದೆ. ಸಮಯ ಬಳಸಿಕೊಂಡು ದುಷ್ಟರು ಹಣ ಮಾಡಲು ನಿಂತಿದ್ದಾರೆ. ಇದೇ ರೀತಿ ಜಿಗಣಿ ಸುಹಾಸ್ ಆಸ್ಪತ್ರೆಯಲ್ಲಿ ಪೊಲೀಸರು ರೆಮ್ಡಿಸಿವಿರ್ ವಶಪಡಿಸಿಕೊಂಡಿದ್ದಾರೆ. ಅವಧಿ ಮುಗಿದು ನಾಲ್ಕು ತಿಂಗಳಾಗಿದ್ದ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಕಾರಣ ಆಸ್ಪತ್ರೆ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊರೊನಾ ಸಮಯದಲ್ಲಿ ಹಣ ಮಾಡಲು ಮುಂದಾಗಿರುವ ಧನದಾಹಿ ತಂಡ ಆಸ್ಪತ್ರೆಯಲ್ಲೇ ಇಂತಹ ಕಳ್ಳಾಟ ನಡೆಸಿದೆ. ಜಿಗಣಿ ಪೊಲೀಸರು ಆಸ್ಪತ್ರೆ ಮೇಲೆ ದಾಳಿ ನಡೆಸಿ 2 ಇಂಜೆಕ್ಷನ್ ವಶಪಡಿಸಿಕೊಂಡಿದ್ದಾರೆ. 2 ಇಂಜೆಕ್ಷನ್ಗಳಿಗೆ 30 ಸಾವಿರಕ್ಕೆ ಮಾರಾಟ ಮಾಡಲು ಈ ತಂಡ ಮುಂದಾಗಿತ್ತು. ಅವಧಿ ಮುಗಿದಿದ್ದ ಇಂಜೆಕ್ಷನ್ ನೀಡಿ ಹಣ ಮಾಡುತ್ತಿದ್ದರು. ಆಸ್ಪತ್ರೆ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 15 ಸಾವಿರಕ್ಕೆ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುವ ವಿಚಾರದಲ್ಲಿ ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿ ಅರೆಸ್ಟ್ ಆಗಿದ್ದರು. ರೆಮ್ಡಿಸಿವಿರ್ ಇಂಜೆಕ್ಷನ್ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜಿಗಣಿ ಪೊಲೀಸರು ದಾಳಿ ಮಾಡಿ ಸುಹಾಸ್ ಆಸ್ಪತ್ರೆಯ ಸಿಬ್ಬಂದಿಯನ್ನು ಬಂಧಿಸಿದ್ದರು. ಸುಹಾಸ್ ಆಸ್ಪತ್ರೆಯ ಮುಖ್ಯಸ್ಥ ಜಗದೀಶ್ ಹಿರೇಮಠ ಹಣಮಾಡಲು ಅಡ್ಡದಾರಿ ಹಿಡಿದ್ರಾ ಎಂಬ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಅಕ್ರಮ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಣೆ: ರಾಯಚೂರಿನಲ್ಲಿ ಆಂಬುಲೆನ್ಸ್​ ಚಾಲಕ ಅಮಾನತು, ಬೆಂಗಳೂರಿನಲ್ಲಿ ಇಬ್ಬರ ಬಂಧನ