ಪ್ರತಿ ಬಾರಿ ಮೈಸೂರಿನಲ್ಲಿ ಕದ್ದು ಮುಚ್ಚಿ ಪ್ರತಾಪ್ ಸಿಂಹಗೆ ಮತ ಹಾಕುತ್ತಿದ್ವಿ: ಒಪ್ಪಿಕೊಂಡ ಜೆಡಿಎಸ್ ನಾಯಕ

ಚಲುವರಾಯಸ್ವಾಮಿ ಬಿಜೆಪಿ-ಜೆಡಿಎಸ್‌ನ ನಿಜವಾದ ಫಲಾನುಭವಿ. ದೇವೇಗೌಡರ ಭಿಕ್ಷೆಯಿಂದ ಈಗ ನಾಯಕರಾಗಿ ದೇವೇಗೌಡರ ಬಗ್ಗೆ ಕೀಳಾಗಿ  ಮಾತಾಡುತ್ತಾ ಇದ್ದಾರೆ. ನಾವು ಚುಂಚನಗಿರಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಅದನ್ನೇ ದೊಡ್ಡಾದಾಗಿ ಚಲುವರಾಯಸ್ವಾಮಿ ಮಾತಾಡುತ್ತಾ ಇದ್ದಾರೆ ಎಂದು ಮಾಜಿ ಸಚಿವ ಪುಟ್ಟರಾಜು ಕಿಡಿಕಾರಿದರು.

ಪ್ರತಿ ಬಾರಿ ಮೈಸೂರಿನಲ್ಲಿ ಕದ್ದು ಮುಚ್ಚಿ ಪ್ರತಾಪ್ ಸಿಂಹಗೆ ಮತ ಹಾಕುತ್ತಿದ್ವಿ: ಒಪ್ಪಿಕೊಂಡ ಜೆಡಿಎಸ್ ನಾಯಕ
ಮಂಡ್ಯದ ಬಿಜೆಪಿ-ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಪುಟ್ಟರಾಜು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 3:12 PM

ಮಂಡ್ಯ, ಏ.12: ಲೋಕಸಭಾ ಚುನಾವಣೆ(Lok Sabha Election) ಸಮೀಪಿಸುತ್ತಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿವೆ. ಜೊತೆಗೆ ಹೇಗಾದರೂ ಗೆಲುವು ಸಾಧಿಸಬೇಕೆಂದು ತಂತ್ರಗಳನ್ನು ಹೆಣೆಯುತ್ತಿವೆ. ಈ ಮಧ್ಯೆ ಮಂಡ್ಯದ ಬಿಜೆಪಿ-ಜೆಡಿಎಸ್ (BJP-JDS) ಸಭೆಯಲ್ಲಿ ಮಾಜಿ ಸಚಿವ ಪುಟ್ಟರಾಜು ಮಾತನಾಡಿ, ‘ಪ್ರತಿ ಬಾರಿ ಮೈಸೂರಿನಲ್ಲಿ ಜೆಡಿಎಸ್‌ನವರು ಕದ್ದು ಮುಚ್ಚಿ ಪ್ರತಾಪ್ ಸಿಂಹಗೆ ಮತ ಹಾಕುತ್ತಿದ್ದೇವೆ. ಈಗ ಅಧಿಕೃತವಾಗಿ ಬಿಜೆಪಿ ಜೊತೆ ಮೈತ್ರಿಯಾಗಿದೆ. ಪ್ರತಾಪ್ ಸಿಂಹ ಅವರನ್ನು ಹೊತ್ತು ಮೆರಸಬೇಕು ಅಂದುಕೊಂಡಿದ್ದೇವೂ, ಆದ್ರೆ, ಪಕ್ಷದ ತೀರ್ಮಾನದಿಂದ ಮಹಾರಾಜರ ವಂಶಸ್ಥರು ನಿಂತಿದ್ದು ಸ್ವಾಗತ ಎಂದರು.

ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ

ಇದೇ ವೇಳೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಅವರು, ‘ಚಲುವರಾಯಸ್ವಾಮಿ ಬಿಜೆಪಿ-ಜೆಡಿಎಸ್‌ನ ನಿಜವಾದ ಫಲಾನುಭವಿ. ದೇವೇಗೌಡರ ಭಿಕ್ಷೆಯಿಂದ ಈಗ ನಾಯಕರಾಗಿ ದೇವೇಗೌಡರ ಬಗ್ಗೆ ಕೀಳಾಗಿ  ಮಾತಾಡುತ್ತಾ ಇದ್ದಾರೆ. ನಾವು ಚುಂಚನಗಿರಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಅದನ್ನೇ ದೊಡ್ಡಾದಾಗಿ ಚಲುವರಾಯಸ್ವಾಮಿ ಮಾತಾಡುತ್ತಾ ಇದ್ದಾರೆ. ಚುಂಚನಗಿರಿ ಮಠ ಹೊಡೆಯಬೇಕು ಎಂದು ಹೇಳಿದ್ದು ಯಾರು?, ಬಾ ನಾನು ಭೈರವನ ಮೇಲೆ ಪ್ರಮಾಣ ಮಾಡ್ತೀನಿ, ನೀನು ಮಾಡು ಬಾ ಎಂದು ಸವಾಲ್​ ಹಾಕಿದ್ದಾರೆ.

ಇದನ್ನೂ ಓದಿ:ಪ್ರತಿ ಚುನಾವಣೆಯಲ್ಲಿ ಧೋರಣೆ ಬದಲಿಸುವ ಕುಮಾರಸ್ವಾಮಿ ಯಾವ ಧರ್ಮಯುದ್ಧದ ಬಗ್ಗೆ ಮಾತಾಡುತ್ತಾರೆ? ಚಲುವರಾಯಸ್ವಾಮಿ

ನೀನು ಇದೇ ರೀತಿ ಪುಂಡಾಟಿಕೆ ಮಾತು ಆಡಿದ್ರೆ, ನಿನ್ನ ಮಂಡ್ಯ ಜಿಲ್ಲೆಯಲ್ಲಿ ಅಡ್ಡ ಹಾಕುತ್ತಾರೆ. ದೇವೇಗೌಡರ ಬಗ್ಗೆ ಮಾತಾಡುತ್ತೀಯಾ, ದೇವೇಗೌಡರನ್ನು ಕಾಲು ಹಿಡಿದುಕೊಂಡು ಕುಮಾರಣ್ಣನ ಸಿಎಂ ಮಾಡಿದ್ರಿ. ಬಳಿಕ ಕುಮಾರಣ್ಣ ಮುಳ್ಳಿನ ಹಾಸಿಗೆ ಮೇಲೆ‌ ಮಲಗಿದರು. ಉತ್ತರ ಕರ್ನಾಟಕದ ಎಂಎಲ್‌ಎ ಇದಕ್ಕೆ ಸೈನ್ ಹಾಕು ಅಂತಾನೆ, ನೀವು ಹೊಂದಾಣಿಕೆ ಬಗ್ಗೆ ಮತಾಡುತ್ತೀರಾ?, ನಿಜವಾದ ಮೈತ್ರಿ ಅಂದ್ರೆ ಬಿಜೆಪಿ-ಜೆಡಿಎಸ್​ನದ್ದು, ಕುಮಾರಣ್ಣ ದೇವೇಗೌಡರ ಕುಟುಂಬದ ಬಗ್ಗೆ ಮಾತಾಡಿದ್ರೆ ನಿನ್ನ ಬಂಡವಾಳ ಹೊರ ತೆಗೆಯುತ್ತೇನೆ. ಈಗ ಹಣ ಇರುವ ಸ್ಟಾರ್ ಚಂದ್ರು‌ನನ್ನು ತಂದಿದ್ದೀರಾ?, ಹಣದಿಂದ ಮಂಡ್ಯ ಜನರ ಜೇಬು ತುಂಬಿಸೋಕೆ‌ ಆಗಲ್ಲ. ಮೋದಿ‌ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಕೂಡ ತಪ್ಪಿಸೋಕೆ ಆಗಲ್ಲ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ