ಮಾಲೂರಿನಲ್ಲಿ ಅರ್ಚಕರ ಮನೆಗೆ ನುಗ್ಗಿ.. ಮಚ್ಚು ತೋರಿಸಿ ದರೋಡೆ

ಒಂಟಿ ಮನೆಯಲ್ಲಿದ್ದವರಿಗೆ ಮಚ್ಚು ತೋರಿಸಿ ಖದೀಮರು ದರೋಡೆ ಮಾಡಿರುವ ಪ್ರಕರಣ ಜಿಲ್ಲೆಯ ಮಾಲೂರು ತಾಲೂಕಿನ ತೀರ್ಥಬಂಡಟ್ಟಿಯಲ್ಲಿ ವರದಿಯಾಗಿದೆ. ತೀರ್ಥಬಂಡಟ್ಟಿ ಗ್ರಾಮದ ಅರ್ಚಕನ ಮನೆಯಲ್ಲಿ ದರೋಡೆ ನಡೆದಿದೆ.

ಮಾಲೂರಿನಲ್ಲಿ ಅರ್ಚಕರ ಮನೆಗೆ ನುಗ್ಗಿ.. ಮಚ್ಚು ತೋರಿಸಿ ದರೋಡೆ
ಅರ್ಚಕ ಸುಬ್ಬಣ್ಣರ ಮನೆ
Follow us
KUSHAL V
|

Updated on: Mar 09, 2021 | 6:05 PM

ಕೋಲಾರ: ಒಂಟಿ ಮನೆಯಲ್ಲಿದ್ದವರಿಗೆ ಮಚ್ಚು ತೋರಿಸಿ ಖದೀಮರು ದರೋಡೆ ಮಾಡಿರುವ ಪ್ರಕರಣ ಜಿಲ್ಲೆಯ ಮಾಲೂರು ತಾಲೂಕಿನ ತೀರ್ಥಬಂಡಟ್ಟಿಯಲ್ಲಿ ವರದಿಯಾಗಿದೆ. ತೀರ್ಥಬಂಡಟ್ಟಿ ಗ್ರಾಮದ ಅರ್ಚಕನ ಮನೆಯಲ್ಲಿ ದರೋಡೆ ನಡೆದಿದೆ. ಅರ್ಚಕ ಸುಬ್ಬಣ್ಣರ ಮನೆಗೆ ನುಗ್ಗಿದ್ದ ಮೂವರಿಂದ ದುಷ್ಕೃತ್ಯ ಎಸಗಲಾಗಿದೆ. ಸುಬ್ಬಣ್ಣನ ಮನೆಯಲ್ಲಿ ದರೋಡೆಕೋರರು 10 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

CISF ಅಧಿಕಾರಿ ಎಂದು ನಂಬಿಸಿ 52 ಸಾವಿರ ರೂಪಾಯಿ ವಂಚನೆ ಇತ್ತ, CISF ಅಧಿಕಾರಿ ಎಂದು ನಂಬಿಸಿ 52 ಸಾವಿರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಕಾರು ಮಾರುವ​​ ಕುರಿತು ಫೇಸ್​ಬುಕ್​ನಲ್ಲಿ ಜಾಹೀರಾತು ಹಾಕಿದ್ದ ವಂಚಕ ಚಂದ್ರಶೇಖರ್ ತಾನು CISF ಅಧಿಕಾರಿ ಎಂದು ​ಉಲ್ಲೇಖಿಸಿದ್ದರಂತೆ. ಜಾಹೀರಾತು ನೋಡಿ ಭಾಗೀರಥ್ ದಾಸ್​​ ಎಂಬುವವರು ವಾಹನ ಖರೀದಿಸಲು ಮುಂದಾದಾಗ ವಂಚನೆ ನಡೆದಿದೆ. ಭಾಗೀರಥ್ ದಾಸ್​​ಗೆ ನಕಲಿ ಅಧಿಕಾರಿ ಕಾರು ಮಾರುವ ಸೋಗಿನಲ್ಲಿ 52,000 ರೂ. ವಂಚನೆ ಮಾಡಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

NLM ONLINE VANCHANE 1

CISF ಅಧಿಕಾರಿ ಎಂದು ನಂಬಿಸಿ 52 ಸಾವಿರ ರೂಪಾಯಿ ವಂಚನೆ

NLM ONLINE VANCHANE 2

ನಕಲಿ CISF ಅಧಿಕಾರಿ ಚಂದ್ರಶೇಖರ್​

ಶಾರ್ಟ್​​ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ 2 ಮನೆಗಳು ಅತ್ತ, ಶಾರ್ಟ್​​ ಸರ್ಕ್ಯೂಟ್‌ನಿಂದಾಗಿ 2 ಮನೆಗಳು ಹೊತ್ತಿ ಉರಿದ ಘಟನೆ ಬೆಳಗಾವಿಯ ಫುಲ್‌ಬಾಗ್ ಗಲ್ಲಿಯಲ್ಲಿ ನಡೆದಿದೆ. ಅದೃಷ್ಟವಶಾತ್​, ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ‌ ನಂದಿಸಿದರು.

ಭಾಗೀರಥಿ ಪಾಟೀಲ್ ಎಂಬುವವರ ನಿವಾಸ ಸೇರಿ 2 ಮನೆ ಬೆಂಕಿಗಾಹುತಿಯಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜನರು ಒತ್ತಾಯಿಸಿದ್ದಾರೆ.

BGM HOUSE FIRE 1

ಶಾರ್ಟ್​​ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ 2 ಮನೆಗಳು

BGM HOUSE FIRE 2

ಮನೆ ಕಳೆದುಕೊಂಡ ಭಾಗೀರಥಿ ಪಾಟೀಲ್ ಗೋಳಾಟ

ಇದನ್ನೂ ಓದಿ: ನಮ್ಮೂರಿನ ರಾಮನ ಗುಡಿಗೆ ಹಣ ಕೊಟ್ಟಿದ್ದೇನೆ; ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ -ಸ್ಪೀಕರ್​ ದೇಣಿಗೆ ಪ್ರಶ್ನೆಗೆ ಸಿದ್ದು ಜಬರ್​ದಸ್ತ್​ ಕೌಂಟರ್