ಮೈಸೂರು, ಅಕ್ಟೋಬರ್ 13: ನಾಡಹಬ್ಬ ಮೈಸೂರು ದಸರಾಗೆ (Dasara) ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ 10 ದಿನಗಳಿಂದ ವರ್ಣರಂಜಿತವಾಗಿ ನಡೆದ ಮೈಸೂರು ದಸರಾ ಪಂಜಿನ ಕವಾಯತಿನ ಮೂಲಕ ಸಾಂಪ್ರದಾಯಿಕವಾಗಿ ಅಂತ್ಯವಾಗಿದೆ. ಆದರೆ ಈ ಮಧ್ಯೆ ಚಿನ್ನದ ಅಂಬಾರಿ ಕೊಡುವುದು ತಡವಾಯಿತು ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದು ಬೇಜವಾಬ್ದಾರಿ ಹೇಳಿಕೆ ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ಅಂಬಾರಿಯನ್ನು ಮಧ್ಯಾಹ್ನ 2 ಗಂಟೆಯ ನಂತರ 2 ನಿಮಿಷಕ್ಕೆ ಹಸ್ತಾಂತರಿಸಲಾಗಿದೆ. ಈ ವಿಷಯ ನಮಗೂ ಆತಂಕ ಉಂಟು ಮಾಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Mysuru Dasara: ಮೈಸೂರು ದಸರಾ ಜಂಬೂಸವಾರಿ: ಅದ್ಭುತ ಕ್ಷಣ ಕಣ್ತುಂಬಿಕೊಂಡ ಕೋಟ್ಯಂತರ ಜನರು
ಎಲ್ಲಾ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ನಾವು ಪ್ರಯತ್ನಿಸಿದರೂ ಮತ್ತು ಅಂಬಾರಿ ಸಿದ್ಧವಾಗಿದ್ದರೂ ಸಂಬಂಧಿಸಿದ ಸಿಬ್ಬಂದಿಗಳು ಸರಿಯಾಗಿ ಜನಸಂದಣಿ ನಿರ್ವಹಣೆ ಮಾಡದ ಮತ್ತು ಕೆಲವು ಸರ್ಕಾರಿ ಕಾರುಗಳನ್ನು ಮಾರ್ಗ ಮಧ್ಯೆದಲ್ಲಿ ನಿಲ್ಲಿಸಿದ್ದರಿಂದ ಅಂಬಾರಿ ಸ್ಥಳಾಂತರಿಸಲು ತೊಂದರೆ ಆಯಿತು.
ಅಂಬಾರಿ ಹಸ್ತಾಂತರದ ಸಮಯದ ಬಗ್ಗೆ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ನಾನು ಈ ಹೇಳಿಕೆಯನ್ನು ನೀಡಿದ್ದೇನೆ. ಸಂಬಂಧಪಟ್ಟ ಎಲ್ಲರಿಗೂ ಅನಗತ್ಯ ಆತಂಕವನ್ನು ತಪ್ಪಿಸುವ ಉದ್ದೇಶ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ. ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಮೈಸೂರು ಫಲಪುಷ್ಪ ಪ್ರದರ್ಶನದಲ್ಲಿ ಸಿಬ್ಬಂದಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ್ದು, ಈ ಕುರಿತು ಪ್ರಶ್ನೆ ಮಾಡಿದವರ ಮೇಲೆ ಹಲ್ಲೆಗೆ ಯತ್ನ ಆರೋಪ ಕೇಳಿಬಂದಿದೆ.ಇಂದು ಉಚಿತವಾಗಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶವಿದ್ದರೂ ಸಿಬ್ಬಂದಿ ಟಿಕೆಟ್ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Mysuru Dasara Mahotsav-2024: ಮೈಸೂರು ದಸರಾ….ಹಾಡು ಕೇಳುತ್ತಾ ಜಂಬೂ ಸವಾರಿ ನೋಡ್ತಿದ್ರೆ ನೋಸ್ಟಾಲ್ಜಿಕ್ ಅನುಭವ!
ಕಳೆದ 10 ದಿನಗಳಿಗೆ ಮಾತ್ರ ಟಿಕೆಟ್ ಪಡೆದು ವೀಕ್ಷಣೆಗೆ ಅವಕಾಶವಿತ್ತು. ಆದರೆ ಇಂದು ಉಚಿತ ಪ್ರವೇಶ ಇದ್ದರೂ ಅಕ್ರಮವಾಗಿ ಹಣ ವಸೂಲಿ ಮಾಡಿದ್ದಾರೆ. ಇಂದು ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗರಿಗೆ ಟಿಕೆಟ್ ನೀಡಿ ಅಕ್ರಮವಾಗಿ ಹಣ ವಸೂಲಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.