ಬೈಕ್ ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ: ಚಿತ್ರದುರ್ಗದಲ್ಲಿ ಮಂಗಳಮುಖಿಯರ ರೌಡಿಸಂನಿಂದ ಆಸ್ಪತ್ರೆ ಸೇರಿದ ಇಬ್ಬರು ಯುವಕರು

ಕಾತ್ರಾಳ್ ಕೆರೆಯ ಬಳಿ ಎದುರಾದ ಮಂಗಳಮುಖಿಯರ ಗುಂಪು ಬೈಕ್​ಗೆ ಸೈಡ್ ನೀಡಿದಂತೆ ನಟಿಸಿ ದಿಢೀರ್ ಅಡ್ಡ ಬಂದಿದೆ. ಬಳಿಕ ಬೈಕಿನಲ್ಲಿದ್ದ ಇಬ್ಬರನ್ನು ಕೆಳಗೆ ಬೀಳಿಸಿ ಚಪ್ಪಲಿ, ಕಲ್ಲು ಸೇರಿದಂತೆ ಕೈಗೆ ಸಿಕ್ಕದ್ದನ್ನು ತೆಗೆದುಕೊಂಡು ಭೀಕರವಾಗಿ ಹಲ್ಲೆ ನಡೆಸಿದೆ.

ಬೈಕ್ ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ: ಚಿತ್ರದುರ್ಗದಲ್ಲಿ ಮಂಗಳಮುಖಿಯರ ರೌಡಿಸಂನಿಂದ ಆಸ್ಪತ್ರೆ ಸೇರಿದ ಇಬ್ಬರು ಯುವಕರು
ಯುವಕರಿಗೆ ತಳಿಸುತ್ತಿರುವ ಮಂಗಳಮುಖಿಯರು
Follow us
ಪೃಥ್ವಿಶಂಕರ
|

Updated on: Mar 06, 2021 | 7:57 AM

ಚಿತ್ರದುರ್ಗ: ಅವರು ಅಂಚೆ ಇಲಾಖೆ ನೌಕರರು‌. ಗೆಳೆಯರ ಮನೆಯಲ್ಲಿ ಊಟ ಮುಗಿಸಿ ಮನೆ ಕಡೆ ಹೊರಟಿದ್ದರು. ಹೆದ್ದಾರಿ ಮಧ್ಯೆ ಟರ್ನ್ ಆಗುವಾಗ ಮಂಗಳಮುಖಿಯರ ಗುಂಪು‌ ಎದುರಾಗಿತ್ತು.ಆ ಬಳಿಕ ಮನೆಗೆ ಹೊರಟವ್ರು ಸೇರಿದ್ದು ಜಿಲ್ಲಾಸ್ಪತ್ರೆಗೆ. ಯೆಸ್.. ಚಿತ್ರದುರ್ಗದ ಅಂಚೆ ಇಲಾಖೆ ನೌಕರರಾದ ಅನಿಲ್ ಮತ್ತು ಶಂಭುಲಿಂಗಪ್ಪ. ಗುರುವಾರ ಸಂಜೆ ವೇಳೆಗೆ ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ಗೆಳೆಯನ ಮನೆಗೆ ಊಟಕ್ಕೆ ಹೋಗಿ ವಾಪಸ್ ಆಗ್ತಿದ್ರು.

ಈ ವೇಳೆ ಕಾತ್ರಾಳ್ ಕೆರೆಯ ಬಳಿ ಎದುರಾದ ಮಂಗಳಮುಖಿಯರ ಗುಂಪು ಬೈಕ್​ಗೆ ಸೈಡ್ ನೀಡಿದಂತೆ ನಟಿಸಿ ದಿಢೀರ್ ಅಡ್ಡ ಬಂದಿದೆ. ಬಳಿಕ ಬೈಕಿನಲ್ಲಿದ್ದ ಇಬ್ಬರನ್ನು ಕೆಳಗೆ ಬೀಳಿಸಿ ಚಪ್ಪಲಿ, ಕಲ್ಲು ಸೇರಿದಂತೆ ಕೈಗೆ ಸಿಕ್ಕದ್ದನ್ನು ತೆಗೆದುಕೊಂಡು ಭೀಕರವಾಗಿ ಹಲ್ಲೆ ನಡೆಸಿದೆ. ಕೊರಳಲ್ಲಿದ್ದ ಚೈನು, ಉಂಗುರು, ಹಣ ಕಸಿದುಕೊಂಡಿದೆ. ಅಷ್ಟರಲ್ಲೇ ಸಮೀಪದ ಡಾಬಾದಲ್ಲಿದ್ದ ಹುಡುಗರು ಸ್ಥಳಕ್ಕೆ ಬರ್ತ್ತಿದ್ದಂತೆ ಆಟೋ ಹತ್ತಿ ಮಂಗಳಮುಖಿಯರ ಗ್ಯಾಂಗ್ ಎಸ್ಕೇಪ್ ಆಗಿದೆಯಂತೆ.

ಗಾಯಾಳುಗಳಿಬ್ಬರೂ ಒಳ್ಳೆಯ ನಡತೆಯುಳ್ಳವರು.. ಮಾರಣಾಂತಿಕ‌ವಾಗಿ ಹಲ್ಲೆಗೊಳಗಾಗಿರುವ ಅಂಚೆ ಇಲಾಖೆ ನೌಕರರು ಇಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೀತ್ತಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಗಾಯಾಳುಗಳಿಬ್ಬರೂ ಒಳ್ಳೆಯ ನಡತೆಯುಳ್ಳವರು ಅನ್ನೋದು ಸ್ಥಳೀಯರ ಅಭಿಪ್ರಾಯ. ಆದ್ರೆ ಇಂಥವರ ಮೇಲೆ ಮಂಗಳಮುಖಿಯರು ವಿನಾಕಾರಣ ಹಲ್ಲೆ ಮಾಡಿದ್ದಲ್ದೆ, ಬೆಲೆಬಾಳುವ ವಸ್ತುಗಳನ್ನ ಕದ್ದೊಯ್ದ ಆರೋಪವೂ ಕೇಳಿಬಂದಿದೆ. ಹೀಗೆ ಕೆಲವು ಮಂಗಳಮುಖಿಯರ ಕಾಟದಿಂದಾಗಿ ಹೈವೇಗಳಲ್ಲಿ ಭಯದಲ್ಲೇ ಓಡಾಡುವಂತಾಗಿದೆ ಅನ್ನೋದು ಸ್ಥಳೀಯರ ಆರೋಪ.

ಒಟ್ಟಾರೆ ಕೋಟೆನಾಡು‌ ಚಿತ್ರದುರ್ಗ ನಗರದ ಹೈವೇಗಳಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ. ದುಡ್ಡಿಗೆ ಪೀಡಿಸುತ್ತಿದ್ದವರು ಈಗ ರೌಡಿಸಂಗೆ ಇಳಿದಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಪೊಲೀಸರು ಈಗಲಾದ್ರು ಎಚ್ಚೆತ್ತುಕೊಂಡು, ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಹೈವೇಗಳಲ್ಲಿ ಓಡಾಡುವ ಸವಾರರಿಗೆ ರಕ್ಷಣೆ ಒದಗಿಸಬೇಕಿದೆ.

ಇದನ್ನೂ ಓದಿ:ಪರಂಗಿ ಹಣ್ಣು ತುಂಬಿಕೊಂಡು.. ಮಂಗಳಮುಖಿಯರ ಬಳಿ‌ ಹೋದ ಬೊಲೇರೋ ಚಾಲಕ ನಿಗೂಢ ಸಾವು!