ಬೆಂಗಳೂರಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಮನೆಗಳ್ಳ 5 ವರ್ಷದ ಬಳಿಕ ಸೆರೆ
ಈಜು ತರಬೇತುದಾರನಾಗಿದ್ದ ರೇಣುಕಾ ಪ್ರಸಾದ್(26) ಬಂಧಿತ ವ್ಯಕ್ತಿ. ತರಬೇತಿಗೆ ಬರುತಿದ್ದ ವಿದ್ಯಾರ್ಥಿಯ ಮನೆಯಲ್ಲಿ 2016ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ.

ರೇಣುಕಾ ಪ್ರಸಾದ್
ಬೆಂಗಳೂರು: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬೆಂಗಳೂರು ಪೊಲೀಸರು ಕೆ.ಪಿ.ಅಗ್ರಹಾರದಲ್ಲಿ ಬಂಧಿಸಿದ್ದಾರೆ.
ಈಜು ತರಬೇತುದಾರನಾಗಿದ್ದ ರೇಣುಕಾ ಪ್ರಸಾದ್(26) ಬಂಧಿತ ವ್ಯಕ್ತಿ. ತರಬೇತಿಗೆ ಬರುತಿದ್ದ ವಿದ್ಯಾರ್ಥಿಯ ಮನೆಯಲ್ಲಿ 2016ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಸದ್ಯ ಈ ಆರೋಪಿಯನ್ನು ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 20 ಲಕ್ಷ ಮೌಲ್ಯದ 506 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಐಷಾರಾಮಿ ಮನೆಗಳಲ್ಲಿಯೇ ಕಳ್ಳತನ.. ಆ್ಯಪಲ್ ತಿಂದು ಪೊಲೀಸರಿಗೆ ಸಿಕ್ಕಿಬಿದ್ದ ಬನಶಂಕರಿ ಮೂಲದ ಕಳ್ಳರು!
Published On - 4:22 pm, Sat, 30 January 21