ಆಂಬುಲೆನ್ಸ್ ಬದಲು ಬೇರೆ ವಾಹನದಲ್ಲಿ ಶವ ಸಾಗಣೆಗೆ ಅವಕಾಶ; ಶವಸಂಸ್ಕಾರಕ್ಕೆ ಕಂಟ್ರೋಲ್ ರೂಂ ಓಪನ್: ಸಚಿವ ಅಶೋಕ್
ಕೋವಿಡ್ ನಿಂದ ಮೃತ ಪಟ್ಟವರ ಸಂಬಂಧಿಕರ ಬಳಿ ಯಾವುದೇ ಸುಲಿಗೆ ಮಾಡಬಾರದು. ಎಲ್ಲವೂ ಫ್ರೀಯಾಗಿ ನೆರವೇರಬೇಕು. ಯಾವುದಕ್ಕೂ ಹಣ ಕೊಡುವ ಹಾಗಿಲ್ಲ. ಕೊನೆಗೆ ಬೂದಿ (ಅಸ್ಥಿ) ತೆಗೆದುಕೊಳ್ಳುವ ಮಡಿಕೆ ಕೂಡ ಫ್ರೀ ಇರುತ್ತೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು: ಕೋವಿಡ್ ಸೊಂಕಿನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಶವಸಂಸ್ಕಾರ ಆಗಬೇಕು ಎಂದು ರಾಜ್ಯ ಸರ್ಕಾರ ಬೆಂಗಳೂರಿಗೆ ಅನ್ವಯವಾಗುವಂತೆ ಕಂಟ್ರೋಲ್ ರೂಂ ಸ್ಥಾಪಿಸಿದೆ. 19 ಮಂದಿ, ಮೂರು ಶಿಫ್ಟ್ ನಲ್ಲಿ ಇಲ್ಲಿ ಕೆಲಸ ಮಾಡುತ್ತಾರೆ. 84959 98495 ಇದು ಕಾಲ್ ಸೆಂಟರ್ ನಂಬರ್. ಗಿಡ್ಡೇನಹಳ್ಳಿಯಲ್ಲಿ ಪ್ರಾರಂಭ ಆಗಿದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಆಂಬುಲೆನ್ಸ್ ಬದಲು ಬೇರೆ ವಾಹನದಲ್ಲಿ ಶವ ಸಾಗಣೆಗೆ ಅವಕಾಶ: ಇದು ಬೆಂಗಳೂರಿಗೆ ಮಾತ್ರ ಸಂಬಂಧಿಸಿದ್ದು. ಶವ ಸಾಗಣೆಗೆ ನಾವೇ ಟೈಂ ಫಿಕ್ಸ್ ಮಾಡುತ್ತೇವೆ. ಸಂಬಂಧಿಕರು ಎಷ್ಟು ಗಂಟೆಗೆ ಹೋಗಬೇಕು ಎಂದು ನಾವೇ ಹೇಳುತ್ತೇವೆ ಎಂದು ತಿಳಿಸಿರುವ ಸಚಿವ ಅಶೋಕ್, ಶವ ಸಂಸ್ಕಾರಕ್ಕೆ ಆಂಬುಲೆನ್ಸ್ ಬದಲು ಬೇರೆ ವಾಹನದಲ್ಲಿ ಶವವನ್ನು ತೆಗೆದುಕೊಂಡು ಹೋಗಬಹುದು. ಕೋವಿಡ್ ನಿಂದ ಮೃತ ಪಟ್ಟವರ ಸಂಬಂಧಿಕರ ಬಳಿ ಯಾವುದೇ ಸುಲಿಗೆ ಮಾಡಬಾರದು. ಎಲ್ಲವೂ ಫ್ರೀಯಾಗಿ ನೆರವೇರಬೇಕು. ಯಾವುದಕ್ಕೂ ಹಣ ಕೊಡುವ ಹಾಗಿಲ್ಲ. ಕೊನೆಗೆ ಬೂದಿ (ಅಸ್ಥಿ) ತೆಗೆದುಕೊಳ್ಳುವ ಮಡಿಕೆ ಕೂಡ ಫ್ರೀ ಇರುತ್ತೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
(covid Dead person bodies can be transported in other vehicles also not necessarily ambulance inform minister ashok)
Published On - 3:50 pm, Wed, 12 May 21