ಬಾಗಲಗುಂಟೆ ಠಾಣೆ ಪೊಲೀಸರ ಕಾರ್ಯಾಚರಣೆ ಯಶಸ್ವಿ; ಇಬ್ಬರು ದರೋಡೆಕೋರರ ಬಂಧನ

ತ್ಯಾಮಗೊಂಡ್ಲು ಮತ್ತು ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ದರೋಡೆಯ ಕುರಿತು ಪ್ರಕರಣ ದಾಖಲಾಗಿತ್ತು. ಇನ್ನು ವಕೀಲ ಮಹಾಂತೇಶ್ ಪೋನ್​ಗೆ ಮತ್ತೊಮ್ಮೆ ಕರೆ ಮಾಡಿ ಹಣಕ್ಕೆ ಕೂಡ ಬೇಡಿಕೆ ನೀಡಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

ಬಾಗಲಗುಂಟೆ ಠಾಣೆ ಪೊಲೀಸರ ಕಾರ್ಯಾಚರಣೆ ಯಶಸ್ವಿ; ಇಬ್ಬರು ದರೋಡೆಕೋರರ ಬಂಧನ
ತಿಪ್ಪೇಸ್ವಾಮಿ ಅಲಿಯಾಸ್ ಸ್ವಾಮಿ ಹಾಗೂ ಶೆಟ್ಟಿಹಳ್ಳಿಯ ಭರತ್​
Updated By: ಆಯೇಷಾ ಬಾನು

Updated on: Mar 14, 2021 | 12:04 PM

ಬೆಂಗಳೂರು: ಕುಖ್ಯಾತ ಇಬ್ಬರು ದರೋಡೆಕೋರರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನೆಲಮಂಗಲದಲ್ಲಿ 2 ಕಡೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದರು. ಒಂದು ಕಡೆ ಲಾರಿ ಚಾಲಕನ ಕುತ್ತಿಗೆಗೆ ಇರಿದು 10,000 ರೂಪಾಯಿ ದೋಚಿದ್ದರು, ಮತ್ತೊಂದೆಡೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ನಿಂತಿದ್ದಾಗ ವಕೀಲ ಮಹಾಂತೇಶ್ ಎಂಬುವ‌ರಿಂದ 5,000 ದರೋಡೆ ಮಾಡಿದ್ದರು.

ತ್ಯಾಮಗೊಂಡ್ಲು ಮತ್ತು ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ದರೋಡೆಯ ಕುರಿತು ಪ್ರಕರಣ ದಾಖಲಾಗಿತ್ತು. ಇನ್ನು ವಕೀಲ ಮಹಾಂತೇಶ್ ಫೋನ್​ಗೆ ಮತ್ತೊಮ್ಮೆ ಕರೆ ಮಾಡಿ ಹಣಕ್ಕೆ ಕೂಡ ಬೇಡಿಕೆ ನೀಡಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು. ಸದ್ಯ ಬಾಗಲಗುಂಟೆ ಠಾಣೆ ಪೋಲಿಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

50,000 ರೂಪಾಯಿ ನಗದು, ಮೊಬೈಲ್, ಮಾರಕಾಸ್ತ್ರಗಳನ್ನು ಬಂಧಿತ ಆರೋಪಿಗಳಾದ ಜಪ್ತಿಮಲ್ಲಸಂದ್ರದ ತಿಪ್ಪೇಸ್ವಾಮಿ ಅಲಿಯಾಸ್ ಸ್ವಾಮಿ ಹಾಗೂ ಶೆಟ್ಟಿಹಳ್ಳಿಯ ಭರತ್​ರಿಂದ ವಶಕ್ಕೆ ಪಡೆದಿದ್ದಾರೆ.

 

ಇದನ್ನೂ ಓದಿ: ಮಾಲೂರಿನಲ್ಲಿ ಅರ್ಚಕರ ಮನೆಗೆ ನುಗ್ಗಿ.. ಮಚ್ಚು ತೋರಿಸಿ ದರೋಡೆ

ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ: ಚಿತ್ರದುರ್ಗದಲ್ಲಿ ಮಂಗಳಮುಖಿಯರ ರೌಡಿಸಂನಿಂದ ಆಸ್ಪತ್ರೆ ಸೇರಿದ ಇಬ್ಬರು ಯುವಕರು