ಮನೆಗಳ್ಳ ಬಂಧನ; 16.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಬಂಧಿತನ ವಿಚಾರಣೆ ವೇಳೆ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ನಡೆಸುತ್ತಿದ್ದ ಮಾಹಿತಿ ತಿಳಿದುಬಂದಿದೆ. ಸುಮಾರು 15 ಮನೆಗಳ್ಳತನ ಎಸಗಿ ಪರಾರಿಯಾಗಿದ್ದ ಆರೋಪಿ ಕದ್ದ ಮಾಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ.
ಬೆಂಗಳೂರು: ವಿಜಯನಗರ ಎಸಿಪಿ ಅಪರಾಧ ಪತ್ತೆದಳ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರಶಾಂತ್ ಎಂಬಾತ ಸೆರೆ ಸಿಕ್ಕಿದ್ದಾನೆ. ಮನೆಗಳ್ಳನ ಬಂಧನದಿಂದ ಸುಮಾರು 15 ಕಳವು ಕೇಸ್ ಬಯಲಾಗಿದ್ದು, ಬಂಧಿತನಿಂದ 16.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬಂಧಿತನ ವಿಚಾರಣೆ ವೇಳೆ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ನಡೆಸುತ್ತಿದ್ದ ಮಾಹಿತಿ ತಿಳಿದುಬಂದಿದೆ. ಸುಮಾರು 15 ಮನೆಗಳ್ಳತನ ಎಸಗಿ ಪರಾರಿಯಾಗಿದ್ದ ಆರೋಪಿ ಕದ್ದ ಮಾಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ. ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 4 ಲಕ್ಷದ 85 ಸಾವಿರ ಮೌಲ್ಯದ 77 ಗ್ರಾಂ ಚಿನ್ನಾಭರಣ 2 ಬೈಕ್ ಜಪ್ತಿ ಮಾಡಿದ ಪೊಲೀಸರು, ಒಟ್ಟು 9 ಪ್ರಕರಣಗಳಿಂದ 16 ಲಕ್ಷದ 85 ಸಾವಿರ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಚಿತ್ರದುರ್ಗದಲ್ಲಿ ಭೀಕರ ಅಪಘಾತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದ ಬಳಿ ಲಾರಿಗಳ ಮಧ್ಯೆ ಭೀಕರ ಅಪಘಾತ ನಡೆದಿದೆ. ಲಾರಿಯಲ್ಲಿದ್ದ ವ್ಯಕ್ತಿಯೋರ್ವನ ರುಂಡ ಬೇರ್ಪಟ್ಟು ದುರ್ಮರಣ ಹೊಂದಿದ್ದಾರೆ. ಈವರೆಗೆ ಮೃತನ ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ
ಮಾಡೆಲ್ ಮೇಲೆ ಪ್ರಿಯತಮನಿಂದಲೇ ನಿರಂತರ ಅತ್ಯಾಚಾರ, ಬ್ಲ್ಯಾಕ್ಮೇಲ್: ನೊಂದ ಯುವತಿಯಿಂದ ಯಶವಂತಪುರ ಠಾಣೆಗೆ ದೂರು
(Police arrested a thief who stole 15 homes in Bengaluru)