ಚಿಕ್ಕಬಳ್ಳಾಪುರ ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ

ಸಂಜೆ ಜೈಲಿನ ವಾರ್ಡ್​ಗಳನ್ನು ಬೀಗ ಹಾಕುವ ಸಂದರ್ಭದಲ್ಲಿ ನೋಡಿದಾಗ ಶಂಕರಪ್ಪ ಕಾಣಿಸಿಲ್ಲ. ಜೈಲಿನ ಸುತ್ತಮುತ್ತ ಒಳಗೆ, ಹೊರಗೆ ಎಲ್ಲಿಯೂ ಶಂಕರಪ್ಪ ಕಾಣಿಸದ ಕಾರಣ ಜೈಲಿನ ಅದೀಕ್ಷಕ ಸೋಮುಸಿಂಗ್ ಬಿ.ಎಲ್.ಚಿಂತಾಮಣಿ ನಗರ ಠಾಣೆ ಪೊಲೀಸರು ದೂರು ನೀಡಿದ್ದಾರೆ.

ಚಿಕ್ಕಬಳ್ಳಾಪುರ ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ
ಖೈದಿ ಶಂಕರಪ್ಪ, ಕಾರಾಗೃಹ
Follow us
sandhya thejappa
|

Updated on:May 26, 2021 | 2:40 PM

ಚಿಕ್ಕಬಳ್ಳಾಪುರ: ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ವಿಚಾರಣಾಧೀನ ಕೈದಿಯಾಗಿದ್ದ ವ್ಯಕ್ತಿಯೊರ್ವ ಜಿಲ್ಲೆಯ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಪರಾರಿಯಾಗಿದ್ದಾನೆ. 29 ವರ್ಷದ ಶಂಕರಪ್ಪ ಪರಾರಿಯಾಗಿರುವ ವಿಚಾರಣಾಧೀನ ಕೈದಿ. ಪ್ಲಂಬಿಂಗ್ ಕೆಲಸದಲ್ಲಿ ಪಳಗಿದ್ದ ಅಸಾಮಿಯನ್ನು ಪ್ರತಿದಿನ ಸ್ಯಾನಿಟೈಜ್ ಹಾಗೂ ಸ್ವಚ್ಛತೆ ಮಾಡಲು ಜೈಲಿನಲ್ಲಿ ಬಳಸಿಕೊಳ್ಳುತ್ತಿದ್ದರು. ಪ್ರತಿದಿನದಂತೆ ನಿನ್ನೆ ಸಂಜೆಯೂ ಜೈಲಿನ ವಾರ್ಡನ್ನು ಸ್ಯಾನಿಟೈಜ್ ಮಾಡಲು ಶಂಕರಪ್ಪ ಹಾಗೂ ಸುನಿಲ್ ಕುಮಾರ್ಗೆ ಜವಾಬ್ದಾರಿ ವಹಿಸಿದ್ದಾರೆ. ಈ ವೇಳೆ ಶಂಕರಪ್ಪ ಸ್ಯಾನಿಟೈಜ್ ಮಾಡುವ ನೆಪ ಹಾಗೂ ನೀರಿನ ಪೈಪ್ ಸ್ವಚ್ಛಗೊಳಿಸುವ ನೆಪದಲ್ಲಿ ಜೈಲಿನ 20 ಅಡಿ ಪೈಪನ್ನು ಹತ್ತಿ ಜೈಲಿನ ಗೊಡೆಯನ್ನು ಧುಮುಖಿ ಪರಾರಿಯಾಗಿದ್ದಾನೆ.

ಸಂಜೆ ಜೈಲಿನ ವಾರ್ಡ್​ಗಳನ್ನು ಬೀಗ ಹಾಕುವ ಸಂದರ್ಭದಲ್ಲಿ ನೋಡಿದಾಗ ಶಂಕರಪ್ಪ ಕಾಣಿಸಿಲ್ಲ. ಜೈಲಿನ ಸುತ್ತಮುತ್ತ ಒಳಗೆ, ಹೊರಗೆ ಎಲ್ಲಿಯೂ ಶಂಕರಪ್ಪ ಕಾಣಿಸದ ಕಾರಣ ಜೈಲಿನ ಅದೀಕ್ಷಕ ಸೋಮುಸಿಂಗ್ ಬಿ.ಎಲ್.ಚಿಂತಾಮಣಿ ನಗರ ಠಾಣೆ ಪೊಲೀಸರು ದೂರು ನೀಡಿದ್ದಾರೆ. ಇದರಿಂದ ಚಿಂತಾಮಣಿ ನಗರ ಠಾಣೆ ಪೊಲೀಸರು ವಿಚಾರಣಾಧೀನ ಕೈದಿ ವಿರುದ್ಧ ಐ.ಪಿ.ಸಿ ಸೆಕ್ಷನ್ 223 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವಿಚಾರಣಾಧೀನ ಕೈದಿ ಶಂಕರಪ್ಪ ಮೂಲತಃ ಆಂಧ್ರ ಪ್ರದೇಶದ ಇರುವಾರಪಲ್ಲಿ ನಿವಾಸಿ. 29 ವರ್ಷದ ಶಂಕರಪ್ಪ ನವೆಂಬರ್ 2020ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ ರೈತ ಮಹಿಳೆ ಶೋಬಾ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿ ಆಕೆ ಸಹಕರಿಸಲಿಲ್ಲ ಅಂತ ಕತ್ತು ಹಿಸಕಿ ಕೊಲೆ ಮಾಡಿದ್ದ. ನಂತರ ಮೃತಳ ಶವದ ಮೇಲೆ ಅತ್ಯಾಚಾರ ಎಸಗಿ ನಾಪತ್ತೆಯಾಗಿದ್ದ. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಂದಿನಿಂದ ಇಂದಿನವರೆಗೂ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಶಂಕರಪ್ಪ, ಜೈಲು ಅಧಿಕಾರಿಗಳ ಜೊತೆ ಸಲುಗೆಯಿಂದ ವರ್ತಿಸುತ್ತಾ… ಜೈಲಿನ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಅಧಿಕಾರಿಗಳ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ನಿನ್ನೆ ಸಂಜೆ ಪರಾರಿಯಾಗಿದ್ದಾನೆ.

ಚಿಂತಾಮಣಿಯ ತಾಲೂಕಿನ ಉಪ ಕಾರಾಗೃಹದಲ್ಲಿ ಕೈದಿ ಪರಾರಿಯಾದ ವಿಷಯ ತಿಳಿದ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಕೇಂದ್ರ ಕಾರಾಗೃಹ ಬೆಂಗಳೂರಿನ ಮುಖ್ಯ ಅದೀಕ್ಷಕ ಡಾ.ರಂಗನಾಥ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಅಧಿಕಾರಿಗಳ ಲೋಪದೋಷದ ಬಗ್ಗೆಯೂ ತನಿಖೆ ನಡೆಸಿದ್ದು, ಲೋಪದೋಷ ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದನ್ನೂ ಓದಿ

ಮಂಗಳೂರಿನ ಅಗ್ನಿಶಾಮಕ ಸಿಬ್ಬಂದಿಗಳಲ್ಲೂ ಕೊರೊನಾತಂಕ; ಕೊರೊನಾ ವಾರಿಯರ್ಸ್​ಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಆಗ್ರಹ

ಬಸವನಗುಡಿ, ಬಿಟಿಎಂ ಲೇಔಟ್ ಸೇರಿದಂತೆ ನಗರದ ಕೊರೊನಾ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಕೆ

(Prisoner escapes from chikkaballapur Prison)

Published On - 2:39 pm, Wed, 26 May 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ