ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಅರಮನೆಗೆ ಸೇರಿದ್ದು -ವಿವಾದದ ಯಾತನೆ ಬಿಚ್ಚಿಟ್ಟ ರಾಜವಂಶಸ್ಥೆ ಪ್ರಮೋದಾದೇವಿ

|

Updated on: Jan 02, 2021 | 6:33 PM

ನಗರದ ಲಲಿತ್ ಮಹಲ್ ಹೋಟೆಲ್​ನಲ್ಲಿರುವ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಮಾತನಾಡಿದರು. ಹೆಲಿಪ್ಯಾಡ್​ ಜಾಗ ಬಿ ಖರಾಬ್ ಅಂತಾ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ ಎಂದು ಸ್ಪಷ್ಟನೆ ನೀಡಿದರು.

ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಅರಮನೆಗೆ ಸೇರಿದ್ದು -ವಿವಾದದ ಯಾತನೆ ಬಿಚ್ಚಿಟ್ಟ ರಾಜವಂಶಸ್ಥೆ ಪ್ರಮೋದಾದೇವಿ
ರಾಜವಂಶಸ್ಥೆ ಪ್ರಮೋದಾದೇವಿ (ಎಡ); ಲಲಿತ್ ಮಹಲ್ ಹೋಟೆಲ್ (ಬಲ)
Follow us on

ಮೈಸೂರು: ನಗರದ ಲಲಿತ್ ಮಹಲ್ ಹೋಟೆಲ್​ನಲ್ಲಿರುವ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಮಾತನಾಡಿದರು. ಹೆಲಿಪ್ಯಾಡ್​ ಜಾಗ ಬಿ ಖರಾಬ್ ಅಂತಾ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ ಎಂದು ಸ್ಪಷ್ಟನೆ ನೀಡಿದರು.

ಹರ್ಷಗುಪ್ತ ಡಿಸಿ ಆಗಿದ್ದಾಗ ಬಿ ಖರಾಬ್ ಅಂತಾ ಶುರುವಾಯ್ತು. ವಸ್ತ್ರದ್ ಬಂದ ವೇಳೆ ಅದು ಅರಮನೆಗೆ ಸೇರಿದ್ದೆಂದು ತೀರ್ಪು ನೀಡಿದ್ದರು. ಆದರೆ, ಬಳಿಕ ಡಿಸಿ ಶಿಖಾ ಬಂದ ವೇಳೆ ಸರ್ಕಾರಿ ಭೂಮಿ ಅಂತಾ ತೀರ್ಪು ಕೊಟ್ಟಿದರು.

ಹಾಗಾಗಿ, ಈ ತೀರ್ಪು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಇದೀಗ ಜೂ.19ರಂದು ಹೈಕೋರ್ಟ್ ಅರಮನೆಗೆ ಸೇರಿದ್ದೆಂದು ತೀರ್ಪು ನೀಡಿದೆ. ಅರಮನೆ ವಂಶಸ್ಥರಿಗೆ ಸೇರಿದ ಭೂಮಿ ಎಂದು ತೀರ್ಪು ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರದ ಅರ್ಜಿ ಸಹ ವಜಾಗೊಂಡಿದೆ. ಸರ್ಕಾರದ ಅರ್ಜಿಯನ್ನು ಕೋರ್ಟ್​ ಕಳೆದ ಡಿಸೆಂಬರ್ 19ರಂದು ವಜಾ ಮಾಡಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು.

‘ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ, ಈಗಿನ ಸರ್ಕಾರ ತಟಸ್ಥ’
ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ, ಈಗಿನ ಸರ್ಕಾರ ತಟಸ್ಥ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದ್ದಾರೆ. ಕೆಲ ಸರ್ಕಾರಗಳು ನಮಗೆ ಜಾಸ್ತಿ ತೊಂದರೆಯನ್ನು ಕೊಟ್ಟಿವೆ. ಕೆಲ ಸರ್ಕಾರ ಕಡಿಮೆ ತೊಂದರೆ ಕೊಟ್ಟಿವೆ. ಆದರೆ, ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ದೂಷಿಸುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು.

ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ -ಹೈಕೋರ್ಟ್ ಮಹತ್ವದ ತೀರ್ಪು

Published On - 6:23 pm, Sat, 2 January 21