ಸೋಂಕಿತನ ಶವ ನೀಡುವುದಕ್ಕೆ 6 ಲಕ್ಷ ಡಿಮ್ಯಾಂಡ್: ಇಲ್ಲದಿದ್ರೆ ಯಾರಿಗೆ ಬೇಕಾದ್ರೂ ಹೇಳಿಕೊಳ್ಳಿ, ಮೃತದೇಹ ನೀಡಲ್ಲ ಅಂತಿದ್ದಾರೆ
ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಗುಣಗಳಿಗೆ ಬೆಲೆ ಇಲ್ಲವಾಗಿದೆ. ಇದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಸಂಬಂಧಿಕರ ಆರೋಪ. ಬೆಂಗಳೂರಿನ ಯಲಹಂಕದಲ್ಲಿರುವ ಅಶ್ವಿನಿ ಆಸ್ಪತ್ರೆಯವರು ಕೊವಿಡ್ ಸೋಂಕಿತನ ಶವ ನೀಡುವುದಕ್ಕೆ 6 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಅಡುತ್ತಿದ್ದಾರೆ ಎಂದು ಅಶ್ವಿನಿ ಆಸ್ಪತ್ರೆ ವಿರುದ್ಧ ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದೀಗ ಮತ್ತೆ 6 ಲಕ್ಷ ರೂ ಕಟ್ಟುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಏನು ಮಾಡಬೇಕೆಂದು ತಿಳಿಯದೆ ಸಂಬಂಧಿಕರು ಕಂಗಾಲಾಗಿದ್ದಾರೆ. […]
ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಗುಣಗಳಿಗೆ ಬೆಲೆ ಇಲ್ಲವಾಗಿದೆ. ಇದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಸಂಬಂಧಿಕರ ಆರೋಪ. ಬೆಂಗಳೂರಿನ ಯಲಹಂಕದಲ್ಲಿರುವ ಅಶ್ವಿನಿ ಆಸ್ಪತ್ರೆಯವರು ಕೊವಿಡ್ ಸೋಂಕಿತನ ಶವ ನೀಡುವುದಕ್ಕೆ 6 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಅಡುತ್ತಿದ್ದಾರೆ ಎಂದು ಅಶ್ವಿನಿ ಆಸ್ಪತ್ರೆ ವಿರುದ್ಧ ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ.
ಈಗಾಗಲೇ ಚಿಕಿತ್ಸೆಗಾಗಿ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದೀಗ ಮತ್ತೆ 6 ಲಕ್ಷ ರೂ ಕಟ್ಟುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಏನು ಮಾಡಬೇಕೆಂದು ತಿಳಿಯದೆ ಸಂಬಂಧಿಕರು ಕಂಗಾಲಾಗಿದ್ದಾರೆ. 6 ಲಕ್ಷ ರೂ ಬಿಲ್ ಕಟ್ಟಿದರೆ ಮಾತ್ರ ಮೃತದೇಹ ನೀಡ್ತೇವೆ. ಇಲ್ಲದಿದ್ರೆ ಯಾರಿಗೆ ಹೇಳಿದರೂ ಮೃತದೇಹ ನೀಡಲ್ಲ ಎಂದು ಆಶ್ವಿನಿ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಏನಾಗಿತ್ತು? 37 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಯಲಹಂಕದ ಅಶ್ವಿನಿ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದರು. ಸುಮಾರು 15 ದಿನಗಳ ಹಿಂದೆ ಅವರನ್ನು ಅಡ್ಮಿಟ್ ಮಾಡಲಾಗಿತ್ತು. ಪೇಶೆಂಟ್ ಅಡ್ಮಿಟ್ ಆದ ಬಳಿಕ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಟೆಸ್ಟ್ ನಲ್ಲಿ ನಿಮೋನಿಯಾ ದೃಢವಾಗಿ ಪಾಸಿಟಿವ್ ಬಂದಿದೆ. ಪೇಶೆಂಟ್ ನ್ನು ಹಾಸ್ಪಿಟಲ್ ನಲ್ಲಿ ಕೊರೊನಾ ಪೇಶೆಂಟ್ ಗಳ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆಯ ತನಕ ಪೇಶೆಂಟ್ ಚೆನ್ನಾಗಿದ್ದರು. ಸಂಬಂಧಿಕರ ಜೊತೆ ಮಾತನಾಡಿದ್ದಾರೆ. ಆದರೆ ನಿನ್ನೆ ತಡ ರಾತ್ರಿ ಪೇಶೆಂಟ್ ಹಾಸ್ಪಿಟಲ್ ನಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ಸೋಂಕಿತನ ಶವವನ್ನು ಕೊಡಲು ಹಾಸ್ಪಿಟಲ್ ನಿಂದ ಆರು ಲಕ್ಷ ರೂ ಬೇಡಿಕೆ ಬಂದಿದೆ. ಇದರಿಂದ ಸಂಭಂದಿಕರು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಅಶ್ವಿನಿ ಹಾಸ್ಪಿಟಲ್ ಮುಂದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಹಾಸ್ಪಿಟಲ್ ನ ಸಿಬ್ಬಂದಿ ಮಾತ್ರ ಆರು ಲಕ್ಷ ಬಿಲ್ ಕೊಟ್ಟರೆ ಮೃತದೇಹ ನೀಡ್ತೀವಿ. ಇಲ್ಲಾಂದ್ರೆ ಯಾರಿಗೆ ಬೇಕಾದರೂ ಹೇಳಿಕೊಳ್ಲಿ ಎಂದು ಉಡಾಫೆ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
(yelahanka ashwini hospital allegedly demanded 6 lakh rupees to hand over covid patient body)
ಆಂಬುಲೆನ್ಸ್ ಬದಲು ಬೇರೆ ವಾಹನದಲ್ಲಿ ಶವ ಸಾಗಣೆಗೆ ಅವಕಾಶ; ಶವಸಂಸ್ಕಾರಕ್ಕೆ ಕಂಟ್ರೋಲ್ ರೂಂ ಓಪನ್: ಸಚಿವ ಅಶೋಕ್
Published On - 1:42 pm, Mon, 17 May 21