ಮಾಂಸಾಹಾರದ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತ್ನಾಡಿದ ಮುತಾಲಿಕ್

| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2022 | 5:55 PM

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿರುವ ಮಾಂಸಾಹಾರದ ಕುರಿತಾದ ಹೇಳಿಕೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯಿಸಿದ್ದಾರೆ.

ಮಾಂಸಾಹಾರದ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತ್ನಾಡಿದ ಮುತಾಲಿಕ್
Pramod Muthalik And Mohan Bhagwat
Follow us on

ಉಡುಪಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಮಾಂಸಾಹಾರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ. ಪರೋಕ್ಷವಾಗಿ ಮಾಂಸಹಾರವನ್ನು ತಿನ್ನಬೇಡಿ ಎಂದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೊಧದ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಈ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯಿಸಿದ್ದು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ನಿನ್ನೆ(ಸೆ.30) ಅಷ್ಟೇ ನಾಗ್ಪುರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾಷಣ ಮಾಡಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವಾತ್, ನಾವು ತಿನ್ನುವ ಆಹಾರ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ, ನಾವು ಆಹಾರ ಕ್ರಮದಲ್ಲಿ ತಪ್ಪಿದರೆ, ಜೀವನದಲ್ಲೂ ತಪ್ಪು ಹಾದಿಯಲ್ಲೇ ಸಾಗುತ್ತೀರಿ. ಅತಿ ಹೆಚ್ಚಾಗಿ ಮಾಂಸಾಹಾರವನ್ನೇ ಒಳಗೊಂಡಿರುವ ತಾಮಸ ಆಹಾರಗಳನ್ನು ಆದಷ್ಟು ಕಡಿಮೆ ತಿನ್ನಬೇಕು. ತ್ಯಜಿಸದರೂ ತೊಂದರೆ ಇಲ್ಲ ಎಂದು ಪರೋಕ್ಷವಾಗಿ ಮಾಂಸಾಹಾರದ ಬಗ್ಗೆ ಟೀಕಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು,

ಇದನ್ನೂ ಓದಿ: Mohan Bhagwat: ನಾನ್ ವೆಜ್ ಒಂದು ತಪ್ಪು ಆಹಾರ, ಮಾಂಸ ತಿನ್ನುವವರಿಗೆ ಮೋಹನ್ ಭಾಗವತ್ ಹೇಳಿದ್ದೇನು?

ಈ ಬಗ್ಗೆ ಉಡುಪಿಯ ಕುಂದಾಪುರದಲ್ಲಿ ಇಂದು (ಅಕ್ಟೋಬರ್.01) ಮಾತನಾಡಿರುವ ಪ್ರಮೋದ್ ಮುತಾಲಿಕ್(Pramod Muthalik), ಆಧ್ಯಾತ್ಮ ಮತ್ತು ಸಾತ್ವಿಕತೆಯ ದೃಷ್ಟಿಯಿಂದ ಈ ರೀತಿ ಹೇಳಿರಬಹುದು. ಆ ದೃಷ್ಟಿಯಿಂದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಒಪ್ಪಿಕೊಳ್ಳಬಹುದು. ಆದ್ರೆ, ನಮ್ಮ ದೇಶದಲ್ಲಿ ಹಿಂದೂಗಳು ಮೆಜಾರಿಟಿ ಮಾಂಸಾಹಾರಿಗಳಿದ್ದಾರೆ. ಹೀಗಾಗಿ ಆಹಾರದ ದೃಷ್ಟಿಯಿಂದ ಅವರ ಹೇಳಿಕೆ ಸರಿಯಲ್ಲ. ಮೋಹನ್ ಭಾಗವತ್ ಅವರ​​ ಆ ಹೇಳಿಕೆ ಒಪ್ಪಲಾರದು ಎಂದು ಸ್ಪಷ್ಟಪಡಿಸಿದರು.

ದೇಗುಲದಲ್ಲಿ ವಸ್ತ್ರ ಸಂಹಿತೆ ಬಗ್ಗೆ ಮುತಾಲಿಕ್ ಮಾತು

ಇನ್ನು ಇದೇ ವೇಳೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ (Dress Code) ಬಗ್ಗೆ ಪ್ರತಿಕ್ರಿಯಿಸಿ, ಪವಿತ್ರ ಸ್ಥಳಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ಧಾರ್ಮಿಕ ವಿಧಿ ವಿಧಾನಗಳಂತೆ ಇರುವ ನೀತಿ ನಿಯಮವನ್ನು ಪಾಲಿಸಬೇಕು . ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಪಾಲನೆ ಮಾಡುವುದು ನನ್ನ ದೃಷ್ಟಿಯಲ್ಲಿ ಸರಿ ಇದೆ, ನಿಯಮ, ನೀತಿ, ಭಕ್ತಿ ಭಾವನೆ ಗಳನ್ನು ಬೆಳೆಸುವ ಮತ್ತು ಸಂಸ್ಕಾರ ಮುಖ್ಯ, ದೇವಾಲಯಗಳಿಗೆ ಹೋಗಲು ಅದರದೇ ಆದ ನಿಯಮಗಳಿವೆ, ಪವಿತ್ರ ಕ್ಷೇತ್ರದ ನಿಯಮ ಪಾಲಿಸಿಯೇ ದರ್ಶನ ಮಾಡಬೇಕು ಎಂದು ಹೇಳಿದರು.

ಅಯ್ಯಪ್ಪನ ದೇವಸ್ಥಾನಕ್ಕೆ ಹೋಗಬೇಕಾದರೆ ಬರಿಗಾಲಿನಲ್ಲಿ ಕಾಡಿನಲ್ಲಿ 40 ಕಿ.ಮಿ ನಡೆದು ಹೋಗುತ್ತಾರೆ, ದೇವಸ್ಥಾನಗಳಲ್ಲಿ ಏನು ನಿಯಮ ಇದೆ ಅದರ ಪಾಲನೆ ಆಗಬೇಕು. ಇದು ಸರಿಯಿದೆ ಎಂದು ಮುತಾಲಿಕ್‌ ಎಂದರು.

ಇನ್ನು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿಗೆ ನೌಕರಿ ವಿಚಾರದ ಬಗ್ಗೆ ಮಾತನಾಡಿರುವ ಮುತಾಲಿಕೆ, ನೌಕರಿ ನೀಡುವ ಹೇಳಿಕೆಯನ್ನು ಸಿಎಂ ಪೂರ್ಣಗೊಳಿಸಿದ್ದಾರೆ, ಗುತ್ತಿಗೆ ಆಧಾರದ ಮೇರೆಗೆ ಕೆಲಸ ನೀಡುವ ಹೇಳಿಕೆಯನ್ನ ದೃಢಪಡಿಸಿದ್ದಾರೆ, ಈ ಬಗ್ಗೆ ಪ್ರವೀಣ್ ನೆಟ್ಟಾರು ಧರ್ಮಪತ್ನಿಯವರಿಗೆ ಪತ್ರ ಮುಖೇನ ಮಾಹಿತಿಯನ್ನು ನೀಡಿದ್ದಾರೆ. ನಾನು ಸ್ವಾಗತಿಸುತ್ತೇನೆ, ಸರಕಾರಕ್ಕೆ ಅಭಿನಂದನೆಗಳನ್ನು ಹೇಳುತೇನೆ ಎಂದು ತಿಳಿಸಿದರು.

ನೆಟ್ಟಾರು ಅವರ ಧರ್ಮಪತ್ನಿಗೆ ಸಮೀಪದಲ್ಲಿಯೇ ಪುತ್ತೂರಿನಲ್ಲಿ ಕೆಲಸ ನೀಡಿದರೆ ಉತ್ತಮ. ಗುತ್ತಿಗೆ ಆಧಾರದ ಮೇಲೆ ಇದೆ. ಇಲ್ಲಿ ಉದ್ಯೋಗ ಭದ್ರತೆ ಇಲ್ಲ. ಅಸುರಕ್ಷತೆ ಅಭದ್ರತೆ ಕಾಡದ ಹಾಗೆ ಖಾಯಂ ನೌಕರಿ ನೀಡುವ ಕೆಲಸವಾಗಬೇಕಿದೆ. ಈ ವಿಚಾರವಾಗಿ ನಾನು ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಹಾಗೂ ಆಗ್ರಹಿಸುತ್ತೇನೆ ಎಂದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sat, 1 October 22