ಚಿಕ್ಕಬಳ್ಳಾಪುರ ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ನಾಯಿಯ ಸಹಾಯದಿಂದ ಪತ್ತೆ

|

Updated on: May 27, 2021 | 8:04 AM

ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ವಿಚಾರಣಾಧೀನ ಕೈದಿಯಾಗಿದ್ದ ಶಂಕರಪ್ಪ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಎಸ್ಕೇಪ್ ಆಗಿದ್ದ. ಸದ್ಯ ಜೈಲಿನ 200 ಮೀಟರ್ ದೂರದಲ್ಲೇ ಇದ್ದ ಲಾಯರ್ ಮನೆಯ ಬಳಿ ಸಿಕ್ಕಿಬಿದ್ದಿದ್ದಾನೆ.

ಚಿಕ್ಕಬಳ್ಳಾಪುರ ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ನಾಯಿಯ ಸಹಾಯದಿಂದ ಪತ್ತೆ
ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಅರೆಸ್ಟ್
Follow us on

ಚಿಕ್ಕಬಳ್ಳಾಪುರ: ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಜೈಲಿನ 200 ಮೀಟರ್ ದೂರದಲ್ಲೇ ಪತ್ತೆಯಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಣಿಯ ಜೈಲು ಬಳಿಯ ವಕೀಲರೊಬ್ಬರ ಮನೆಯ ಬಳಿ ಅವಿತುಕೊಂಡಿದ್ದ ಕೈದಿಯನ್ನ ನೋಡಿ ಮನೆಯಲ್ಲಿದ್ದ ನಾಯಿ ಬೊಗಳಿದ ಹಿನ್ನೆಲೆಯಲ್ಲಿ ವಕೀಲ ಪೊಲೀಸರಿಗೆ ಕೈದಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ಕೈದಿಯನ್ನು ವಶಕ್ಕೆ ಪಡೆದಿದ್ದಾರೆ. ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿ ಸಿನಿಮೀಯ ರೀತಿಯಲ್ಲಿ ಪತ್ತೆಯಾಗಿದ್ದಾನೆ.

ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ವಿಚಾರಣಾಧೀನ ಕೈದಿಯಾಗಿದ್ದ ಶಂಕರಪ್ಪ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಎಸ್ಕೇಪ್ ಆಗಿದ್ದ. ಸದ್ಯ ಜೈಲಿನ 200 ಮೀಟರ್ ದೂರದಲ್ಲೇ ಇದ್ದ ಲಾಯರ್ ಮನೆಯ ಬಳಿ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಬಳಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಕೈದಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಿನ್ನಿಂದ ಎಷ್ಟು ಟೆನ್ಷನ್ ಎಂದು ಥಳಿಸಿ ಸಮಾಧಾನ ಪಟ್ಟು ಕೈದಿಯನ್ನು ಚಿಂತಾಮಣಿ ನಗರಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಇನ್ನು ಜೈಲಿನ 30 ಅಡಿ ಎತ್ತರದ ಗೋಡೆ ಹತ್ತಿ ಜಿಗಿದಿದ್ದ ಹಿನ್ನೆಲೆಯಲ್ಲಿ ಕೈದಿ ಶಂಕರಪ್ಪ ಕಾಲುಗಳಿಗೆ ಗಂಭೀರ ಗಾಯವಾಗಿದ್ದು ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಕೈದಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ