AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡ್ತೀವಿ‌: ಗ್ಯಾರಂಟಿ ನೀಡಿದ ಪ್ರತಾಪ್ ಸಿಂಹ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದಾರೆ. ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ‌ ನಿರ್ಧರಿಸುವ ಚುನಾವಣೆ ಇದು ಎಂದು ಹೇಳಿದ್ದಾರೆ.

ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡ್ತೀವಿ‌: ಗ್ಯಾರಂಟಿ ನೀಡಿದ ಪ್ರತಾಪ್ ಸಿಂಹ
ಹೆಚ್​ಡಿ ಕುಮಾರಸ್ವಾಮಿ, ಪ್ರತಾಪ್​ ಸಿಂಹ
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 30, 2024 | 6:30 PM

Share

ಮಂಡ್ಯ, ಮಾರ್ಚ್​ 30: ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ (JDS) ಒಂದಾದರೆ ಗೆಲುವು ನಿಶ್ಚಿತ. ಪ್ರೀತಿ, ವಿಶ್ವಾಸದಿಂದ ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ‌ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ‌ ಬಂದಿದೆ. ಬಿಎಸ್ ಯಡಿಯೂರಪ್ಪ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು. ಕೆಆರ್​ಎಸ್​ ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ. ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು. ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ. ಗುತ್ತಿಗೆದಾರನಿಗೆ ಮತ ನೀಡಿದರೆ ಕಾವೇರಿ ಉಳಿಯಲ್ಲ. ಕರುಣೆಯ ಕುಮಾರಣ್ಣನಿಗೆ ಮತ ನೀಡಿ ಎಂದಿದ್ದಾರೆ.

ಇದನ್ನೂ ಓದಿ: ಏ.3ರಂದು ಮಂಡ್ಯದಲ್ಲೇ ಸಭೆ ಮಾಡಿ ಅಲ್ಲೇ ರಾಜಕೀಯ ನಿರ್ಧಾರ ಘೋಷಣೆ: ಸಮಲತಾ ಸ್ಪಷ್ಟನೆ

ಅಸೆಂಬ್ಲಿಯಲ್ಲಿ ಜೆಡಿಎಸ್‌ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲುತ್ತಾರೆ. ಮಂಡ್ಯದವರು ಸ್ವಾಭಿಮಾನಿಗಳು. ಮಂಡ್ಯ, ಮೈಸೂರಿಗೆ ಅವಿನಾಭಾವ ಸಂಬಂಧ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಮಳೆ ಕೈ ಕೊಡುತ್ತದೆ. KRS ಬರಿದಾಗುತ್ತದೆ, ಎಚ್ಚರಿಕೆಯಿಂದ ಮತಚಲಾಯಿಸಿ ಎಂದು ಹೇಳಿದ್ದಾರೆ.

ಕಾವೇರಿ ಉಳಿಸಿಕೊಟ್ಟ ದೇವೇಗೌಡರ ಮಗ ಮಂಡ್ಯದಿಂದ ಸಂಸದರಾಗಬಾರದಾ?

ಶಿವರಾಮೇಗೌಡ ಸಂಸದರಾಗಿದ್ದಾಗ ಮಂಡ್ಯಕ್ಕೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಬರಲು ಶ್ರಮಿಸಿದ್ದೆ. ಮಂಡ್ಯಕ್ಕೂ ಒಳಿತಾಗಲೆಂದು ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕವನ್ನ ಆಳುವುದು ಹಳೇ ಮೈಸೂರು. ಈ ಬಾರಿಯೂ ನಮ್ಮ ಶಕ್ತಿ ಸಾಬೀತಾಗಬೇಕು. ಕುಮಾರಣ್ಣ ಗೆದ್ದು ಬರಬೇಕು.

ಇದನ್ನೂ ಓದಿ: ಮಂಡ್ಯ ಲೋಕಸಭಾ ಜಿದ್ದಾಜಿದ್ದಿ: ಸುಮಲತಾಗೆ ಎಚ್ಚರಿಕೆಯ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ

ಮೈಸೂರಿನಲ್ಲಿ ನೆಲೆ‌ ಕಳೆದುಕೊಂಡ ಸಿದ್ದರಾಮಯ್ಯ ಬಾದಾಮಿಗೆ ಹೋಗಬಹುದು. ವಯನಾಡ್‌ನಿಂದ ರಾಹುಲ್ ಸಂಸದರಾಗಬಹುದು. ಆದರೆ ಕಾವೇರಿ ಉಳಿಸಿಕೊಟ್ಟ ದೇವೇಗೌಡರ ಮಗ ಮಂಡ್ಯದಿಂದ ಸಂಸದರಾಗಬಾರದಾ? ಮಂಡ್ಯದ ಮಗನಾಗಿ ಕುಮಾರಣ್ಣ ಸ್ಪರ್ಧೆ ಮಾಡುತ್ತಾರೆ. ಎಲ್ಲರೂ ಒಟ್ಟಾಗಿ ಕುಮಾರಣ್ಣನನ್ನು ಗೆಲ್ಲಿಸೋಣ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.