ಖಾಸಗಿ ಶಾಲಾ ಶುಲ್ಕ ಶೇ. 30ರಷ್ಟು ಕಡಿತ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

2020-21 ನೇ ಸಾಲಿಗೆ ಅನ್ವಯ ಆಗುವಂತೆ ಆದೇಶ ಹೊರಡಿಸಲಾಗಿದ್ದು, ಬೋಧನಾ ಶುಲ್ಕದಲ್ಲಿ 70% ಶುಲ್ಕ ಮಾತ್ರ ಈ ವರ್ಷ ಶಾಲೆಗಳು ಪಡೆಯಬೇಕು.

ಖಾಸಗಿ ಶಾಲಾ ಶುಲ್ಕ ಶೇ. 30ರಷ್ಟು ಕಡಿತ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
ಸಚಿವ ಎಸ್​. ಸುರೇಶ್​ ಕುಮಾರ್​
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 30, 2021 | 5:01 PM

ಬೆಂಗಳೂರು: ರಾಜ್ಯ ಸರ್ಕಾರದಿಂದ 30% ಶಾಲಾ ಶುಲ್ಕ ಕಡಿತ ವಿಚಾರಕ್ಕೆ ಸಂಬಂಧಿಸದಂತೆ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟವಾಗಿದೆ.

2020-21 ನೇ ಸಾಲಿಗೆ ಅನ್ವಯ ಆಗುವಂತೆ ಆದೇಶ ಹೊರಡಿಸಲಾಗಿದ್ದು, ಬೋಧನಾ ಶುಲ್ಕದಲ್ಲಿ 70 % ಶುಲ್ಕ ಮಾತ್ರ ಈ ವರ್ಷ ಶಾಲೆಗಳು ಪಡೆಯಬೇಕು. ಬೋಧನಾ ಶುಲ್ಕ ಬಿಟ್ಟು ಉಳಿದ ಶುಲ್ಕ ಪಡೆಯುವ ಹಾಗಿಲ್ಲ. ರಾಜ್ಯದಲ್ಲಿ ಎಲ್ಲಾ ಪಠ್ಯಕ್ರಮಗಳ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ.

ಈಗಾಗಲೇ ಪೋಷಕರು ಪೂರ್ತಿ ಶುಲ್ಕ ಪಾವತಿ ಮಾಡಿದ್ರೆ, ಹೆಚ್ಚುವರಿ ಶುಲ್ಕ ವಾಪಸ್ ಕೊಡಬೇಕು ಅಥವಾ ಮುಂದಿನ ವರ್ಷಕ್ಕೆ ಅದನ್ನು ಸರಿದೂಗಿಸಿಕೊಳ್ಳಬೇಕು‌ ಎಂದು ರಾಜ್ಯ ಸರ್ಕಾರ ಶಾಲೆಗಳಿಗೆ ಷರತ್ತು ಹಾಕಿದೆ. 2020-21 ನೇ ಸಾಲಿಗೆ ಮತ್ತಷ್ಟು ಶುಲ್ಕ ಕಡಿಮೆ ಮಾಡಲು ಶಾಲೆಗಳು ಒಪ್ಪಿದರೆ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪೋಷಕರಿಗೆ ಶುಲ್ಕ ಪಾವತಿ ಮಾಡಲು ಎರಡು ಕಂತು ನೀಡಬೇಕು ಎಂದು ರಾಜ್ಯ ಸರ್ಕಾರದಿಂದ ಷರತ್ತು ವಿಧಿಸಿ ಆದೇಶ ಹೊರಡಿಸಲಾಗಿದೆ.

ಶಾಲಾ ಫೀಸ್ ಕಡಿತ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಸಿದ್ಧತೆ