ಉತ್ತರ ಪ್ರದೇಶ ಪಂಚಾಯತ್ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಪತ್ನಿ
ಕುಲ್ದೀಪ್ ಸಿಂಗ್ ಬಿಜೆಪಿ ಎಂಎಲ್ಎ ಆಗಿದ್ದವರು. 2017ರಲ್ಲಿ ನಡೆದ ರೇಪ್ ಕೇಸ್ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಕುಲ್ದೀಪ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಬಂದ ಬೆನ್ನಲ್ಲೇ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಲಖನೌ: ಉನ್ನಾವೋ ಅತ್ಯಾಚಾರ ಆರೋಪಿ, ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಪತ್ನಿ ಸಂಗೀತಾ ರಾಜಕೀಯಕ್ಕೆ ಇಳಿದಿದ್ದಾರೆ. ಉತ್ತರಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಸಂಗೀತಾ ಸದ್ಯ ಉನ್ನಾವೋ ಜಿಲ್ಲಾ ಪಂಚಾಯತ್ ಅಧ್ಯಕ್ಷೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಫತೇಪುರ್ ಚೌರಸಿ ತ್ರಿತಯಾ ಸೀಟ್ನಿಂದ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶ ಪಂಚಾಯತ್ ಚುನಾವಣೆ ಏಪ್ರಿಲ್ 15ರಿಂದ ನಡೆಯಲಿದ್ದು, ಫಲಿತಾಂಶ ಮೇ 2ಕ್ಕೆ ಪ್ರಕಟವಾಗಲಿದೆ. ಒಟ್ಟು ಐದು ಜಿಲ್ಲೆಗಳ ಗ್ರಾಮಪಂಚಾಯಿತಿ ಚುನಾವಣಾ ಅಭ್ಯರ್ಥಿಗಳನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಕುಲದೀಪ್ ಸಿಂಗ್ ಪತ್ನಿ ಸಂಗೀತಾ ಹೆಸರೂ ಇದೆ. ಇವರು 2016ರಿಂದಲೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ. ಆಗೆಲ್ಲ ಈ ಪಂಚಾಯತ್ ಚುನಾವಣೆಗಳು ಯಾವುದೇ ಪಕ್ಷದ ಗುರುತಿನಡಿ ನಡೆಯುತ್ತಿರಲಿಲ್ಲ. ಆದರೆ ಈಗ ಪಂಚಾಯಿತಿ ಚುನಾವಣೆಗಳೂ ಸಹ ರಾಜಕೀಯ ಪಕ್ಷದ ಸಿಂಬಲ್ನಡಿಯಲ್ಲೇ ನಡೆಯುತ್ತವೆ. ಹಾಗೇ ಬಿಜೆಪಿ ಕೂಡ ತಾನು ಬೆಂಬಲಿಸುವ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.
ಕುಲ್ದೀಪ್ ಸಿಂಗ್ ಬಿಜೆಪಿ ಎಂಎಲ್ಎ ಆಗಿದ್ದವರು. 2017ರಲ್ಲಿ ನಡೆದ ರೇಪ್ ಕೇಸ್ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಕುಲ್ದೀಪ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಬಂದ ಬೆನ್ನಲ್ಲೇ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಉತ್ತರ ಪ್ರದೇಶ ವಿಧಾನಸಭೆಯಿಂದಲೂ ಅನರ್ಹಗೊಂಡಿದ್ದಾರೆ. ಹಾಗೇ ಅವರಿಗೆ 10 ಲಕ್ಷ ರೂ. ದಂಡ ಮತ್ತು 10 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಲ್ಲಿ ಮೋಸ ಮಾಡಿದ್ದಾರೆ.. ರೈತರನ್ನೇ ಬ್ಲಾಕ್ ಮೇಲ್ ಮಾಡೋ ವ್ಯಕ್ತಿ
ಉನ್ನಾವೋ ರೇಪ್ ಸಂತ್ರಸ್ತೆ ಕೊಲೆಗೆ ಯತ್ನ, ಸಂತ್ರಸ್ತೆ ಸ್ಥಿತಿ ಗಂಭೀರ, ದೆಹಲಿಗೆ ಏರ್ ಲಿಫ್ಟ್
(Unnao rape accused Kuldeep Sengars wife Got ticket from BJP to contest UP panchayat polls)
Published On - 10:02 am, Fri, 9 April 21