ತಜ್ಞರ ಅಭಿಪ್ರಾಯ ಪಡೆಯದೆ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ವಯೋಮಿತಿ ನಿಗದಿ; ಕಾಂಗ್ರೆಸ್ ಆರೋಪ

ಪ್ರಸ್ತುತ 5 ವರ್ಷ 5 ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗಾಗಲೇ ರಾಜ್ಯದೆಲ್ಲೆಡೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ತಜ್ಞರ ಅಭಿಪ್ರಾಯ ಪಡೆಯದೆ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ವಯೋಮಿತಿ ನಿಗದಿ; ಕಾಂಗ್ರೆಸ್ ಆರೋಪ
ಸಾಂಧರ್ಬಿಕ ಚಿತ್ರ
TV9kannada Web Team

| Edited By: Sushma Chakre

Jul 28, 2022 | 2:40 PM

ಬೆಂಗಳೂರು: ಕರ್ನಾಟಕದಲ್ಲಿ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಅವರಿಗೆ 6 ವರ್ಷ ತುಂಬಿರಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ವಯೋಮಿತಿ ಆದೇಶದ ಪ್ರಕಾರ, 1ನೇ ತರಗತಿಗೆ ಸೇರವ ಮಕ್ಕಳಿಗೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಆದರೆ, ಈಗಾಗಲೇ ರಾಜ್ಯದೆಲ್ಲೆಡೆ (Karnataka) ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಶಿಕ್ಷಣ ಇಲಾಖೆ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದು, ಪೋಷಕರನ್ನು ಗೊಂದಲಕ್ಕೆ ದೂಡಿದೆ ಎಂದು ಕಾಂಗ್ರೆಸ್ (Congress) ಆರೋಪ ಮಾಡಿದೆ.

ರಾಜ್ಯ ಸರ್ಕಾರ 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಮೇ ತಿಂಗಳಿನಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ. ಈ ಆದೇಶ ಈ ವರ್ಷವೇ ಅನ್ವಯವಾಗುವುದೋ, ಮುಂದಿನ ವರ್ಷ ಜಾರಿಯಾಗುತ್ತದಾ ಎಂಬ ಸ್ಪಷ್ಟನೆಯನ್ನೂ ನೀಡಿಲ್ಲ.

Koo App

ರಾಜ್ಯ ಸರ್ಕಾರ 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಮೇ ತಿಂಗಳಿನಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ. ಈ ಆದೇಶ ಈ ವರ್ಷವೇ ಅನ್ವಯವಾಗುವುದೋ, ಮುಂದಿನ ವರ್ಷ ಜಾರಿಯಾಗುತ್ತದಾ ಎಂಬ ಸ್ಪಷ್ಟನೆಯನ್ನೂ ನೀಡಿಲ್ಲ. -@RameshBabuKPCC

ಕರ್ನಾಟಕ ಕಾಂಗ್ರೆಸ್ (@inckarnataka) 28 July 2022

ಇದನ್ನೂ ಓದಿ: Education: 6 ವರ್ಷ ತುಂಬಿದ್ದರೆ ಮಾತ್ರ 1ನೇ ತರಗತಿ ದಾಖಲಾತಿಗೆ ಅವಕಾಶ; ಹೊಸ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

ಪ್ರಸ್ತುತ ಇರುವ ಕಾನೂನಿನಂತೆ 5 ವರ್ಷ 5 ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗಾಗಲೇ ರಾಜ್ಯದೆಲ್ಲೆಡೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಲಾಗಿದೆ.

Koo App

ಪ್ರಸ್ತುತ ಇರುವ ಕಾನೂನಿನಂತೆ 5 ವರ್ಷ 5 ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗಾಗಲೇ ರಾಜ್ಯದೆಲ್ಲೆಡೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಈ ಸಂದರ್ಭದಲ್ಲಿ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಲಾಗಿದೆ. – @RameshBabuKPCC

ಕರ್ನಾಟಕ ಕಾಂಗ್ರೆಸ್ (@inckarnataka) 28 July 2022

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪರೀಕ್ಷಾ ಮಂಡಳಿಯ ಮೂಲಕ ಖಾಸಗಿ ಸಂಸ್ಥೆ ಬಳಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇಲಾಖೆಯ ಹಣವನ್ನು ವೈಯಕ್ತಿಕ ಹಾಗೂ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ಸಚಿವರಿಂದ ಆ ಹಣವನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Koo App

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪರೀಕ್ಷಾ ಮಂಡಳಿಯ ಮೂಲಕ ಖಾಸಗಿ ಸಂಸ್ಥೆ ಬಳಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇಲಾಖೆಯ ಹಣವನ್ನು ವೈಯಕ್ತಿಕ ಹಾಗೂ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ಸಚಿವರಿಂದ ಆ ಹಣವನ್ನು ಹಿಂಪಡೆಯಬೇಕು. – @RameshBabuKPCC

ಕರ್ನಾಟಕ ಕಾಂಗ್ರೆಸ್ (@inckarnataka) 28 July 2022

ಈ ಹಿಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಕರ್ನಾಟಕ ಸರ್ಕಾರ ಹೊಸ ವಯೋಮಿತಿಯನ್ನು ನಿಗದಿ ಮಾಡಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada