AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದಲ್ಲಿ ಆರೋಗ್ಯಾಧಿಕಾರಿ ಸಾವು, ಕಣ್ಣ ಮುಂದೆ ಪ್ರಾಣ ಹೋಗುತ್ತಿದ್ದರೂ ಸಹಾಯಕ್ಕೆ ಮುಂದಾಗದ ಶಾಸಕ ಡಿ.ಎಸ್ ಸುರೇಶ್

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಘಟನೆಯಲ್ಲಿ ಕೊರೊನಾ ಡ್ಯೂಟಿ ಮುಗಿಸಿ‌ ಬರುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದ್ದು ಅವರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು.

ಅಪಘಾತದಲ್ಲಿ ಆರೋಗ್ಯಾಧಿಕಾರಿ ಸಾವು, ಕಣ್ಣ ಮುಂದೆ ಪ್ರಾಣ ಹೋಗುತ್ತಿದ್ದರೂ ಸಹಾಯಕ್ಕೆ ಮುಂದಾಗದ ಶಾಸಕ ಡಿ.ಎಸ್ ಸುರೇಶ್
ರಕ್ತದ ಮಡುವಿನಲ್ಲಿ ಆರೋಗ್ಯಾಧಿಕಾರಿ ಒದ್ದಾಡುತ್ತಿದ್ದರೂ ಕಾರಿನಲ್ಲಿ ಕುಳಿತಿರುವ ಶಾಸಕ
ಆಯೇಷಾ ಬಾನು
|

Updated on:May 27, 2021 | 12:36 PM

Share

ಚಿಕ್ಕಮಗಳೂರು: ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ರೂ ಸಹಾಯ ಮಾಡದೆ ಶಾಸಕ ಡಿ.ಎಸ್ ಸುರೇಶ್ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಘಟನೆಯಲ್ಲಿ ಕೊರೊನಾ ಡ್ಯೂಟಿ ಮುಗಿಸಿ‌ ಬರುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದ್ದು ಅವರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲೇ ಒದ್ದಾಡಿದ್ದಾರೆ. ಆದರೆ ಈ ವೇಳೆ ನೋವಿನಿಂದ ಹಿರಿಯ ಆರೋಗ್ಯಾಧಿಕಾರಿ ಬಳಲುತ್ತಿದ್ದರು ತರೀಕೆರೆ ಶಾಸಕ‌ ಡಿ.ಎಸ್ ಸುರೇಶ್ ಕಾರಿನಿಂದ ಕೆಳಗಿಳಿಯದೇ ಸುಮ್ಮನಾಗಿದ್ದಾರೆ.

ಆರೋಗ್ಯಾಧಿಕಾರಿಯ ಜೀವ ರಕ್ಷಿಸುವ ಕೆಲಸ ಮಾಡಿಲ್ಲ. ಅಮಾನವೀಯವಾಗಿ ವರ್ತಿಸಿದ್ದಾರೆ. ಶಾಸಕ‌ ಸುರೇಶ್ರ ಈ ನಡೆಗೆ ಸ್ಥಳದಲ್ಲಿಯೇ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿಯೇ ವೈದ್ಯ ಡಾ.ರಮೇಶ್ ಕುಮಾರ್ ಸಾವನ್ನಪ್ಪಿದ್ದರು. ಕಣ್ಣ ಮುಂದೆ ಪ್ರಾಣ ಹೋಗ್ತಿದ್ರೂ ಮಾನವೀಯತೆ ತೋರದ ಶಾಸಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ನಾನು ನಿದ್ದೆಗೆ ಜಾರಿದ್ದೆ -ಶಾಸಕ ಸ್ಪಷ್ಟನೆ ಇನ್ನು ಅಪಘಾತದಲ್ಲಿ ಗಾಯಗೊಂಡು ನರಳಾಡಿ ವೈದ್ಯ ಸಾವು ಘಟನೆಯ ಬಗ್ಗೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಕಣ್ಣಿನ ನೋವು ಇದ್ದ ಹಿನ್ನೆಲೆಯಲ್ಲಿ ಕಾರಿನಿಂದ ಇಳಿಯಲಿಲ್ಲ. ನಾನು ನಿದ್ದೆಗೆ ಜಾರಿದ್ದೆ, ನನ್ನ ಕಾರು ಚಾಲಕ ನೆರವಿಗೆ ಹೋಗಿದ್ದ. ಕೆಲವೇ ನಿಮಿಷಗಳಲ್ಲಿ ವೈದ್ಯರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದೇ ವೇಳೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ನಾನು ಸಹಾಯಕ್ಕೆ ಹೋಗಿಲ್ಲ ಎಂಬಂತೆ ಬಿಂಬಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಘಟನೆಯ ಬಗ್ಗೆ ವಿಡಿಯೋ ಮೂಲಕ ಶಾಸಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Akshay Kumar: ಅಕ್ಷಯ್​ ಕುಮಾರ್​ ಕಡೆಯಿಂದ ದೊರಕಿತು ಮತ್ತೊಂದು ದೊಡ್ಡ ಸಹಾಯ

Published On - 7:31 am, Thu, 27 May 21

‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್