ಗುದ್ದಲಿ ಪೂಜೆಯಲ್ಲಿ MLA ಶರತ್ ಬಚ್ಚೇಗೌಡ ಕಡೆಗಣನೆ ಆರೋಪ: ಧರಣಿ ನಡೆಸಿದ MLA ಮನವೊಲಿಸಲು SP ರವಿ ಚನ್ನಣ್ಣನವರ್ ಹರಸಾಹಸ
ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸಿ MLA ನೇತೃತ್ವದಲ್ಲಿ ಅವರ ಬೆಂಬಲಿಗರು ಇಂದು ಪ್ರತಿಭಟನಾ ಱಲಿ ನಡೆಸಿದರು. ಶಾಸಕರ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ಱಲಿ ನಡೆಸಿದರು.
ಹೊಸಕೋಟೆ: ಸ್ಥಳೀಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ MLA ನೇತೃತ್ವದಲ್ಲಿ ಅವರ ಬೆಂಬಲಿಗರು ಇಂದು ಪ್ರತಿಭಟನಾ ಱಲಿ ನಡೆಸಿದರು. ಶಾಸಕರ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ಱಲಿ ನಡೆಸಿದರು.
ಜೊತೆಗೆ, ಶಾಸಕ ಮತ್ತು ಅವರ ಬೆಂಬಲಿಗರು ಕೋಲಾರ-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಧರಣಿ ನಡೆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸವಾರರು ತೀವ್ರ ಪರದಾಟ ಎದುರಿಸಬೇಕಾಯ್ತು.
ಹಾಗಾಗಿ, ಶರತ್ ಬಚ್ಚೇಗೌಡ ಹಾಗೂ ಅವರ ಬೆಂಬಲಿಗರ ಮನವೊಲಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಈ ವೇಳೆ, ಲಾಠಿ ಚಾರ್ಜ್ ಮಾಡಿದ DySP ಉಮಾಶಂಕರ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಶರತ್ ಬೆಂಬಲಿಗರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದೇಕೆ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಗೌತಂ ಕಾಲೋನಿಯಲ್ಲಿ ಕಾಮಗಾರಿಯೊಂದರ ಗುದ್ದಲಿ ಪೂಜೆಯಲ್ಲಿ ಶಾಸಕ ಶರತ್ ಬಚ್ಚೇಗೌಡರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ MLA ಬೆಂಬಲಿಗರು ಧರಣಿ ನಡೆಸಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಧರಣಿ ನಡೆಸಿದರು. ಆದ್ದರಿಂದ, ಧರಣಿನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.
ಶರತ್ ಮನವೊಲಿಸಲು SP ರವಿ ಡಿ.ಚನ್ನಣ್ಣನವರ್ ಹರಸಾಹಸ ಇದನ್ನು ಖಂಡಿಸಿ, ಹೊಸಕೋಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಶಾಸಕ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ನಡುವೆ, SP ರವಿ ಡಿ.ಚನ್ನಣ್ಣನವರ್ ಸ್ಥಳಕ್ಕೆ ಬಂದು ಶಾಸಕ ಶರತ್ ಬಚ್ಚೇಗೌಡ ಜೊತೆ ಚರ್ಚೆಗೆ ಮುಂದಾದರು. ಶರತ್ ಬಚ್ಚೇಗೌಡ ಮನವೊಲಿಸಲು SP ಹರಸಾಹಸ ಪಡೆಬೇಕಾಯ್ತು.
ಅಂತೂ ಕೊನೆಗೆ ಶಾಸಕರ ಜೊತೆ SP ರವಿ ಡಿ. ಚನ್ನಣ್ಣನವರ್ ನಡೆಸಿದ ಸಂಧಾನ ಸಫಲವಾಯಿತು. ಹೀಗಾಗಿ, ಶರತ್ ಬಚ್ಚೇಗೌಡ ತಾತ್ಕಾಲಿಕವಾಗಿ ತಮ್ಮ ಪ್ರತಿಭಟನೆ ವಾಪಸ್ ಪಡೆದರು. DySP ಉಮಾಶಂಕರ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದರು.
DySP ಉಮಾಶಂಕರ್ ವಿರುದ್ಧ ಶಾಸಕ ಶರತ್ ಮತ್ತು ಬೆಂಬಲಿಗರು ದೂರು ನೀಡಿ ತೆರಳಿದರು. ಜೊತೆಗೆ ಈ ಕುರಿತು, IG ಸೇರಿದಂತೆ ಸ್ವೀಕರ್ಗೆ ದೂರು ನೀಡಲು ಶಾಸಕ ನಿರ್ಧಾರ ಸಹ ಕೈಗೊಂಡರು. ಈ ಮಧ್ಯೆ, DySP ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಮುಂದೆ 20 ಸಾವಿರ ಜನರನ್ನ ಸೇರಿಸಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ಸಹ ನೀಡಿದರು.
‘ಜನರಿಂದ ಆಯ್ಕೆಯಾದವರಿಗೆ ಕೊಡುವ ಗೌರವ ಇದೇನಾ?’ ಜನರಿಂದ ಆಯ್ಕೆಯಾದವರಿಗೆ ಕೊಡುವ ಗೌರವ ಇದೇನಾ? ಸಚಿವರನ್ನು ಮೆಚ್ಚಿಸಲು ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಗುದ್ದಲಿ ಪೂಜೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಚರ್ಚೆ ನಡೆಸಿದ್ದೇನೆ. ಕಾರ್ಯಕ್ರಮಕ್ಕೆ ಬರುವಂತೆ ನಿನ್ನೆ ರಾತ್ರಿ ಆಹ್ವಾನ ನೀಡಿದ್ದರು. ನಾನೇನು ಮದುವೆ ಅಥವಾ ಗೃಹಪ್ರವೇಶಕ್ಕೆ ಹೋಗುತ್ತಿರಲಿಲ್ಲ. ಕಾರ್ಯಕ್ರಮದ ಬಗ್ಗೆ ಮೊದಲೇ ತಿಳಿಸಿ ಸಲಹೆ ಪಡೆಯಬೇಕಿತ್ತು. ಆದ್ರೆ ಸಚಿವರನ್ನು ಮೆಚ್ಚಿಸಲು ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಅಧಿವೇಶನದಲ್ಲಿ ದೂರು ನೀಡುವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ನೀಡುವ ಗೌರವ ಇದೇನಾ? ನಾನು ಯಾರೊಬ್ರ ಅನುಮತಿ ಪಡೆದು ತಾಲೂಕಿಗೆ ಬರಬೇಕಿಲ್ಲ. ಹೊಸಕೋಟೆ ಕ್ಷೇತ್ರದ ಜನತೆ ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ವೈಯಕ್ತಿವಾಗಿ ಅವಮಾನವಾದರೆ ಸರಿಪಡಿಸುವುದು ಗೊತ್ತು. ಆದ್ರೆ ಶಾಸಕನ ಹುದ್ದೆಗೆ ಅವಮಾನವಾದಾಗ ಹೋರಾಡಬೇಕು ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಾಲ್ವರು ಡ್ರಗ್ಸ್ ಪೆಡ್ಲರ್ಗಳ ಬಂಧನ: 1 ಕೆ.ಜಿ ಡ್ರಗ್ಸ್, ಎಂಡಿಎಂಎ ವಶ
Published On - 5:12 pm, Sat, 30 January 21