ಲಾಕ್ಡೌನ್ ನಡುವೆ ಬೆಂಗಳೂರಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ, ಪಶ್ಚಿಮ ವಿಭಾಗದಲ್ಲಿ 18 ಕಡೆ ಪೊಲೀಸರಿಂದ ತಪಾಸಣೆ

| Updated By: ಆಯೇಷಾ ಬಾನು

Updated on: Jun 06, 2021 | 1:38 PM

ನಗರದಲ್ಲಿ ಸರಗಳ್ಳತನ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಪಶ್ಚಿಮ ವಿಭಾಗದಲ್ಲಿ 18 ಕಡೆ ಪೊಲೀಸರಿಂದ ತಪಾಸಣೆ ನಡೆಯುತ್ತಿದೆ. ಮೆಜೆಸ್ಟಿಕ್, ಕಾಟನ್‌ಪೇಟೆ, ಉಪ್ಪಾರಪೇಟೆ, ಮೈಸೂರು ರಸ್ತೆ, ನಾಗರಬಾವಿ, ಕೆಂಗೇರಿ ಸುತ್ತಮುತ್ತ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ.

ಲಾಕ್ಡೌನ್ ನಡುವೆ ಬೆಂಗಳೂರಿನಲ್ಲಿ ಹೆಚ್ಚಾದ ಕಳ್ಳರ ಹಾವಳಿ, ಪಶ್ಚಿಮ ವಿಭಾಗದಲ್ಲಿ 18 ಕಡೆ ಪೊಲೀಸರಿಂದ ತಪಾಸಣೆ
ಮೀನಿನ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವ ಯುವಕರು
Follow us on

ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಅತಿಯಾಗುತ್ತಿದೆ. ಕೆ.ಎಸ್.ಲೇಔಟ್‌ನ 18ನೇ ಅಡ್ಡರಸ್ತೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಸರೋಜಿನಿ ರಾಯನ್(86) ಎಂಬ ವೃದ್ಧೆಯ ಸರಗಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನು ಮತ್ತೊಂದೆಡೆ ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದಲ್ಲಿರುವ ಮೀನಿನ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಯುವಕರಿಬ್ಬರು ಮೀನಿನ ಅಂಗಡಿ ಶೆಟರ್ ಮುರಿದು ಕ್ಯಾಶ್ ಬಾಕ್ಸ್ ಕಳ್ಳತನ ಮಾಡಿದ್ದಾರೆ. ಕದಿಯುವ ದೃಶ್ಯಗಳು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಗರದಲ್ಲಿ ಸರಗಳ್ಳತನ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಪಶ್ಚಿಮ ವಿಭಾಗದಲ್ಲಿ 18 ಕಡೆ ಪೊಲೀಸರಿಂದ ತಪಾಸಣೆ ನಡೆಯುತ್ತಿದೆ. ಮೆಜೆಸ್ಟಿಕ್, ಕಾಟನ್‌ಪೇಟೆ, ಉಪ್ಪಾರಪೇಟೆ, ಮೈಸೂರು ರಸ್ತೆ, ನಾಗರಬಾವಿ, ಕೆಂಗೇರಿ ಸುತ್ತಮುತ್ತ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ.

ಬೆಳಿಗ್ಗೆ 5 ಗಂಟೆಯಿಂದ ಸ್ಪೆಷಲ್ ಡ್ರೈವ್ ಚುರುಕುಗೊಂಡಿದೆ. ಇಂದು ಭಾನುವಾರ ಹಿನ್ನೆಲೆ ಬೇಕಾಬಿಟ್ಟಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ವಾಹನಗಳನ್ನು ಚೆಕ್ ಮಾಡಿ ಕಳಿಸಲಾಗುತ್ತಿದೆ. ಹಾಗೂ ಅನಾವಶ್ಯಕವಾಗಿ ಓಡಾಡ್ತಿದ್ದ ಹಲವು ವಾಹನಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು