AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡೆಲ್ ಮೇಲೆ ಪ್ರಿಯತಮನಿಂದಲೇ ನಿರಂತರ ಅತ್ಯಾಚಾರ, ಬ್ಲ್ಯಾಕ್​ಮೇಲ್: ನೊಂದ ಯುವತಿಯಿಂದ ಯಶವಂತಪುರ ಠಾಣೆಗೆ ದೂರು

ಆರೋಪಿ ಪ್ರಮೋದ್ ಎಂಬಾತ ಖಾಸಗಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೀನಿ ಅಂತ ಬೆದರಿಕೆ ಹಾಕಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಯಶವಂತಪುರ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮಾಡೆಲ್ ಮೇಲೆ ಪ್ರಿಯತಮನಿಂದಲೇ ನಿರಂತರ ಅತ್ಯಾಚಾರ, ಬ್ಲ್ಯಾಕ್​ಮೇಲ್: ನೊಂದ ಯುವತಿಯಿಂದ ಯಶವಂತಪುರ ಠಾಣೆಗೆ ದೂರು
ಮಾಡೆಲ್ ಯುವತಿ
sandhya thejappa
sandhya thejappa|

Updated on: Apr 10, 2021 | 6:15 PM

Share

ಬೆಂಗಳೂರು: ಮತ್ತುಬರಿಸುವ ಜ್ಯೂಸ್ ಕುಡಿಸಿ ಮಾಡೆಲ್ ಮೇಲೆ ಪ್ರಿಯತಮನೇ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆಯ ಖಾಸಗಿ ವಿಡಿಯೋಗಳನ್ನ ವೈರಲ್ ಮಾಡುತ್ತೀನಿ ಅಂತ ಬೆದರಿಸಿ 18 ಬಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿ ಖಾಸಗಿ ಫೋಟೋ, ವಿಡಿಯೋಗಳನ್ನ ತಂದೆ-ತಾಯಿಗೆ ತೋರಿಸ್ತೀನಿ ಎಂದು ಆರೋಪಿ ಬೆದರಿಕೆ ಹಾಕುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಆರೋಪಿ ಪ್ರಮೋದ್ ಎಂಬಾತ ಖಾಸಗಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೀನಿ ಅಂತಾ ಬೆದರಿಕೆ ಹಾಕಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಯಶವಂತಪುರ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಪ್ರಮೋದ್ ಕಳೆದ ವರ್ಷ ಯುವತಿಯ ಹಿಂದೆ ಬಿದ್ದು, ಪ್ರೀತಿಸುತ್ತಿದ್ದ. ಫೇಸ್​ಬುಕ್ ಮೂಲಕ ಮಾಡೆಲ್ ಯುವತಿಯನ್ನು ಸಂಪರ್ಕಿಸಿ ಮೊಬೈಲ್ ನಂಬರ್ ಪಡೆದಿದ್ದನಂತೆ. ಮಾತಾಡಬೇಕು ಬಾ ಅಂತಾ ಯಶವಂತಪುರ ಬಳಿಯ ಲಾಡ್ಜ್​ಗೆ ಕರೆಸಿ ಯುವತಿಗೆ ಮತ್ತುಬರುವ ಜ್ಯೂಸ್ ನೀಡಿದ್ದಾನೆ. ನಂತರ ಯುವತಿ ಜೊತೆಗಿನ ಖಾಸಗಿ ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಅಲ್ಲದೇ ಸಂತ್ರಸ್ತ ಮಾಡೆಲ್ ಯುವತಿಯನ್ನು ಬ್ಲ್ಯಾಕ್​ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಕರೆದಾಗಲೆಲ್ಲ ಬರಬೇಕು, ಇಲ್ಲದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತ ಮಾಡೆಲ್ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಪ್ರಮೋದ್ ಮತ್ತು ಮಾಡೆಲ್ ಯುವತಿ

ಮಹಿಳೆ ಮೇಲೆ ಮಾನಸಿಕ ಅಸ್ವಸ್ಥ ಅತ್ಯಾಚಾರ? ಹಾವೇರಿ: ಜಾನುವಾರು ಮಾರ್ಕೆಟ್ ಬಳಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಮಾನಸಿಕ ಅಸ್ವಸ್ಥನನ್ನ ಕಟ್ಟಿಹಾಕಿ ಸ್ಥಳೀಯ ಥಳಿಸಿದ್ದಾರೆ. ಮಾರ್ಕೆಟ್ ಪಕ್ಕದ ಹೊಟೇಲ್​ಗೆ ಬಂದಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ.‌ ಸ್ಥಳಕ್ಕೆ 112 ವಾಹನದ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾನಸಿಕ ಅಸ್ವಸ್ಥನನ್ನು ಕಟ್ಟಿ ಹಾಕಿರುವ ಸ್ಥಳೀಯರು

ಇದನ್ನೂ ಓದಿ

ಉತ್ತರ ಪ್ರದೇಶ ಪಂಚಾಯತ್​ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಅತ್ಯಾಚಾರ ಆರೋಪಿ ಕುಲದೀಪ್​ ಸಿಂಗ್​ ಪತ್ನಿ

‘ಕೊರೊನಾ’ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ: ಕರ್ನಾಟಕ ಕಾಂಗ್ರೆಸ್​ ಟ್ವೀಟಾಸ್ತ್ರ!

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್