ಮೆಡಿಕಲ್​ಗೆ ಬಂದಿದ್ದೆ ಎಂದು ಸುಳ್ಳು ಹೇಳಿದ್ದ ವ್ಯಕ್ತಿ; ಕಣ್ಣೀರು ಹಾಕಿದರು ಬೈಕ್ ನೀಡದ ವಿಜಯಪುರ ಪೊಲೀಸರು

|

Updated on: May 12, 2021 | 12:23 PM

ನಾನು ಮೆಡಿಕಲ್​ಗೆ ಬಂದಿದ್ದೆ ಎಂದು ಹೇಳಿದ್ದ ವ್ಯಕ್ತಿ ಬಳಿ ಮೆಡಿಕಲ್ ಚೀಟಿ ತೋರಿಸು ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಜೊತೆಗೆ ಫೈನ್ ಕಟ್ಟಿ ಬಂದಿದ್ದೇನೆ ಎಂದು ಸುಳ್ಳು ಹೇಳಿದ್ದ ವ್ಯಕ್ತಿಗೆ ರಶೀದಿ ತೋರಿಸು ಎಂದು ಕೇಳಿದ್ದಾರೆ. ಆಗ ಬೈಕ್ ಸವಾರನ ಹತ್ತಿರ ರಶೀದಿ ಕೂಡ ಇರಲಿಲ್ಲ.

ಮೆಡಿಕಲ್​ಗೆ ಬಂದಿದ್ದೆ ಎಂದು ಸುಳ್ಳು ಹೇಳಿದ್ದ ವ್ಯಕ್ತಿ; ಕಣ್ಣೀರು ಹಾಕಿದರು ಬೈಕ್ ನೀಡದ ವಿಜಯಪುರ ಪೊಲೀಸರು
ವಾಹನ ತಪಾಸಣೆ ಮಾಡುತ್ತಿರುವ ಪೊಲೀಸರು
Follow us on

ವಿಜಯಪುರ: ಕೊರೊನಾ ಸೋಂಕು ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕಠಿಣ ನಿಯಮಗಳನ್ನು ಸರ್ಕಾರ ರಾಜ್ಯಾದ್ಯಂತ ಜಾರಿಗೊಳಿಸಿದೆ. ಆದರೂ ಜನ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೇಕಾಬಿಟ್ಟಿಯಾಗಿ ಓಡಾಡುವ ವಾಹನ ಸವಾರರಿಗೆ ವಿಜಯಪುರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೈಕ್​ನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ತಡೆದು ಪ್ರಶ್ನಿಸಿದಾಗ ಮೆಡಿಕಲ್ ಬಂದಿರುವುದಾಗಿ ಸುಳ್ಳು ಹೇಳಿದ್ದರು. ಹೀಗಾಗಿ ಪೊಲೀಸರು ಬೈಕ್ ಸವಾರನ ಬೈಕ್​ನ ಸೀಜ್ ಮಾಡಿದ್ದಾರೆ. ಕೈ ಮುಗಿದು ಕಣ್ಣೀರು ಹಾಕಿದ್ದರು ಪೊಲೀಸರು ಬೈಕ್ ಬಿಡಲಿಲ್ಲ.

ನಾನು ಮೆಡಿಕಲ್​ಗೆ ಬಂದಿದ್ದೆ ಎಂದು ಹೇಳಿದ್ದ ವ್ಯಕ್ತಿ ಬಳಿ ಮೆಡಿಕಲ್ ಚೀಟಿ ತೋರಿಸು ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಜೊತೆಗೆ ಫೈನ್ ಕಟ್ಟಿ ಬಂದಿದ್ದೇನೆ ಎಂದು ಸುಳ್ಳು ಹೇಳಿದ್ದ ವ್ಯಕ್ತಿಗೆ ರಶೀದಿ ತೋರಿಸು ಎಂದು ಕೇಳಿದ್ದಾರೆ. ಆಗ ಬೈಕ್ ಸವಾರನ ಹತ್ತಿರ ರಶೀದಿ ಕೂಡ ಇರಲಿಲ್ಲ. ಹೀಗಾಗಿ ಬೈಕ್ ಸವಾರ ಸುಳ್ಳು ಹೇಳುತ್ತಿದ್ದಾನೆ ಎಂದು ತಿಳಿದು ಸಂಚಾರಿ ಪೊಲೀಸರು ಬೈಕ್​ನ ಸೀಜ್ ಮಾಡಿದ್ದಾರೆ.

ಬೆಳ್ಳಂ ಬೆಳಿಗ್ಗೆ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದರು. ನಗರದ ಗಾಂಧಿ ವೃತ್ತ, ಕೋರ್ಟ್ ಸರ್ಕಲ್, ಬಸವೇಶ್ವರ ವೃತ್ತ, ಕೇಂದ್ರಿಯ ಬಸ್ ನಿಲ್ದಾಣ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಯೊಂದು ವಾಹನ ತಪಾಸಣೆ ಮಾಡಿ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಹತ್ತಕ್ಕೂ ಹೆಚ್ಚು ಬೈಕ್ ವಶ
ದಾವಣಗೆರೆ: ಅನಗತ್ಯವಾಗಿ ರಸ್ತೆಗೆ ಇಳಿದ 10ಕ್ಕೂ ಹೆಚ್ಚು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಸುಕಾ ಸುಮ್ಮನೆ ರೋಡಿಗೆ ಇಳಿದವರು ಫಜೀತಿ ಅನುಭವಿಸಿದ್ದಾರೆ. ಈ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ.

ಇದನ್ನೂ ಓದಿ

ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‌ಗಾಗಿ ಪಿಪಿಇ ಕಿಟ್‌ ಧರಿಸಿ ಬಂದ ಬೆಡಗಿ.!

ರಾಜ್ಯಕ್ಕೆ ಲಸಿಕೆ ಪೂರೈಕೆ ಆಗಿಲ್ಲ; ಯಾವುದಾದರೂ ಕಂಪೆನಿ ಉತ್ಪಾದಿಸಲು ಮುಂದೆ ಬಂದರೆ ಸಹಕರಿಸುತ್ತೇವೆ: ರವಿಕುಮಾರ್

(Police seized bike of those who lied that they had come to Medical at Vijayapura)