ಬಸವನಗುಡಿ, ಬಿಟಿಎಂ ಲೇಔಟ್ ಸೇರಿದಂತೆ ನಗರದ ಕೊರೊನಾ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಕೆ
ಕೊರೊನಾ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಕೆಗೆ ಸರ್ಕಾರ ಮೂಂದಾಗಿದ್ದು ಬೆಂಗಳೂರಿನ ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರದ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಸಲಾಗುತ್ತಿದೆ. ಜೊತೆಗೆ ಹೋಂ ಕ್ವಾರಂಟೈನ್, ಮೈಕ್ರೋ ಕಂಟೇನ್ಮೆಂಟ್‌ಗೂ ಮಾರ್ಕ್ ಮಾಡಲಾಗುತ್ತಿದೆ.
ಕೊರೊನಾ ಮಹಾಮಾರಿಯ 2ನೇ ಅಲೆ ಇಡೀ ದೇಶವನ್ನು ನಡುಗಿಸಿದೆ. ಸದ್ಯ ಲಾಕ್ಡೌನ್ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಈಗ ಕೊರೊನಾ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಕೆಗೆ ಸರ್ಕಾರ ಮೂಂದಾಗಿದ್ದು ಬೆಂಗಳೂರಿನ ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರದ ಸೋಂಕಿತರ ಮನೆಗಳಿಗೆ ರೆಡ್ ಟೇಪ್ ಅಳವಡಿಸಲಾಗುತ್ತಿದೆ. ಜೊತೆಗೆ ಹೋಂ ಕ್ವಾರಂಟೈನ್ನಲ್ಲಿರುವವರ ಕೈಗೆ ಸೀಲ್ ಹಾಕಲಾಗುತ್ತಿದೆ. ಮೈಕ್ರೋ ಕಂಟೇನ್ಮೆಂಟ್‌ಗೂ ಮಾರ್ಕ್ ಮಾಡಲಾಗುತ್ತಿದೆ.
ಐಸೋಲೇಷನ್ನಲ್ಲಿರುವವರ ಮನೆಗಳಿಗೆ ‘ರೆಡ್ ಟೇಪ್’ ಇನ್ನು ಐಸೋಲೇಷನ್ನಲ್ಲಿ ಇರುವವರ ಮನೆಗಳಿಗೆ ರೆಡ್ ಟೇಪ್ ಅಳವಡಿಸಲು ರಾಜ್ಯ ಸರ್ಕಾರ ಈ ಹಿಂದೆ ತೀರ್ಮಾನಿಸಿತ್ತು. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರ ಸಭೆ ನಡೆಸಿ ಸಿಎಂ ಈ ಸೂಚನೆ ನೀಡಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಇನ್ನು ಐಸೋಲೇಷನ್ನಲ್ಲಿ ಇರುವವರ ಮನೆಗಳಿಗೆ ರೆಡ್ ಟೇಪ್ ಅಳವಡಿಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದ್ದರು.
ಒಟ್ನಲ್ಲಿ ಕೊರೊನಾ 2ನೇ ಅಲೆ ಆರಂಭದಲ್ಲಿ ಸುಮ್ಮನಿದ್ದ ರಾಜ್ಯ ಸರ್ಕಾರ ಸಾವಿರಾರು ಜನ ಪ್ರಾಣತೆತ್ತ ಬಳಿಕ ಎಚ್ಚೆತ್ತುಕೊಂಡಿದೆ. ಕೊರೊನಾ 2ನೇ ಅಲೆ ಅಬ್ಬರ ಕಡಿಮೆಯಾಗೋ ವೇಳೆಗೆ ಎಚ್ಚೆತ್ತುಕೊಂಡು ಫೀಲ್ಡಿಗಿಳಿದಿದೆ. ಹೋಮ್ ಐಸೋಲೇಷನ್ನಲ್ಲಿದ್ದವರ ಆರೋಗ್ಯ ಸ್ಥಿತಿ ಗಂಭೀರವಾಗ್ತಿದ್ದಾಗ ಕಣ್ಣೆತ್ತಿ ನೋಡದ ಸರ್ಕಾರ, ಇದೀಗ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: HS Doreswamy Passes Away: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನಿಧನ