ಕಾಳಸಂತೆಯಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಪ್ರಕರಣ; ಮಾತೃ ಆಸ್ಪತ್ರೆಗೆ ನೋಟಿಸ್

ಪ್ರಾಥಮಿಕ ತನಿಖೆ ವೇಳೆ ಅಸ್ಪತ್ರೆಗೆ ಬಂದ ರೆಮಿಡಿಸಿವಿರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರೊದು ಬೆಳಕಿಗೆ ಬಂದಿತ್ತು. ಆರೋಪಿಗಳು ಒಟ್ಟು ಹದಿನೈದು ನಕಲಿ ರೆಮಿಡಿಸಿವಿರ್ ತಯಾರಿಸಿದ್ದರು. ಹದಿನೈದರ ಪೈಕಿ ಹನ್ನೆರಡು ರೆಮಿಡಿಸಿವಿರ್ ಪೊಲೀಸರಿಂದ ವಶಕ್ಕೆ ಪಡೆಯಲಾಗಿದೆ.

ಕಾಳಸಂತೆಯಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಪ್ರಕರಣ; ಮಾತೃ ಆಸ್ಪತ್ರೆಗೆ ನೋಟಿಸ್
ರೆಮ್​ಡಿಸಿವಿರ್ (ಸಂಗ್ರಹ ಚಿತ್ರ)
Follow us
ಆಯೇಷಾ ಬಾನು
|

Updated on: May 17, 2021 | 1:16 PM

ಬೆಂಗಳೂರು: ಕಾಳಸಂತೆಯಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಸಂಜಯ್ ನಗರ ಪೊಲೀಸರು ಮಾತೃ ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. ಮಾತೃ ಆಸ್ಪತ್ರೆ ವೈದ್ಯ ಸಾಗರ್ ಮತ್ತು ತಂಡವನ್ನು ಬಂಧಿಸಲಾಗಿದೆ.

ಇದುವರೆಗೆ ಆಸ್ಪತ್ರೆಗೆ ಎಷ್ಟು ರೆಮ್ಡಿಸಿವಿರ್ ಬಂದಿದೆ. ಆ ಪೈಕಿ ಎಷ್ಟು ರೆಮ್ಡಿಸಿವಿರ್ ರೋಗಿಗಳಿಗೆ ನೀಡಲಾಗಿದೆ. ಹೊರಗಿನಿಂದ ಎಷ್ಟು ರೆಮ್ಡಿಸಿವಿರ್ ತಂದು ನೀಡಿದ್ದಾರೆ. ರೋಗಿಯ ಕಡೆಯವರು ಎಷ್ಟು ನೀಡಿದ್ದಾರೆ ಎಂಬ ಸಂಪೂರ್ಣ ದಾಖಲಾತಿ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರಾಥಮಿಕ ತನಿಖೆ ವೇಳೆ ಅಸ್ಪತ್ರೆಗೆ ಬಂದ ರೆಮಿಡಿಸಿವಿರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರೊದು ಬೆಳಕಿಗೆ ಬಂದಿತ್ತು. ಆರೋಪಿಗಳು ಒಟ್ಟು ಹದಿನೈದು ನಕಲಿ ರೆಮಿಡಿಸಿವಿರ್ ತಯಾರಿಸಿದ್ದರು. ಹದಿನೈದರ ಪೈಕಿ ಹನ್ನೆರಡು ರೆಮಿಡಿಸಿವಿರ್ ಪೊಲೀಸರಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೂರು ನಕಲಿ ರೆಮಿಡಿಸಿವಿರ್ ಮಾರಾಟ ಮಾಡಿದ್ದಾರೆ. ನಕಲಿ ರೆಮಿಡಿಸಿವಿರ್ ಪಡೆದಿರುವವರ ಸಂಪರ್ಕಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನು ಆರೋಪಿಗಳು ವಿಜಯನಗರದ ನಿವಾಸಿಯೊಬ್ಬರಿಗೆ ರೆಮಿಡಿಸಿವಿರ್ ಮಾರಾಟ ಮಾಡಿದ್ದರು. ಆದರೆ ಈಗ ವಿಜಯನಗರದ ನಿವಾಸಿ ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು ಇನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾಲು ಮುರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಕೀಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಕೊರೋನಾ ತಗುಲಿ ವಿಧಿವಶ