ತುಮಕೂರು: ದಕ್ಷಿಣ ಕನ್ನದ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettur murder case) ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಭಗವದ್ಗೀತೆ ಪುಸ್ತಕ ರವಾನೆ ಮಾಡಲಾಗಿದೆ. ಭಗವದ್ಗೀತೆಯನ್ನು ಓದಿ ರಾಜಧರ್ಮ ಪಾಲಿಸುವಂತೆ ಸಂದೇಶ ಹೊತ್ತ ಪುಸ್ತಕವನ್ನು ತುಮಕೂರು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ (Tumkur) ರವಾನಿಸಿದ್ದಾರೆ. ಕೇವಲ ಕಠಿಣ ಕ್ರಮ ಎಂದು ಗೃಹ ಸಚಿವರು (Home Minister Araga Jnanendra) ಹೇಳಿದರೆ ಆಗಲ್ಲ; ಶ್ರೀಕೃಷ್ಣ ಯುದ್ಧ ಮಾಡುವಾಗ ಹೇಗಿರಬೇಕೆಂದು ಹೇಳಿದ್ದಾರೆ. ನಿರ್ವೀರ್ಯರಾಗಿ ಇರಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಗೃಹ ಸಚಿವರು ಇದನ್ನು ಓದಿ ತಮ್ಮ ಅಧಿಕಾರ ಬಳಸಿಕೊಳ್ಳಲಿ. ಭಗವದ್ಗೀತೆಯನ್ನು ಓದಿ ಧರ್ಮ ಕಾಪಾಡುವ ಬಗ್ಗೆ ತಿಳಿಯಲಿ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಕೇಶ್ ಆಶಿಸಿದ್ದಾರೆ.