ಪ್ರಜ್ವಲ್ ರೇವಣ್ಣ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಲು ತಡವರಿಸಿದ ಪ್ರತಾಪ್ ಸಿಂಹ ವಿಷಯಾಂತರ ಮಾಡಲು ಪ್ರಯತ್ನಿಸಿದರು!

|

Updated on: Apr 29, 2024 | 2:39 PM

ಅಂಡರ್ ವರ್ಲ್ಡ್ ಡಾನ್ ಗಳಾದ ಚೋಟಾ ರಾಜನ್ ಮತ್ತು ಮತ್ತು ದಾವೂದ್ ಇಬ್ರಾಹಿಂರನ್ನು ಪ್ರಸ್ತಾಪ ಮಾಡಿದ ಸಿಂಹ ಯಾರೋ ಒಬ್ಬ ಹಿಂದೂ ಚೋಟಾ ರಾಜನ್ ನಮ್ಮ ಡಾನ್, ಹಿಂದೂಗಳ ಡಾನ್ ಅಂತ ಹೇಳಿದ್ದನ್ನು ಕೇಳಿದ್ದಿರಾ? ಅದರೆ ಮುಸಲ್ಮಾನರು ದಾವೂದ್ ಇಬ್ರಾಹಿಂ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಹಾವೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಗಳ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ದಳವನನ್ನು (SIT) ರಚಿಸಿದೆ, ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದು ಸಿಂಹ ಹೇಳಿದರು. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರೇ ಎಸ್ ಐಟಿ ರಚಿಸಿರುವದನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದ ಸಿಂಹಗೆ ಅದು ಸರಿ ಬಿಜೆಪಿಯ ನಿಲುವು ಹೇಳಿ ಅಂದಾಗ ಸಂಸದ ಗೊಂದಲಕ್ಕೆ ಬಿದ್ದರು. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಹಲವಾರು ಬಿಜೆಪಿ ನಾಯಕರು ಆಗ್ರಹಿಸಿದ್ದರು, ಈಗ್ಯಾಕೆ ಅಂಥ ಮಾತುಗಳು ಕೇಳಿಬರುತ್ತಿಲ್ಲ ಎಂದಾಗ ಸಿಂಹ, ಆ ಪ್ರಕರಣವೇ ಬೇರೆ ಇದೇ ಬೇರೆ, ನೇಹಾಳನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು, ಮತ್ತು ಆ ಕೊಲೆಯ ಹಿಂದಿನ ಉದ್ದೇಶಗಳು ಬೇರೆಯಾಗಿದ್ದವು ಎಂದರು. ಅಂಡರ್ ವರ್ಲ್ಡ್ ಡಾನ್ ಗಳಾದ ಚೋಟಾ ರಾಜನ್ ಮತ್ತು ಮತ್ತು ದಾವೂದ್ ಇಬ್ರಾಹಿಂರನ್ನು ಪ್ರಸ್ತಾಪ ಮಾಡಿದ ಸಿಂಹ ಯಾರೋ ಒಬ್ಬ ಹಿಂದೂ ಚೋಟಾ ರಾಜನ್ ನಮ್ಮ ಡಾನ್, ಹಿಂದೂಗಳ ಡಾನ್ ಅಂತ ಹೇಳಿದ್ದನ್ನು ಕೇಳಿದ್ದಿರಾ? ಅದರೆ ಮುಸಲ್ಮಾನರು ದಾವೂದ್ ಇಬ್ರಾಹಿಂ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡ್ತೀವಿ‌: ಗ್ಯಾರಂಟಿ ನೀಡಿದ ಪ್ರತಾಪ್ ಸಿಂಹ