ಬೆಂಗಳೂರು: ನಗರದ ರಾಮಮೂರ್ತಿ ನಗರದಲ್ಲಿ ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್ ಆದ ನೈಜಿರಿಯನ್ ಪೆಡ್ಲರ್ಸ್ ಬಳಿ ಯಾವುದೇ ಪಾಸ್‌ಪೋರ್ಟ್ ಇರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಸಿಸಿಬಿ ಇಬ್ಬರು ನೈಜೀರಿಯನ್ ಸೇರಿದಂತೆ ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದು, ಬಂಧಿತರಿಂದ 75 ಲಕ್ಷ ಮೌಲ್ಯದ 1 ಕೆ.ಜಿ ಡ್ರಗ್ಸ್, ವಿವಿಧ ಮಾದರಿಯ ಎಂಡಿಎಂಎ ಮತ್ತು 1 ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಹೆಲ್ಸನ್ ಹೆನ್ರಿ, ಎನ್ಡಿಕಾಟ ಅಲ್ಬರ್ಟ್, ಶಕೀರ್, ಹಾಗೂ ಜುನೈದ್ರನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಬಂದಿಸಿದ್ದಾರೆ.
ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ MCA ವಿದ್ಯಾರ್ಥಿ ಸೇರಿ ಐವರ ಬಂಧನ
Published On - 4:11 pm, Sat, 30 January 21